ETV Bharat / bharat

ಭೀಕರ ರಸ್ತೆ ಅಪಘಾತ.. ದೀಪಾವಳಿಗೆ ಹೊರಟ 15 ಮಂದಿಯ ದಾರುಣ ಸಾವು.. 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ - ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಬಸ್ ಮತ್ತು ಟ್ರಕ್‌ ಮಧ್ಯೆ ಡಿಕ್ಕಿಯಾಗಿ ಸುಮಾರು 15 ಕಾರ್ಮಿಕರು ಮೃತಪಟ್ಟಿರುವುದು ವರದಿಯಾಗಿದೆ.

workers died in horrific accident  horrific accident at Madhya Pradesh  travelers injurer in Madhya Pradesh accident  ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ  ಪ್ರಯಾಣಿಕರಿಗೆ ಗಂಭೀರ ಗಾಯ  ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ದುರಂತ  ಬಸ್ ಮತ್ತು ಟ್ರಕ್‌ ಮಧ್ಯೆ ಡಿಕ್ಕಿ  ಕಾರ್ಮಿಕರು ಮೃತಪಟ್ಟಿರುವುದು ವರದಿ  ಹೃದಯ ವಿದ್ರಾವಕ ರಸ್ತೆ ಅಪಘಾತ  ಮಂದಿ ಪ್ರಯಾಣಿಕರು ಗಾಯ  ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ  ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ
ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ
author img

By

Published : Oct 22, 2022, 7:38 AM IST

Updated : Oct 22, 2022, 9:12 AM IST

ರೇವಾ, ಮಧ್ಯಪ್ರದೇಶ: ಜಿಲ್ಲೆಯ ಸೋಹಗಿ ಪರ್ವತದಲ್ಲಿ ಮಧ್ಯರಾತ್ರಿ ಹೃದಯ ವಿದ್ರಾವಕ ರಸ್ತೆ ಅಪಘಾತ ಸಂಭವಿಸಿದೆ. ಇದರಲ್ಲಿ 15 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಆರಂಭಿಸಿದ್ದಾರೆ.

workers died in horrific accident  horrific accident at Madhya Pradesh  travelers injurer in Madhya Pradesh accident  ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ  ಪ್ರಯಾಣಿಕರಿಗೆ ಗಂಭೀರ ಗಾಯ  ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ದುರಂತ  ಬಸ್ ಮತ್ತು ಟ್ರಕ್‌ ಮಧ್ಯೆ ಡಿಕ್ಕಿ  ಕಾರ್ಮಿಕರು ಮೃತಪಟ್ಟಿರುವುದು ವರದಿ  ಹೃದಯ ವಿದ್ರಾವಕ ರಸ್ತೆ ಅಪಘಾತ  ಮಂದಿ ಪ್ರಯಾಣಿಕರು ಗಾಯ  ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ  ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ
ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ

ಕಾರ್ಮಿಕರನ್ನು ತುಂಬಿದ್ದ ಬಸ್ ಬ್ಯಾಲೆಸ್ಟ್ ಲೋಡ್ ಮಾಡಿದ ಟ್ರಕ್‌ಗೆ ಡಿಕ್ಕಿ: ದೀಪಾವಳಿ ಹಬ್ಬವನ್ನು ಆಚರಿಸಲು ಹೈದರಾಬಾದ್​ನಿಂದ ಪ್ರಯಾಣಿಕರು ಲಖನೌದಲ್ಲಿರುವ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಹೈದರಾಬಾದ್​ನಿಂದ ಕಟ್ನಿಗೆ ತಲುಪಿತು. ಕಟ್ನಿಯಲ್ಲಿ ಹೆಚ್ಚಿನ ಪ್ರಯಾಣಿಕರು ತುಂಬಿದ ನಂತರ ಬಸ್ ಉತ್ತರ ಪ್ರದೇಶದ ಲಖನೌಗೆ ಸಾಗಿತು. ರೇವಾದ ಸೊಹಗಿ ತಲುಪಿದ ತಕ್ಷಣ ಅನಿಯಂತ್ರಿತ ಬಸ್​ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​ ಡಿಕ್ಕಿ ರಭಸಕ್ಕೆ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ

