ETV Bharat / bharat

ಇನ್ನೂ ಕೋವಿಡ್​ ಲಸಿಕೆ ಪಡೆಯದ 1,707 ಬೋಧಕ-ಬೋಧಕೇತರ ಸಿಬ್ಬಂದಿ: ಕೇರಳ ಸರ್ಕಾರದಿಂದ ಕಠಿಣ ಕ್ರಮ - ಕೋವಿಡ್​ ಲಸಿಕೆ ಪಡೆಯದ ಕೇರಳದ ಬೋಧಕ-ಬೋಧಕೇತರ ಸಿಬ್ಬಂದಿ

ಕೇರಳದಲ್ಲಿ ಸಂಪೂರ್ಣ ಕೋವಿಡ್​ ಲಸಿಕೆ ಪಡೆಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ.

teaching and non-teaching staff
ಬೋಧಕ-ಬೋಧಕೇತರ ಸಿಬ್ಬಂದಿ
author img

By

Published : Dec 4, 2021, 3:56 PM IST

ತಿರುವನಂತಪುರಂ (ಕೇರಳ): ದೇಶದಲ್ಲಿ ನಿತ್ಯ ವರದಿಯಾಗುತ್ತಿರುವ ಹೊಸ ಕೋವಿಡ್​ ಪ್ರಕರಣಗಳು ಹಾಗೂ ಸಾವಿನ ಪೈಕಿ ಕೇರಳ ರಾಜ್ಯದ್ದೇ ಸಿಂಹಪಾಲಿರುತ್ತದೆ. ಒಂದೆಡೆ ಶಾಲಾ-ಕಾಲೇಜುಗಳು ಪುನಾರಂಭವಾಗಿದ್ದು, ಮತ್ತೊಂದೆಡೆ ಒಮಿಕ್ರಾನ್​ ರೂಪಾಂತರಿಯ ಭೀತಿ ಎದುರಾಗಿದೆ. ಹೀಗಿರುವಾಗ ರಾಜ್ಯದಲ್ಲಿ 1,707 ಮಂದಿ ಬೋಧಕ-ಬೋಧಕೇತರ ಸಿಬ್ಬಂದಿ ಇನ್ನೂ ಕೂಡ ಸಂಪೂರ್ಣವಾಗಿ ಕೊರೊನಾ ಲಸಿಕೆ ಪಡೆದಿಲ್ಲ.

ಹೀಗಾಗಿ ಇವರ ವಿರುದ್ಧ ಕೇರಳ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದೆ. ಎರಡೂ ಡೋಸ್​ ಪಡೆಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪಟ್ಟಿಯನ್ನು ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಇಂದು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: Omicron: ದೇಶದಲ್ಲಿ ಮೊತ್ತೊಂದು ಒಮಿಕ್ರಾನ್ ಕೇಸ್​​​ ದೃಢ

ಕೆಲ ಆರೋಗ್ಯ ಸಮಸ್ಯೆಗಳಿಂದ ಲಸಿಕೆ ಪಡೆಯದ ಸಿಬ್ಬಂದಿ ಶಾಲೆಗಳಿಗೆ ಆರ್‌ಟಿ - ಪಿಸಿಆರ್ ನೆಗೆಟಿವ್ ವರದಿ ತೆಗೆದುಕೊಂಡು ಬರಬೇಕು. ಕೇವಲ ಒಂದು ಬಾರಿ ಅಲ್ಲ, ವಾರಕ್ಕೊಮ್ಮೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ವರದಿ ತರಬೇಕು ಎಂದು​ ಸೂಚನೆ ನೀಡಿದ್ದಾರೆ. ಉಳಿದವರು ಇನ್ನೂ ಲಸಿಕೆಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲ ಎಂದರೆ ವೇತನ ರಹಿತ ರಜೆ ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.