ETV Bharat / bharat

ಮನೆಯ ಜಂತಿ, ಕಂಬದ ಮೇಲೆಲ್ಲ ಹಾವು..5 ದಿನದಲ್ಲಿ 15 ಸರ್ಪದ ಮರಿಗಳು ಪ್ರತ್ಯಕ್ಷ, ವೃದ್ಧ ದಂಪತಿ ಕಂಗಾಲು

ಬಿಹಾರದ ಗ್ರಾಮವೊಂದರ ಮನೆಯಲ್ಲಿ ಹಾವುಗಳು ದಿನವೂ ಪ್ರತ್ಯಕ್ಷವಾಗುತ್ತಿದ್ದು, ಇಲ್ಲಿಯವರೆಗೆ 15 ಸರ್ಪಗಳನ್ನು ಹಿಡಿಯಲಾಗಿದೆ. ಎಲ್ಲಿಂದ ಇವುಗಳು ಬರುತ್ತಿವೆ ಎಂಬುದು ನಿಗೂಢವಾಗಿದೆ.

ಸರ್ಪದ ಮರಿಗಳು ಪ್ರತ್ಯಕ್ಷ
ಸರ್ಪದ ಮರಿಗಳು ಪ್ರತ್ಯಕ್ಷ
author img

By

Published : Jul 26, 2023, 7:34 PM IST

ಸೀತಾಮಂಡಿ:(ಬಿಹಾರ) : ವಿಶ್ವದ ಅತಿ ವಿಷಕಾರಿ ಹಾವುಗಳಲ್ಲಿ ನಾಗರಹಾವು ಕೂಡ ಒಂದಾಗಿದೆ. ಅದು ಹೆಡೆ ಎತ್ತಿ ನಿಂತಿತೆಂದರೆ ಎಂಥವರ ಮೈಯಲ್ಲೂ ನಡುಕ ಗ್ಯಾರಂಟಿ. ಪರಾವಲಂಬಿಗಳಾದ ಇವುಗಳು ಗೆದ್ದಲು ಹುಳುಗಳು ನಿರ್ಮಿಸುವ ಹುತ್ತದಲ್ಲಿ ವಾಸಿಸುತ್ತವೆ. ಇಂತಹ ವಿಷಸರ್ಪಗಳು ಇಲ್ಲಿನ ವೃದ್ಧರು ವಾಸಿಸುವ ಮನೆಯೊಂದರಲ್ಲಿ ಹೇರಳವಾಗಿ ಕಾಣಿಸಿಕೊಂಡಿವೆ. ದಿನಂಪ್ರತಿ ಕಾಣಿಸಿಕೊಳ್ಳುವ ನಾಗಪ್ಪನಿಂದಾಗಿ ವೃದ್ಧ ದಂಪತಿ ನಿದ್ರೆ, ಊಟವನ್ನೇ ಮರೆಯುವಂತಾಗಿದೆ.

ಬಿಹಾರದ ಸೀತಾಮಂಡಿಯ ಮುರಾದ್​ಪುರ ಗ್ರಾಮದ ಮನೆಯಲ್ಲಿ ನಾಗರಹಾವುಗಳು ದಿನವೂ ಪ್ರತ್ಯಕ್ಷವಾಗುತ್ತಿವೆ. 5 ದಿನಗಳಿಂದ 15 ಕ್ಕೂ ಹೆಚ್ಚು ಸರ್ಪದ ಮರಿಗಳನ್ನು ಹಿಡಿದು ಹೊರಹಾಕಲಾಗಿದೆ. ಈ ಬಗ್ಗೆ ಹಾವು ಹಿಡಿಯುವ ತಂಡಗಳಿಗೆ ಮಾಹಿತಿ ನೀಡಿದ್ದರೂ, ಯಾರೊಬ್ಬರೂ ಬಂದು ನೆರವು ನೀಡಿಲ್ಲ. ಮನೆಯಲ್ಲಿ ವೃದ್ಧ ದಂಪತಿ ಮಾತ್ರ ವಾಸವಾಗಿದ್ದು, ಪ್ರಾಣ ಭೀತಿಯಲ್ಲೇ ದಿನ ದೂಡುವಂತಾಗಿದೆ.

ವಿವರ: ಮುರಾದಪುರ ಗ್ರಾಮದ ನಿವಾಸಿ ಮಿಥ್ಲೇಶ್ ಶರ್ಮಾ ಎಂಬುವರ ಮನೆಯ ಸ್ನಾನದ ಮನೆಯಿಂದ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ಇವುಗಳು ಹೊರಬಂದು ಮನೆಯ ಮೂಲೆ ಮೂಲೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇದುವರೆಗೆ 15 ನಾಗರ ಹಾವುಗಳು ಹೊರಬಂದಿದ್ದು, ಅವುಗಳನ್ನು ಹಿಡಿದು ಹೊರಬಿಡಲಾಗಿದೆ. ಸ್ನಾನದ ಮನೆಯ ಮೂಲೆಯೊಂದರಲ್ಲಿ ಹಾವು ಮರಿ ಹಾಕಿರುವ ಶಂಕೆ ಇದ್ದು, ಅವುಗಳು ಈಗ ಒಂದಾಗಿದಾಗಿ ಬರುತ್ತಿವೆ. ಮನೆಯ ಜಂತಿ, ಕಂಬಗಳಲ್ಲಿ ನೇತಾಡುತ್ತಿವೆ.

