ETV Bharat / bharat

ಅತ್ಯಾಚಾರದಿಂದ ಗರ್ಭಿಣಿಯಾದ ಅಪ್ರಾಪ್ತೆ, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲು: ಭ್ರೂಣ ಸಾವು

ಅತ್ಯಾಚಾರದಿಂದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದು, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಗರ್ಭದಲ್ಲೇ ಭ್ರೂಣ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

author img

By

Published : Aug 3, 2021, 3:08 PM IST

14 year old minor girl rape; foetus dies
ಅತ್ಯಾಚಾರದಿಂದ ಗರ್ಭಿಣಿಯಾದ ಅಪ್ರಾಪ್ತೆ, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲು: ಭ್ರೂಣ ಸಾವು

ಕೊಟ್ಟಾಯಂ(ಕೇರಳ) : ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ ಬಳಿಕ ಗರ್ಭಿಣಿಯಾಗಿದ್ದಳು. 14 ವರ್ಷದ ಬಾಲಕಿ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಗರ್ಭದಲ್ಲಿಯೇ ಭ್ರೂಣ ಮೃತಪಟ್ಟಿರುವ ಘಟನೆ ದೇವರನಾಡಲ್ಲಿ ನಡೆದಿದೆ.

ಕೊಟ್ಟಾಯಂನ ಪಂಪಾಡಿ ಎಂಬಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಧ್ಯ ವಯಸ್ಸಿನ ವ್ಯಕ್ತಿಯೋರ್ವ ತನ್ನನ್ನು ಅಪಹರಿಸಿ, ಮಾದಕವಸ್ತು ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅತ್ಯಾಚಾರ ಆರೋಪಿಯನ್ನು ಸೆರೆ ಹಿಡಿಯಲು ತನಿಖೆ ನಡೆಸಲಾಗುತ್ತಿದೆ. ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ತನಿಖಾ ದಳವನ್ನು ಕಂಜಿರಪಲ್ಲಿ ಡಿವೈಎಸ್​ಪಿ ಸಜಿಮೋನ್ ಮುನ್ನಡೆಸುತ್ತಿದ್ದು, ಮೃತಪಟ್ಟ ಭ್ರೂಣದ ಡಿಎನ್​ಎ ಮಾದರಿ ಪರೀಕ್ಷೆಗಾಗಿ ಕಳಿಹಿಸಲಾಗಿದೆ. ಪರೀಕ್ಷೆಯ ಫಲಿತಾಂಶದ ನಂತರ ಮತ್ತಷ್ಟು ಮಾಹಿತಿ ಬಹಿರಂಗವಾಗಲಿದೆ.

ಇದನ್ನೂ ಓದಿ: ನೀರಿನ ಅಭಾವ ನೀಗಿಸಲು ಮುಂದಾದ ಯೋಗಿ ಸರ್ಕಾರ.. 10 ಸಾವಿರ ಕೃಷಿ ಹೊಂಡ ನಿರ್ಮಿಸಲು ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.