ಕೃಷ್ಣಾ(ಆಂಧ್ರಪ್ರದೇಶ): ಮರಳಿಗಾಗಿ ಹೊರಟಿದ್ದ ಸುಮಾರು 132 ಮರಳಿನ ಲಾರಿಗಳು ಕೃಷ್ಣಾ ನದಿಯ ನೀರಲ್ಲಿ ಸಿಲುಕಿದ್ದು, ಲಾರಿ ಚಾಲಕರು ಮತ್ತು ಕಾರ್ಮಿಕರನ್ನು ಹಡಗುಗಳ ಮೂಲಕ ರಕ್ಷಿಸುವ ಕಾರ್ಯ ನಡೆದಿದೆ.
ಕೃಷ್ಣಾ ಜಿಲ್ಲೆಯ ಕಂಚಿಕಚರ್ಲ ಮಂಡಲಂನಲ್ಲಿರುವ ಮರಳು ದಾಸ್ತಾನು ಪ್ರದೇಶಕ್ಕೆ ಮರಳಿಗಾಗಿ ಸುಮಾರು ನೂರಕ್ಕೂ ಹೆಚ್ಚು ಲಾರಿಗಳು ತೆರಳಿದ್ದವು. ಹಿಂದಿರುಗಿ ಬರುವ ವೇಳೆ ಕೃಷ್ಣಾ ನದಿಯ ನೀರಿನ ಮಟ್ಟ ಏಕಾಏಕಿ ಹೆಚ್ಚಾಗಿದೆ. ಈ ಕಾರಣದಿಂದ ವಾಪಸ್ ಬರಬೇಕಿದ್ದ ಲಾರಿಗಳು ಅಲ್ಲಿಯೇ ಸಿಲುಕಿಕೊಂಡಿವೆ.
ನೀರಿನ ಮಟ್ಟ ಕಡಿಮೆಯಾಗುವವರೆಗೆ ಲಾರಿಗಳು ವಾಪಸ್ ಬರದ ಸ್ಥಿತಿಯಲ್ಲಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಲಾರಿಗಳ ಚಾಲಕರು ಮತ್ತು ಕೂಲಿಯಾಳುಗಳನ್ನು ಬೋಟ್ಗಳ ಮೂಲಕ ದಡಕ್ಕೆ ತಲುಪಿಸಿದ್ದಾರೆ.
ಪ್ರಸ್ತುತ ಕೃಷ್ಣಾನದಿಗೆ ಪುಲಿಚಿಂತಲ ಡ್ಯಾಮ್ನಿಂದ 75 ಸಾವಿರ ಕ್ಯೂಸೆಕ್, ಮುನ್ನೇರು, ಕಟ್ಟಲೇರು, ವೈರಾಲಾ ಡ್ಯಾಮ್ಗಳಿಂದ 5 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟು 80 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಪುಲಿಚಿಂತಲ ಡ್ಯಾಮ್ನಿಂದ ಬರುವ ನೀರನ್ನು ನಿಲ್ಲಿಸಿ, ಪ್ರಕಾಶಂ ಬ್ಯಾರೇಜ್ನ ಗೇಟುಗಳನ್ನು ತೆರೆದರೆ ಮಾತ್ರ ನೀರಿನ ಪ್ರಮಾಣ ಕಡಿಮೆಯಾಗಿ ಲಾರಿಗಳು ಹೊರಗೆ ಬರಲು ಸಾಧ್ಯವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ: ರಾಜ್ಯ ರಾಜಧಾನಿಯಲ್ಲಿ ಬಿಗಿ ಭದ್ರತೆ - ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