ಖಾರ್ಗೋನ್: ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕನಿಷ್ಟ 15 ಮಂದಿ ಸಾವನ್ನಪ್ಪಿ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಇಂದು ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಇಂದೋರ್‌ಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಕೆಳಗೆ ಬಿದ್ದಿದೆ ಎನ್ನಲಾಗಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
-
15 dead, 25 injured after bus falls off bridge in MP's Khargone; ex-gratia announced
— ANI Digital (@ani_digital) May 9, 2023 " class="align-text-top noRightClick twitterSection" data="
Read @ANI Story | https://t.co/RwRbT3qs5b#Accident #MadhyaPradesh #Khargone #BusAccident pic.twitter.com/g6htSv9VjP
">15 dead, 25 injured after bus falls off bridge in MP's Khargone; ex-gratia announced
— ANI Digital (@ani_digital) May 9, 2023
Read @ANI Story | https://t.co/RwRbT3qs5b#Accident #MadhyaPradesh #Khargone #BusAccident pic.twitter.com/g6htSv9VjP15 dead, 25 injured after bus falls off bridge in MP's Khargone; ex-gratia announced
— ANI Digital (@ani_digital) May 9, 2023
Read @ANI Story | https://t.co/RwRbT3qs5b#Accident #MadhyaPradesh #Khargone #BusAccident pic.twitter.com/g6htSv9VjP
ದುರ್ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಸರ್ಕಾರ ಮೃತರ ಕುಟುಂಬಕ್ಕೆ ತಲಾ ರೂ.4 ಲಕ್ಷ ಹಾಗೂ ಗಾಯಾಳುಗಳಿಗೆ ರೂ.50,000 ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ರೂ.25 ಸಾವಿರ ಪರಿಹಾರ ಘೋಷಣೆ ಮಾಡಿದೆ.
"ಖಾರ್ಗೋನ್‌ನಲ್ಲಿ 20 ಅಡಿ ಎತ್ತರದ ಸೇತುವೆಯಿಂದ ಖಾಸಗಿ ಬಸ್ ಉರುಳಿದ ಪರಿಣಾಮ 15 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗುತ್ತಿದೆ" ಎಂದು ಎಸ್ಪಿ ಧರಮ್ ವೀರ್ ಸಿಂಗ್ ತಿಳಿಸಿದ್ದಾರೆ.
-
मध्यप्रदेश सरकार की ओर से शोकाकुल परिवारों को ₹4 - ₹4 लाख की राहत राशि, गंभीर रूप से घायलों को ₹50 - ₹50 हजार एवं सामान्य रूप से घायलों को ₹25 - ₹25 हजार की आर्थिक सहायता दी जायेगी। शासन द्वारा घायलों के नि:शुल्क इलाज की समुचित व्यवस्था की गई है।
— Office of Shivraj (@OfficeofSSC) May 9, 2023 " class="align-text-top noRightClick twitterSection" data="
">मध्यप्रदेश सरकार की ओर से शोकाकुल परिवारों को ₹4 - ₹4 लाख की राहत राशि, गंभीर रूप से घायलों को ₹50 - ₹50 हजार एवं सामान्य रूप से घायलों को ₹25 - ₹25 हजार की आर्थिक सहायता दी जायेगी। शासन द्वारा घायलों के नि:शुल्क इलाज की समुचित व्यवस्था की गई है।
— Office of Shivraj (@OfficeofSSC) May 9, 2023मध्यप्रदेश सरकार की ओर से शोकाकुल परिवारों को ₹4 - ₹4 लाख की राहत राशि, गंभीर रूप से घायलों को ₹50 - ₹50 हजार एवं सामान्य रूप से घायलों को ₹25 - ₹25 हजार की आर्थिक सहायता दी जायेगी। शासन द्वारा घायलों के नि:शुल्क इलाज की समुचित व्यवस्था की गई है।
— Office of Shivraj (@OfficeofSSC) May 9, 2023
ಜಿಲ್ಲಾಧಿಕಾರಿ ಶಿವರಾಜ್ ಸಿಂಗ್ ವರ್ಮಾ ಮತ್ತು ಖರ್ಗೋಣೆ ಶಾಸಕ ರವಿ ಜೋಶಿ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಊನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಯಾತ್ರಾರ್ಥಿಗಳ ಕಾರು ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು