ಲಕ್ನೋ (ಉತ್ತರ ಪ್ರದೇಶ) : 2020 ರಿಂದೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ 16 ಗ್ಯಾಂಗ್ಸ್ಟರ್ಗಳು ಮತ್ತು ಅವರ ಗ್ಯಾಂಗ್ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 42 ವಿಭಿನ್ನ ಪ್ರಕರಣಗಳಲ್ಲಿ 19 ಮಾಫಿಯಾ ಡಾನ್ಗಳು ಸೇರಿದಂತೆ 55 ಇತರರಿಗೆ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ಅಥವಾ ವಿವಿಧ ಬಗೆಯ ಶಿಕ್ಷೆ ವಿಧಿಸಲಾಗಿದೆ. ರಾಜ್ಯದ ಪೊಲೀಸರು ಜನವರಿ 2020 ರ ನಂತರ ಸುಮಾರು ಮೂರೂವರೆ ವರ್ಷಗಳಲ್ಲಿ 69 ಮಾಫಿಯಾ ಡಾನ್ಗಳು ಮತ್ತು ಅವರ 1,153 ಗ್ಯಾಂಗ್ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
ಯುಪಿ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಮಹಾನಿರ್ದೇಶಕ (ಎಸ್‌ಡಿಜಿ) ಪ್ರಶಾಂತ್ ಕುಮಾರ್ ಮಾತನಾಡಿ, ಜನವರಿ 2020 ರಿಂದೀಚೆಗೆ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ವಿರುದ್ಧ ರಾಜ್ಯ ಪೊಲೀಸರು ಕಠಿಣವಾಗಿ ವರ್ತಿಸಿದ್ದಾರೆ ಮತ್ತು ಕ್ರಿಮಿನಲ್‌ಗಳು ಸಂಗ್ರಹಿಸಿದ ಮತ್ತು ಆಕ್ರಮಿಸಿಕೊಂಡಿದ್ದ 3,516 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನಾಶ ಮಾಡಲಾಗಿದೆ ಅಥವಾ ಅಕ್ರಮ ಹಿಡಿತದಿಂದ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು. ಇದಲ್ಲದೆ, ವಿವಿಧ ಸರ್ಕಾರಿ ಗುತ್ತಿಗೆಗಳು ಮತ್ತು ಇತರ ಉದ್ಯೋಗಗಳಲ್ಲಿ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ಒಳಗೊಳ್ಳುವಿಕೆಯನ್ನು ತಡೆಯಲಾಗಿದ್ದು, ಇದರಿಂದಾಗಿ ಅವರಿಗೆ 1,424 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅವರು ಹೇಳಿದರು.
ಮಾಫಿಯಾಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ 650 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಅವರಲ್ಲಿ ಕನಿಷ್ಠ 549 ಮಂದಿಯನ್ನು ಬಂಧಿಸಲಾಗಿದೆ. ಗೂಂಡಾ ಕಾಯ್ದೆಯಡಿ 239, ದರೋಡೆಕೋರರ ಕಾಯ್ದೆಯಡಿ 704 ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 18 ಪ್ರಕರಣಗಳನ್ನು ದಾಖಲಿಸಲಾಗಿದೆ. 110G ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ನಿಬಂಧನೆಗಳ ಅಡಿಯಲ್ಲಿ 336 ಜನರ ವಿರುದ್ಧ ನಿರ್ಬಂಧಕಾರಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದರು.
ಅದೇ ರೀತಿ ಪೊಲೀಸ್ ದಾಖಲೆಗಳಲ್ಲಿ 92 ಹೊಸ ಕ್ರಿಮಿನಲ್ ಗ್ಯಾಂಗ್‌ಗಳು ದಾಖಲಾಗಿದ್ದು, ಗ್ಯಾಂಗ್‌ನ ಮುಖಂಡರು ಮತ್ತು ಸದಸ್ಯರ ಮೇಲೆ ನಿಗಾವನ್ನು ತೀವ್ರಗೊಳಿಸಲಾಗಿದೆ. 404 ಕ್ರಿಮಿನಲ್‌ಗಳ ವಿರುದ್ಧ ರೌಡಿ ಶೀಟರ್ ತೆರೆಯಲಾಗಿದೆ ಮತ್ತು ಅವರಲ್ಲಿ 83 ಜನರ ವಿರುದ್ಧ ‘ಜಿಲಾ ಬದರ್’ (ನಿರ್ದಿಷ್ಟ ಜಿಲ್ಲೆಯಿಂದ ನಿಯಮಿತ ಅಪರಾಧಿಗಳನ್ನು ನಿರ್ದಿಷ್ಟ ಅವಧಿಗೆ ಉಚ್ಚಾಟನೆ) (ಗಡೀಪಾರು) ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು 25 ಅಪರಾಧಿಗಳ ಜಾಮೀನು ರದ್ದುಗೊಳಿಸಲಾಗಿದೆ ಮತ್ತು ಅವರನ್ನು ಮರಳಿ ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಎನ್‌ಕೌಂಟರ್ ಕಿಲ್ಲಿಂಗ್ ಎನ್ನುವುದು 20ನೇ ಶತಮಾನದ ಉತ್ತರಾರ್ಧದಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ ಪೊಲೀಸ್ ಅಥವಾ ಸಶಸ್ತ್ರ ಪಡೆಗಳಿಂದ ಆತ್ಮರಕ್ಷಣೆಗಾಗಿ ನಡೆಸಿದ ಕಾನೂನುಬಾಹಿರ ಹತ್ಯೆಗಳನ್ನು ವಿವರಿಸಲು ಬಳಸಲಾಗುವ ಪದವಾಗಿದೆ.
ಇದನ್ನೂ ಓದಿ : Journalist abducted: ಗುಂಡಿನ ದಾಳಿಯಾದರೂ ಅದೃಷ್ಟವಶಾತ್ ಬದುಕುಳಿದ ಪತ್ರಕರ್ತ: ಗ್ವಾಲಿಯರ್ನಲ್ಲಿ ಆತಂಕಕಾರಿ ಘಟನೆ!