ETV Bharat / bharat

ನಿರ್ಬಂಧವಿದ್ದರೂ ಸಂಚರಿಸಿತು ಬೃಹತ್ ಲಾರಿ.. ಮುರಿದು ಬಿತ್ತು ಬ್ರಿಟಿಷರ ಕಾಲದ ಸೇತುವೆ - ಬ್ರಿಟಿಷರ ಕಾಲದ ಸೇತುವೆ

150 ವರ್ಷಗಳಷ್ಟು ಹಳೆಯದಾದ ಸೇತುವೆಯ ಮೇಲೆ ತುಟಾಪುಲ್ ಕಡೆಯಿಂದ ಸರಕು ತುಂಬಿಕೊಂಡು ಬರುತ್ತಿದ್ದ ಲಾರಿ, ಸೇತುವೆಯ ಇನ್ನೊಂದು ಬದಿ ತಲುಪಿದಾಗ ಬ್ರಿಡ್ಜ್​ ಮುರಿದಿದೆ. ಸದ್ಯ ಸೇತುವೆ ಮುರಿದಿರುವುದರಿಂದ ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ.

150 ವರ್ಷ ಹಳೆಯ ಸೇತುವೆ
150 ವರ್ಷ ಹಳೆಯ ಸೇತುವೆ
author img

By

Published : May 20, 2021, 8:24 PM IST

ಪಾಟ್ನಾ (ಬಿಹಾರ್​): ಜಿಲ್ಲೆಯ ಫತುಹಾ ಪೊಲೀಸ್ ಠಾಣೆ ಪ್ರದೇಶದ ಗೋವಿಂದಪುರ ಮತ್ತು ಸಮ್ಮಸ್ಪುರ ರಸ್ತೆಯನ್ನು ಸಂಪರ್ಕಿಸುವ ಬ್ರಿಟಿಷರ ಕಾಲದ ಸೇತುವೆ ಮುರಿದು ಬಿದ್ದಿದೆ.

150 ವರ್ಷ ಹಳೆಯದಾದ ಸೇತುವೆಯ ಮೇಲೆ ಬೃಹತ್ ಗಾತ್ರದ ಲಾರಿ ಸಂಚರಿಸಿದ ಪರಿಣಾಮ ಸೇತುವೆ ಮುರಿದು ಬಿದ್ದಿದ್ದು, ಲಾರಿ ಸಹ ನದಿ ದಂಡೆಗೆ ಅಪ್ಪಳಿಸಿದೆ. ಅಪಘಾತದಲ್ಲಿ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್​ ಗಾಯಗೊಂಡಿದ್ದಾರೆ.

ಮುರಿದು ಬಿತ್ತು ಬ್ರಿಟಿಷರ ಕಾಲದ ಸೇತುವೆ

150 ವರ್ಷದಷ್ಟು ಹಳೆಯಾದ ಈ ಸೇತುವೆಯ ಮೇಲೆ ತುಟಾಪುಲ್ ಕಡೆಯಿಂದ ಸರಕು ತುಂಬಿಕೊಂಡು ಬರುತ್ತಿದ್ದ ಲಾರಿ, ಸೇತುವೆಯ ಇನ್ನೊಂದು ಬದಿ ತಲುಪಿದಾಗ ಬ್ರಿಡ್ಜ್​ ಮುರಿದು ಬಿದ್ದಿದೆ. ಸದ್ಯ ಸೇತುವೆ ಮುರಿದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಹಲವು ವರ್ಷದಿಂದ ಸೇತುವೆ ಶಿಥಿಲಾವಸ್ಥೆ ತಲುಪಿದ್ದರೂ ದುರಸ್ತಿ ಕಾರ್ಯಕ್ಕೆ ಸ್ಥಳೀಯಾಡಳಿತ ಮುಂದಾಗಿರಲಿಲ್ಲ ಎನ್ನಲಾಗ್ತಿದೆ. ಜೊತೆಗೆ ಈ ಸೇತುವೆಯ ಮೇಲೆ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧವನ್ನೂ ವಿಧಿಸಲಾಗಿತ್ತು. ಆದರೆ ಈ ಲಾರಿ ಹೇಗೆ ಸೇತುವೆ ಮೇಲೆ ಸಂಚರಿಸಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಓದಿ: ವೇದಾಂತ ಸ್ಟರ್ಲೈಟ್ ಸ್ಥಾವರದಲ್ಲಿ ಆಮ್ಲಜನಕದ ಉತ್ಪಾದನೆ ಪುನಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.