ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ 15 ತುಂಡು ಪ್ಲಾಸ್ಟಿಕ್ ಸ್ಫೋಟಕಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದು, ಸಂಭವನೀಯ ದುರಂತವನ್ನು ತಪ್ಪಿಸಲಾಗಿದೆ.
ತಂಗ್‌ಧಾರ್‌ನ ಜುಮಾ ಮಸೀದಿ ಬಳಿ ಸ್ಫೋಟಕಗಳಿರುವ ಖಚಿತ ಮಾಹಿತಿಯ ನಂತರ ಸೇನೆಯ ಬಾಂಬ್ ವಿಲೇವಾರಿ ತಂಡ ಶೋಧ ಪ್ರಾರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ನೇಮಕ
ಕರ್ಣಾದಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಿಗೆ ದೊರೆತ 15 ತುಂಡು ಪ್ಲಾಸ್ಟಿಕ್ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ತಂಗ್ಧರ್ ಮಾರುಕಟ್ಟೆಯ ಹೃದಯಭಾಗದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.