ಧೋಲ್ಪುರ್: ತೋಟವೊಂದರಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ನಾಲ್ವರು ದರೋಡೆಕೋರರು ಅತ್ಯಾಚಾರ ಎಸಗಿರುವ ಘಟನೆ ಮನಿಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
16 ವರ್ಷದ ಸಹೋದರಿ ಶನಿವಾರ ರಾತ್ರಿ ಗ್ರಾಮದ ಹೊರಗಿನ ತೋಟಕ್ಕೆ ಬಹಿರ್ದೆಸೆಗೆ ತೆರಳಿದ್ದಳು. ಅಲ್ಲಿ ಗ್ರಾಮದ ನಾಲ್ವರು ಯುವಕರು ಬಾಲಕಿಯನ್ನು ತಡೆದು ಆಕೆಯ ಮೇಲೆ ಅತ್ಯಾಚಾರ ಎಸಗಲು ಮಂದಾಗಿದ್ದರು. ಈ ವೇಳೆ, ನಾನು ನನ್ನ ಕಿರಿಯ ಸಹೋದರಿಯನ್ನು ಕಾಪಾಡಲು ಮುಂದಾದಾಗ ಅವರು ನನ್ನ ಮೇಲೆ ಹಲ್ಲೆ ಮಾಡಿ ಬಟ್ಟೆ ಹರಿದು ಹಾಕಿದರು. ಅತ್ಯಾಚಾರಿಗಳಿಂದ ನನ್ನ ಸಹೋದರಿ ಕಾಪಾಡಲು ಸಾಧ್ಯವಾಗಿಲ್ಲ ಎಂದು ಸಂತ್ರಸ್ತೆ ಬಾಲಕಿಯ ಸಹೋದರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುಮಾರು 30 ನಿಮಿಷಗಳ ನಂತರ ಆರೋಪಿಗಳು ಈ ವಿಷಯ ಬಹಿರಂಗ ಪಡಿಸಿದರೆ ನಿಮ್ಮಿಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿ ಮನೆಗೆ ಕಳುಹಿಸಿದ್ದರು. ನಾವು ಮನೆ ತಲುಪಿದ ಬಳಿಕ ನಡೆದ ಸಂಗತಿಯನ್ನು ಕುಟುಂಬಸ್ಥರಿಗೆ ತಿಳಿಸಿದ್ದೇವೆ ಎಂದು ದೂರಿನಲ್ಲಿ ಸಂತ್ರಸ್ತೆ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಸಂತ್ರಸ್ತೆಯರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಅತ್ಯಾಚಾರದ ಸಂಗತಿಗಳು ದೃಢವಾಗಿದ್ದರೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ದುಷ್ಕೃತ್ಯದ ದೋಷಾರೋಪಣೆ ದಾಖಲಿಸುವ ಮೂಲಕ ಆರೋಪಿಗಳ ವಿರುದ್ಧ ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.