ETV Bharat / bharat

ಇಂಡೋ-ನೇಪಾಳ ಗಡಿಯಲ್ಲಿ 2 ಕೆಜಿ ಯುರೇನಿಯಂ ವಶಕ್ಕೆ: 15 ಕಳ್ಳಸಾಗಣೆದಾರರ ಬಂಧನ - 15 ಮಂದಿ ಕಳ್ಳಸಾಗಣೆದಾರರ ಬಂಧನ

ಭಾರತ-ನೇಪಾಳ ಗಡಿ ಭಾಗದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಯುರೇನಿಯಂ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ.

15 ಮಂದಿ ಕಳ್ಳಸಾಗಣೆದಾರರ ಬಂಧನ
police arrest 15 smugglers
author img

By

Published : Jul 22, 2022, 9:05 AM IST

Updated : Jul 22, 2022, 9:55 AM IST

ಅರಾರಿಯಾ(ಬಿಹಾರ): ಭಾರತ-ನೇಪಾಳ ಗಡಿಯಲ್ಲಿರುವ ಬಿರಾಟ್​ನಗರದಲ್ಲಿ ಶುಕ್ರವಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಎರಡು ಕೆಜಿ ಯುರೇನಿಯಂ ಸಮೇತ 15 ಮಂದಿ ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ಹೆಚ್ಚು ವಿಕಿರಣಶೀಲ ನಿಷೇಧಿತ ವಸ್ತುಗಳನ್ನು ಕಳ್ಳಸಾಗಣೆದಾರರು ವಿದೇಶಗಳಿಗೆ ಸಾಗಿಸಲು ಯತ್ನಿಸುತ್ತಿದ್ದರು. ಅರಾರಿಯಾ ಜಿಲ್ಲೆಯ ಜೋಗ್ಬಾನಿ ಗಡಿ ಮೂಲಕ ಬಿಹಾರಕ್ಕೆ ನುಸುಳಲು ಆರೋಪಿಗಳು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಯುರೇನಿಯಂ ಎಂದರೇನು?: ಯುರೇನಿಯಂ ಒಂದು ರಾಸಾಯನಿಕ ಅಂಶವಾಗಿದ್ದು, 'U' ಚಿಹ್ನೆಯನ್ನು ಹೊಂದಿದೆ. ಯುರೇನಿಯಂನ ಪರಮಾಣು ಸಂಖ್ಯೆ 92 ಆಗಿದ್ದು, ಅದು 92 ಪ್ರೋಟಾನ್‌ಗಳನ್ನು ಮತ್ತು 92 ಎಲೆಕ್ಟ್ರಾನ್‌ಗಳನ್ನು ಹೊಂದಿದೆ. ಅವುಗಳಲ್ಲಿ 6 ವೇಲೆನ್ಸಿ ಎಲೆಕ್ಟ್ರಾನ್‌ಗಳಾಗಿವೆ. 1789 ರಲ್ಲಿ ಜರ್ಮನ್ ರಸಾಯನಶಾಸ್ತ್ರಜ್ಞ ಮಾರ್ಟಿನ್ ಹೆನ್ರಿಕ್ ಕ್ಲಾಪ್ರೋತ್ ಮೊದಲ ಬಾರಿಗೆ ಯುರೇನಿಯಂ ಅಂಶವನ್ನು ಕಂಡುಹಿಡಿದರು.

ಯುರೇನಿಯಂ ಬಳಕೆ ಯಾವುದಕ್ಕೆ?: ಯುರೇನಿಯಂ ನಮ್ಮ ಭೂಮಿಯಲ್ಲಿ ಬಹಳ ಅಪರೂಪವಾಗಿ ಲಭ್ಯವಿರುವ ಖನಿಜವಾಗಿದೆ. ಇದರಲ್ಲಿರುವ ಪರಮಾಣು ಗುಣಗಳಿಂದಾಗಿ ಪರಮಾಣು ವಿದ್ಯುತ್ ಉತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರ, ಅಣು ಬಾಂಬ್ ಇತ್ಯಾದಿ ತಯಾರಿಕೆಗೆ ಸಹಾಯವಾಗುತ್ತದೆ. ಜೊತೆಗೆ ಔಷಧ, ಎಕ್ಸ್-ರೇ, ಫೋಟೋಗ್ರಫಿ ಇತ್ಯಾದಿಗಳಿಗೂ ಯುರೇನಿಯಮ್ ಬಳಕೆಯಾಗುತ್ತದೆ. ವಿಮಾನ ನಿಯಂತ್ರಣ ಮೇಲ್ಮೈಗಳಿಗೆ ಕೌಂಟರ್‌ವೇಟ್‌ಗಳಾಗಿ ಬಳಸಲಾಗುತ್ತದೆ. ಯುರೇನಿಯಂನಿಂದ ರೇಡಿಯಂ ಹೊರತೆಗೆಯಲಾಗುತ್ತದೆ. 1 ಗ್ರಾಂ ಯುರೇನಿಯಂನಿಂದ ಒಂದು ಮೆಗಾ ವ್ಯಾಟ್ ವಿದ್ಯುತ್ ಶಕ್ತಿ ಸಿಗುತ್ತದೆ. ಇದು 3 ಟನ್ ಕಲ್ಲಿದ್ದಲಿಗೆ ಸಮ ಎಂದು ಹೆಳಲಾಗುತ್ತದೆ. ಆದರೆ, ಪರಮಾಣು ಸ್ಥಾವರಗಳು ಯಾವತ್ತಿದ್ದರೂ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಭಯದಲ್ಲಿ ವಿಶ್ವಾದ್ಯಂತ ಇದರ ಬಳಕೆ ಕಡಿಮೆಯಾಗುತ್ತಿದೆ.

ಯುರೇನಿಯಂ ನಿಕ್ಷೇಪಗಳು ಪತ್ತೆ ಎಲ್ಲೆಲ್ಲಿ?: ಕಝಾಕಿಸ್ತಾನ್​ದಲ್ಲಿ ಅತಿ ಹೆಚ್ಚು ಯುರೇನಿಯಂ ಖನಿಜ ಸಂಗ್ರಹವಿದೆ. ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲೂ ಸಾಕಷ್ಟು ಯುರೇನಿಯಂ ನಿಕ್ಷೇಪಗಳು ಸಿಕ್ಕಿವೆ. ಅಮೆರಿಕ, ರಷ್ಯಾ, ಉಕ್ರೇನ್, ಉಜ್ಬೆಕಿಸ್ತಾನ್ ದೇಶಗಳಲ್ಲದೇ ಆಫ್ರಿಕಾದ ನೈಜರ್ ಮತ್ತು ನಮೀಬಿಯಾ ದೇಶಗಳಲ್ಲಿ ಯುರೇನಿಯಂ ಸಂಗ್ರಹವಿದೆ. ಇದೀಗ ಭಾರತದ ಕೆಲವು ರಾಜ್ಯಗಳಲ್ಲೂ ಸಹ ಯುರೇನಿಯಂ ನಿಕ್ಷೇಪಗಳು ಪತ್ತೆಯಾಗುತ್ತಿವೆ.

ಇದನ್ನೂ ಓದಿ: ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಅಧ್ಯಕ್ಷರ ಮನೆಗೆಲಸದ ವ್ಯಕ್ತಿಯ ಬಳಿ ಸ್ಯಾಟಲೈಟ್ ಫೋನ್ ಪತ್ತೆ

Last Updated : Jul 22, 2022, 9:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.