ETV Bharat / bharat

ಆಗಸ್ಟ್ - ಡಿಸೆಂಬರ್​​ವರೆಗೆ ದೇಶದಲ್ಲಿ 136 ಕೋಟಿ ಡೋಸ್ ಕೋವಿಡ್​ ಲಸಿಕೆ ಲಭ್ಯ: ಕೇಂದ್ರ - ಕೋವಿಶೀಲ್ಡ್

ಕೋವಾಕ್ಸಿನ್‌ ಮತ್ತು ಕೋವಿಶೀಲ್ಡ್​ ಕೊರೊನಾ ಲಸಿಕೆಗಳ 136 ಕೋಟಿಗೂ ಹೆಚ್ಚು ಡೋಸ್​ಗಳು ಈ ವರ್ಷದ ಅಂತ್ಯದವರೆಗೆ ಲಭ್ಯ ಇರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಆಗಸ್ಟ್-ಡಿಸೆಂಬರ್ ನಡುವೆ ಕೋವಿಡ್​ ಲಸಿಕೆಯ 136 ಕೋಟಿ ಡೋಸ್ ದೇಶದಲ್ಲಿ ಲಭ್ಯ

author img

By

Published : Aug 6, 2021, 6:17 PM IST

ನವದೆಹಲಿ: ಕೋವಿಡ್ -19 ಲಸಿಕೆಯ 136 ಕೋಟಿಗೂ ಹೆಚ್ಚು ಡೋಸ್​ಗಳು ಈ ವರ್ಷದ ಅಂತ್ಯದವರೆಗೆ ಲಭ್ಯವಿರುತ್ತದೆ. ಮುಂದಿನ ನಾಲ್ಕು ತಿಂಗಳುಗಳ ಕಾಲ, ಭಾರತದ ಲಸಿಕೆ ಕಾರ್ಯಕ್ರಮವನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಗಳ ಮೂಲಕ ವೇಗಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆಗಸ್ಟ್‌ನಲ್ಲಿ ಕೋವಾಕ್ಸಿನ್‌ನ 2.65 ಕೋಟಿ ಹಾಗೂ ಕೋವಿಶೀಲ್ಡ್​ನ 23 ಕೋಟಿ ಡೋಸ್​ ಸೇರಿ ಒಟ್ಟು 25.65 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಾಗುತ್ತದೆ.

ಸೆಪ್ಟೆಂಬರ್‌ನಲ್ಲಿ ಕೋವಾಕ್ಸಿನ್‌ನ 3.15 ಕೋಟಿ ಮತ್ತು ಕೋವಿಶೀಲ್ಡ್​ನ 23 ಕೋಟಿ ಡೋಸ್​, ಅಕ್ಟೋಬರ್‌ನಲ್ಲಿ ಒಟ್ಟು 28.25 ಕೋಟಿ ಡೋಸ್‌, ನವೆಂಬರ್‌ನಲ್ಲಿ 28.25 ಕೋಟಿ ಡೋಸ್‌, ಡಿಸೆಂಬರ್‌ನಲ್ಲಿ 28.5 ಕೋಟಿ ಡೋಸ್‌ ಸೇರಿ ಒಟ್ಟಾರೆ, ಈ ವರ್ಷದ ಅಂತ್ಯದೊಳಗೆ ಕೊರೊನಾ ಲಸಿಕೆಯ 136 ಕೋಟಿಗೂ ಹೆಚ್ಚು ಡೋಸ್​ಗಳನ್ನು ಉತ್ಪಾದಿಸುವುದಾಗಿ ಅಂದಾಜಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಒಂದೇ ಡೋಸ್​ ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಮನವಿ ಸಲ್ಲಿಸಿದ Johnson & Johnson

"ಕೋವಿಡ್ -19 ಪಬ್ಲಿಕ್ ಹೆಲ್ತ್ ರೆಸ್ಪಾನ್ಸ್ ಪ್ರೊ - ಆಕ್ಟಿವ್, ಪ್ರಿ - ಎಂಪ್ಟಿವ್ ಮತ್ತು ಗ್ರೇಡೆಡ್ ರೆಸ್ಪಾನ್ಸ್ ಗೈಡೆಡ್ ಎಪಿಡೆಮಿಯಾಲಾಜಿಕಲ್ ಮತ್ತು ಸೈಂಟಿಫಿಕ್ ರಿಗರ್" ಎಂಬ ಶೀರ್ಷಿಕೆಯ ಟಿಪ್ಪಣಿಯು ಲಸಿಕೆ ಉತ್ಪಾದನೆಯ ಗುರಿಗಳ ಬಗೆಗಿನ ಈ ವಿವರಗಳನ್ನು ನೀಡಿದೆ.

ಈ ಟಿಪ್ಪಣಿಯನ್ನು ಪ್ರಧಾನಿ ಕಚೇರಿಯಿಂದ (ಪಿಎಂಒ) ಸಂಸದರಿಗೆ ನೀಡಲಾಗಿದೆ. ಇದರಲ್ಲಿ ದೇಶದಾದ್ಯಂತ ಮೂಲಸೌಕರ್ಯ ವೃದ್ಧಿಯ ಸವಾಲುಗಳು, ವರ್ಧಿತ ಆಮ್ಲಜನಕ ಪೂರೈಕೆ, ಔಷಧಗಳ ಅವಶ್ಯಕತೆ ಬಗ್ಗೆಯೂ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.