ETV Bharat / bharat

ಬಾಂಗ್ಲಾದೇಶದಿಂದ ವರ್ಷದ ಬಳಿಕ 135 ಭಾರತದ ಮೀನುಗಾರರ ಬಿಡುಗಡೆ - ಶಿಕ್ಷೆಯ ಬಳಿಕ ಭಾರತಕ್ಕೆ ಮೀನುಗಾರರು ವಾಪಸ್​

ಮೀನುಗಾರಿಕೆ ವೇಳೆ ಜಲಗಡಿ ದಾಟಿ ಬಾಂಗ್ಲಾದೇಶದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ 135 ಮೀನುಗಾರರನ್ನು 1 ವರ್ಷದ ಬಳಿಕ ಮತ್ತೆ ಭಾರತಕ್ಕೆ ಕರೆತರಲಾಗಿದೆ.

135-fishermen-return-after-over-a-year-in-bangladesh-jail
ಭಾರತದ ಮೀನುಗಾರರ ಬಿಡುಗಡೆ
author img

By

Published : Oct 10, 2022, 9:17 AM IST

ಕಾಕ್​​ದ್ವಿಪ್​(ಪಶ್ಚಿಮಬಂಗಾಳ​): ಮೀನುಗಾರಿಕೆ ವೇಳೆ ಜಲಗಡಿ ದಾಟಿ ಹೋಗಿ ಸಿಕ್ಕಿಬಿದ್ದು ಬಾಂಗ್ಲಾದೇಶದ ಜೈಲುಪಾಲಾಗಿದ್ದ ಪಶ್ಚಿಮ ಬಂಗಾಳದ 135 ಮೀನುಗಾರರು ಒಂದು ವರ್ಷದ ಶಿಕ್ಷೆಯ ಬಳಿಕ ಭಾನುವಾರ ಭಾರತಕ್ಕೆ ವಾಪಸ್​ ಆಗಿದ್ದಾರೆ.

ಕಳೆದ ವರ್ಷ ಜೂನ್​ನಲ್ಲಿ ಮೀನುಗಾರರು ಬಂಗಾಳಕೊಲ್ಲಿ ಸಾಗರದಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಜಲಗಡಿ ದಾಟಿ ಬಂದಿದ್ದರು. ಈ ವೇಳೆ ಅವರನ್ನು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಪೊಲೀಸರು ಬಂಧಿಸಿ ಖುಲ್ನಾದ ಮೊಂಗ್ಲಾ ಬಂದರಿನಲ್ಲಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಕೇಂದ್ರ ಗೃಹ ಸಚಿವಾಲಯದ ಸಂಘಟಿತ ಪ್ರಯತ್ನದಿಂದ ಮತ್ತು ಬಾಂಗ್ಲಾದೇಶದ ಅಧಿಕಾರಿಗಳ ಸಹಕಾರದೊಂದಿಗೆ ಮೀನುಗಾರರನ್ನು ಅಕ್ಟೋಬರ್ 3 ರಂದು ನೆರೆಯ ದೇಶದಿಂದ ಬಿಡುಗಡೆ ಮಾಡಿಸಲಾಗಿದೆ. ಎಲ್ಲರೂ ಈಗ ಪಶ್ಚಿಮಬಂಗಾಳಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೀನುಗಾರು ಅಂತಿಮವಾಗಿ ತಮ್ಮ ಕುಟುಂಬಗಳನ್ನು ಸೇರಿಕೊಂಡಿದ್ದಾರೆ. ಈ ಮೀನುಗಾರರು ಕಾಕದ್ವೀಪ್ ಮತ್ತು ನಮ್ಖಾನಾದ ವಿವಿಧ ಗ್ರಾಮಗಳ ನಿವಾಸಿಗಳಾಗಿದ್ದಾರೆ. ಇನ್ನೂ 30 ಮೀನುಗಾರರು ಬಾಂಗ್ಲಾದೇಶದಲ್ಲಿ ಸೆರೆಯಾಗಿದ್ದಾರೆ. ಅವರನ್ನು ವಾಪಸ್​ ಕರೆತರುವ ಪ್ರಯತ್ನಗಳು ನಡೆದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ: ನೈಜೀರಿಯಾದಲ್ಲಿ ದೋಣಿ ಮುಳುಗಿ 76 ಮಂದಿ ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.