ETV Bharat / bharat

2021ರಲ್ಲಿ 14 ಬಾಹ್ಯಾಕಾಶ ಕಾರ್ಯಾಚರಣೆಗಳು ಉಡಾವಣೆಗೆ ಸಜ್ಜಾಗಿವೆ : ಇಸ್ರೋ ಅಧ್ಯಕ್ಷ - ಇಸ್ರೋ ಅಧ್ಯಕ್ಷ ಕೆ. ಶಿವನ್ ಸುದ್ದಿ

ಗಗನ್​ಯಾನ್​​-ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಮೊದಲು ಎರಡು ಮಾನವರಹಿತ ಬಾಹ್ಯಾಕಾಶ ಯಾತ್ರೆಗಳನ್ನು ಕೈಗೊಳ್ಳಲು ಇಸ್ರೋ ಯೋಜಿಸಿದೆ. ಗಗನ್​ಯಾನ್​​ ಮಿಷನ್ 2022ರ ವೇಳೆಗೆ ಮೂವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದೆ..

ISRO chairman
ಇಸ್ರೋ ಅಧ್ಯಕ್ಷ ಕೆ. ಶಿವನ್
author img

By

Published : Feb 28, 2021, 7:50 PM IST

ಶ್ರೀಹರಿಕೋಟ : ಬಾಹ್ಯಾಕಾಶ ಏಜೆನ್ಸಿಯ ಮೊದಲ ಮಾನವರಹಿತ ಮಿಷನ್ ಸೇರಿದಂತೆ 2021ರ ಅಂತ್ಯದೊಳಗೆ ಇಸ್ರೋ 14 ಉಪಗ್ರಹಗಳ ಕಾರ್ಯಾಚರಣೆ ಪೂರ್ಣಗೊಂಡಿದ್ದು ಉಡಾವಣೆಗೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾನುವಾರ ಹೇಳಿದ್ದಾರೆ.

ಬ್ರೆಜಿಲ್‌ನ ಅಮೆಜೋನಾ-1 ಮತ್ತು ಇತರ 18 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ ನಂತರ ಅವರು ಇಲ್ಲಿನ ಮಿಷನ್ ನಿಯಂತ್ರಣ ಕೇಂದ್ರದ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾವು ಈ ವರ್ಷ ಹೇಗಾದ್ರೂ ಮಾಡಿ 14 ಉಪಗ್ರಹಗಳನ್ನು ಉಡಾವಣೆಗೊಳಿಸಲಿದ್ದೇವೆ.

ಏಳು ಉಪಗ್ರಹ ಉಡಾವಣಾ ವಾಹನ ಮತ್ತು ಆರು ಉಪಗ್ರಹ ಜೊತೆಗೆ ವರ್ಷದ ಅಂತ್ಯದ ವೇಳೆಗೆ ನಮ್ಮ ಮೊದಲ ಮಾನವರಹಿತ ಮಿಷನ್ ಉಡಾವಣೆಗೊಳಿಸುವುದು ನಮ್ಮ ಗುರಿ ಮತ್ತು ವಿಜ್ಞಾನಿಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ISRO chairman
ಇಸ್ರೋ ಅಧ್ಯಕ್ಷ ಕೆ. ಶಿವನ್

ಓದಿ:ಗ್ಲುಕೋಮಾವನ್ನು ಪತ್ತೆ ಹಚ್ಚಲು ಸ್ಮಾರ್ಟ್‌ಫೋನ್‌ಗಳು ಸಹಾಯಕಾರಿಯೇ?

ಗಗನ್​ಯಾನ್​​-ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಮೊದಲು ಎರಡು ಮಾನವರಹಿತ ಬಾಹ್ಯಾಕಾಶ ಯಾತ್ರೆಗಳನ್ನು ಕೈಗೊಳ್ಳಲು ಇಸ್ರೋ ಯೋಜಿಸಿದೆ. ಗಗನ್​ಯಾನ್​​ ಮಿಷನ್ 2022ರ ವೇಳೆಗೆ ಮೂವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದೆ. ಈ ಕಾರ್ಯಾಚರಣೆಗೆ ಆಯ್ಕೆಯಾದ ನಾಲ್ಕು ಪರೀಕ್ಷಾ ಪೈಲಟ್‌ಗಳು ಪ್ರಸ್ತುತ ರಷ್ಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ, ನಾವು ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಹೊರ ಬಂದಿಲ್ಲ. ಇಸ್ರೋ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ಇವುಗಳನ್ನು ಸಿಬ್ಬಂದಿ ಚಾಚುತಪ್ಪದೇ ಅನುಸರಿಸಿ ಕಾರ್ಯನಿರ್ವಹಿಸಿ ಎಂದು ಅವರು ವಿನಂತಿಸಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.