ETV Bharat / bharat

ದೆಹಲಿಯಲ್ಲಿ ಹೀನ ಕೃತ್ಯ: ಅಕ್ಕನ ಎದುರೇ ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿ - ಅಪ್ರಾಪ್ತ ತಂಗಿ ಮೇಲೆ ದುಷ್ಕರ್ಮಿಯೋರ್ವ ಅತ್ಯಾಚಾರ

ಅಕ್ಕನ ಕಣ್ಣ ಮುಂದೆಯೇ ಅಪ್ರಾಪ್ತ ತಂಗಿ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿ ಪರಾರಿಯಾದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಅಶೋಕ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

rape
ರೇಪ್​
author img

By

Published : Apr 5, 2023, 8:42 AM IST

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಅಶೋಕ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿ ಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ದರೋಡೆ ಮಾಡಲು ಬಂದ ದುಷ್ಕರ್ಮಿಯೊಬ್ಬ ಬಾಲಕಿಯನ್ನು ಆಕೆಯ ಅಕ್ಕನ ಎದುರೇ ಅತ್ಯಾಚಾರ ಮಾಡಿರುವ ಹೀನ ಘಟನೆ ನಡೆದಿದೆ. ಜೊತೆಗೆ, ಸ್ಥಳದಲ್ಲೇ ಇದ್ದ ಸಂತ್ರಸ್ತೆಯ ಸಹೋದರಿಗೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ವಾಸ ಮಾಡುತ್ತಿದ್ದ ಸಂತ್ರಸ್ತೆಯ ಕುಟುಂಬ : ಮಾಹಿತಿ ಪ್ರಕಾರ, ಅಶೋಕ್ ವಿಹಾರ್ ಪ್ರದೇಶದಲ್ಲಿ ಸರ್ಕಾರಿ ಶಾಲೆಯ ನವೀಕರಣ ಕಾರ್ಯ ನಡೆಯುತ್ತಿದೆ. ಇಲ್ಲಿ ಕಟ್ಟಡ ಕೂಲಿ ಕಾರ್ಮಿಕರೊಬ್ಬರು ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ವಾಸವಿದ್ದರು. ಕೆಲ ದಿನಗಳಿಂದ ದುರಸ್ತಿ ಕಾರ್ಯ ಸ್ಥಗಿತಗೊಂಡಿದ್ದರಿಂದ ಕೂಲಿ ಕಾರ್ಮಿಕ ತನ್ನ ಪತ್ನಿಯೊಂದಿಗೆ ಸುತ್ತಮುತ್ತಲಿನ ಪ್ರದೇಶಕ್ಕೆ ಕೆಲಸಕ್ಕೆಂದು ತೆರಳಿದ್ದರು. ಈ ವೇಳೆ 16 ವರ್ಷ 18 ವರ್ಷದ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಮನೆಯಲ್ಲಿದ್ದರು.

ಇದನ್ನೂ ಓದಿ : ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ.. ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು

ಚಾಕು ತೋರಿಸಿ ಅತ್ಯಾಚಾರ ಎಸಗಿದ ಆರೋಪಿ : ಅಕ್ಕ - ತಂಗಿಯರಿಬ್ಬರಿಗೂ ಕೊಲೆ ಬೆದರಿಕೆ ಹಾಕಿದ ಯುವಕ ಕೊಠಡಿಗೆ ನುಗ್ಗಿ ಮೊಬೈಲ್ ಫೋನ್​ ಸೇರಿದಂತೆ ಇತ್ಯಾದಿ ವಸ್ತುಗಳನ್ನು ದೋಚಿದ್ದಾನೆ. ಬಳಿಕ ಅಡುಗೆ ಮನೆಯಲ್ಲಿದ್ದ ಚಾಕು ತೋರಿಸಿ ಅಕ್ಕನ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಸ್ಥಳದಿಂದ ಕಾಲ್ಕಿತ್ತ ನಂತರ ಸಂತ್ರಸ್ತೆಯು ತಂದೆಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಅಪ್ರಾಪ್ತೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ : ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿ ಮೇಲೆ ಅತ್ಯಾಚಾರ

ಮಹಿಳಾ ರೋಗಿ ಮೇಲೆ ಅತ್ಯಾಚಾರ : ಇನ್ನು ವ್ಯಕ್ತಿಯೋರ್ವ ಮಹಿಳೆಯರ ವಾರ್ಡ್​ಗೆ ನುಗ್ಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕಳೆದ ಮಾರ್ಚ್​ 18 ರಂದು ಮೈಸೂರು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿತ್ತು. ಬಳಿಕ ಸಾರ್ವಜನಿಕರೇ ಅತ್ಯಾಚಾರ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಇದನ್ನೂ ಓದಿ : ಪಾರ್ಟಿ ನೆಪದಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರ ಯತ್ನ; ಬೆಂಗಳೂರಲ್ಲಿ ಆರೋಪಿಗಳ ಬಂಧನ

ರಾತ್ರಿ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ತೆರಳಿದ್ದ ಆರೋಪಿ ಮೆಹಬೂಬ್ ಪಾಷಾ, ರಾತ್ರಿಯೆಲ್ಲ ಆಸ್ಪತ್ರೆಯಲ್ಲಿ ಓಡಾಡಿದ್ದ. ಬಳಿಕ ಮಹಿಳೆಯರ ವಾರ್ಡ್​ಗೆ ನುಗ್ಗಿದ್ದ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 36 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.