ಬಸ್​​​​ನಲ್ಲಿ 100ಕ್ಕೂ ಹೆಚ್ಚು ಜನರ ಪ್ರಯಾಣ: ಮಾಹಿತಿ ಪ್ರಕಾರ ಬಸ್​​ನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಬಸ್ ಸೊಹಗಿ ಪರ್ವತದ ಬಳಿ ತಲುಪುತ್ತಿದ್ದಂತೆಯೇ ಬಸ್ಸಿನ ಮುಂದೆ ಹೋಗುತ್ತಿದ್ದ ಲಾರಿ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಟ್ರಕ್​ ರಸ್ತೆಯಲ್ಲೇ ನಿಂತಿದೆ. ಟ್ರಕ್​ ಹಿಂದೆ ಬರುತ್ತಿದ್ದ ಅತಿವೇಗದಲ್ಲಿ ಬರುತ್ತಿದ್ದ ಬಸ್ ​ಅನಿಯಂತ್ರಣಗೊಂಡು ಟ್ರಕ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬಸ್‌ನ ಮುಂಭಾಗದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಯುಪಿ, ಬಿಹಾರ, ನೇಪಾಳ ನಿವಾಸಿಗಳು ಸಾವು: ಈ ಅಪಘಾತದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಮೃತಪಟ್ಟವರಲ್ಲಿ ಎಲ್ಲ ಪ್ರಯಾಣಿಕರು ಉತ್ತರ ಪ್ರದೇಶ, ಬಿಹಾರ ಮತ್ತು ನೇಪಾಳದ ನಿವಾಸಿಗಳಾಗಿದ್ದಾರೆ. ಸಂಬಂಧಪಟ್ಟ ಕುಟುಂಬಗಳಿಗೆ ಮಾಹಿತಿ ರವಾನಿಸಲು ಪೊಲೀಸ್​ ಇಲಾಖೆ ನಿರತವಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ಮತ್ತು ಎಸ್ಪಿ: ಘಟನೆಗೆ ಕೆಲವು ನಿಮಿಷಗಳ ಮೊದಲು ರೇವಾ ಜಿಲ್ಲೆಯ ಟ್ಯೋಂಥರ್ ತಹಸಿಲ್‌ನ ವಿದ್ಯುತ್ ಇಲಾಖೆಯಲ್ಲಿ ಡಿಇ ಆಗಿ ನಿಯೋಜಿತರಾಗಿರುವ ಸುಶೀಲ್ ಯಾದವ್ ಅವರು ರೇವಾದಿಂದ ಪ್ರಯಾಣಿಸಿದ್ದರು. ಘಟನೆ ನಡೆದ 2 ನಿಮಿಷದ ನಂತರ ಅವರು ಸ್ಥಳಕ್ಕೆ ತಲುಪಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ತಂಡ ಕೂಡ ಸ್ಥಳಕ್ಕೆ ತಲುಪಿದ್ದು, ಘಟನಾ ಸ್ಥಳವು ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಮತ್ತು ಎಸ್ಪಿ ನವನೀತ್ ಭಾಸಿನ್ ಎಲ್ಲಾ ಆಡಳಿತ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ಪ್ರಾರಂಭಿಸಿದರು.

ಚಾಲಕನಿಗೆ ಸರಿಯಾಗಿ ಗೇರ್ ಬದಲಾಯಿಸಲು ಸಾಧ್ಯವಾಗಲಿಲ್ಲ: ಟ್ರಕ್ ಮೊದಲು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲೇ ನಿಂತಿದೆ. ಬಳಿಕ ಟ್ರಕ್ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್​​​​ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್​​​​ನ ಮುಂಭಾಗದಲ್ಲಿ ಕುಳಿತಿದ್ದ 15 ಕಾರ್ಮಿಕರು ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. 40 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಗೆ ಬಸ್ಸಿನ ಗೇರ್ ಸರಿಯಾಗಿ ಬದಲಾಯಿಸಲು ಸಾಧ್ಯವಾಗದ ಕಾರಣ ಈ ಅವಘಡ ಸಂಭವಿಸಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇದೀಗ ಪೊಲೀಸ್ ತಂಡ ಸರಣಿ ಅಪಘಾತದ ಬಗ್ಗೆ ತನಿಖೆ ಕೈಗೊಂಡಿದ್ದು, ಮುಂದಿನ ಕ್ರಮ ಅನುಸರಿಸಿದೆ.

ಓದಿ: ರಸ್ತೆ‌ ಅಪಘಾತದಲ್ಲಿ ತಂದೆ ಸಾವು: ಮಗು ನಾಮಕರಣ ಖುಷಿಯಲ್ಲಿದ್ದ ಮನೆಯಲ್ಲಿ ಶೋಕ

Last Updated : Oct 22, 2022, 9:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.