ವೃದ್ಧ ದಂಪತಿ ಮಾತ್ರ ಇರುವ ಮನೆಯಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದಂಪತಿಗಳಿಬ್ಬರೂ ತುಂಬಾ ಭಯಗೊಂಡಿದ್ದಾರೆ. ಇವರ ಪುತ್ರ ಒಡಿಶಾದಲ್ಲಿ ವಾಸವಾಗಿದ್ದು, ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತಕ್ಕೆ ಆನ್‌ಲೈನ್ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಈವರೆಗೆ ಯಾರೊಬ್ಬರು ಬಂದು ಹಾವುಗಳನ್ನು ಪತ್ತೆ ಮಾಡುವ ಕೆಲಸ ಮಾಡಿಲ್ಲ ಎಂದು ವೃದ್ಧ ದಂಪತಿ ಆರೋಪಿಸುತ್ತಾರೆ.

ನಿದ್ರೆ, ಊಟಕ್ಕೂ ಭಂಗ: ವಿಷಕಾರಿ ಹಾವುಗಳು ಮನೆಯ ತುಂಬೆಲ್ಲ ಕಾಣಿಸಿಕೊಳ್ಳುತ್ತಿರುವ ಕಾರಣ ಸುತ್ತಮುತ್ತಲಿನವರೂ ಸಹಾಯಕ್ಕೆ ಬರುತ್ತಿಲ್ಲ. ರಾತ್ರಿ ಮಲಗಲೂ ಭಯವಾಗುತ್ತಿದೆ. ಸರ್ಪಗಳು ಕಾಣಿಸಿಕೊಂಡಾಗಿನಿಂದ ಅಡುಗೆ ಮಾಡಲು ಕೋಣೆಗೂ ಹೋಗಲಾಗುತ್ತಿಲ್ಲ. ಹೊರಗಿನ ಊಟವನ್ನೇ ತಂದು ಜೀವನ ನಡೆಸುತ್ತಿದ್ದೇವೆ. ತಮಗೆ ಸಹಾಯ ಮಾಡಿ ಎಂದು ವೃದ್ಧ ದಂಪತಿ ಕೋರಿದ್ದಾರೆ.

ಪ್ರಿಯಕರನ ಹಾವು ಕಚ್ಚಿಸಿ ಕೊಂದ ಗೆಳತಿ: ಹೊಸ ಗೆಳೆಯನ ಪ್ರೇಮಕ್ಕೆ ಅಡ್ಡಿಯಾಗಿದ್ದ ಹಳೆ ಗೆಳೆಯನನ್ನು ಯುವತಿಯೊಬ್ಬಳು ಹಾವು ಕಚ್ಚಿಸಿ ಕೊಲ್ಲಿಸಿದ ಘಟನೆ ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದಿತ್ತು. ಹಳೆಯ ಗೆಳೆಯ ಮನೆಗೆ ಕರೆಯಿಸಿಕೊಂಡು ಬಾಡಿಗೆಗೆ ಪಡೆದು ತಂದಿದ್ದ ಹಾವಿನಿಂದ ಆತನಿಗೆ ಕಚ್ಚಿಸಲಾಗಿತ್ತು. ಪ್ರಜ್ಞೆ ತಪ್ಪಿ ಬಿದ್ದ ಆತನನ್ನು ಅವನ ಕಾರಿನಲ್ಲೇ ಕೂರಿಸಿಕೊಂಡು ಹೋಗಿ ಅಜ್ಞಾತ ಸ್ಥಳದಲ್ಲಿ ಕಾರು ಸಮೇತ ಬಿಟ್ಟು ಹೋಗಿದ್ದರು. ಇದು ಮರ್ಡರ್​ ಎಂದು ಗೊತ್ತಾಗಿ ತನಿಖೆ ನಡೆಸಿದಾಗ ಯುವತಿಯ ಖತರ್ನಾಕ್​ ಪ್ಲಾನ್​ ಬಯಲಾಗಿತ್ತು.

ಇದನ್ನೂ ಓದಿ: ಹೊಸ ಯುವಕನೊಂದಿಗೆ ಚಿಗುರಿದ ಪ್ರೀತಿ.. ಹಳೆ ಪ್ರಿಯಕರನಿಗೆ ನಾಗರಹಾವಿನಿಂದ ಕಚ್ಚಿಸಿದ ಪ್ರೇಯಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.