ETV Bharat / bharat

ತೆಲಂಗಾಣ ರಚನೆಯಾಗಿ ಇಂದಿಗೆ 84 ತಿಂಗಳು... ವಿಶ್ವ​ ದಾಖಲೆ ಮೂಲಕ ಆಚರಿಸಿದ 13ರ ಪೋರಿ - ಗನ ಸಂತೋಷಿನಿ ರೆಡ್ಡಿ

ಮೇ 31 ರಂದು ಹೈದೆರಾಬಾದ್​ನಲ್ಲಿ 13 ವರ್ಷದ ಗನ ಸಂತೋಷಿನಿ ರೆಡ್ಡಿ ಎಂಬ ಕರಾಟೆಪಟು ಕೇವಲ 84 ಸೆಕೆಂಡ್​ಗಳಲ್ಲಿ 84 ಸಿರಾಮಿಕ್ ಟೈಲ್ಸ್​ ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾಳೆ.

ತೆಲಂಗಾಣ ದಿನ
ತೆಲಂಗಾಣ ದಿನ
author img

By

Published : Jun 2, 2021, 5:53 AM IST

Updated : Jun 2, 2021, 6:25 AM IST

ಹೈದರಾಬಾದ್​: ಜೂನ್​ 2ಕ್ಕೆ ತೆಲಂಗಾಣ, ಆಂಧ್ರ ಪ್ರದೇಶದಿಂದ ಬೇರ್ಪಟ್ಟು ಸ್ವತಂತ್ರ ರಾಜ್ಯವಾಗಿ ಇಂದಿಗೆ 7 ವರ್ಷ ತುಂಬಿದೆ. ಈ ಸಂಭ್ರಮವನ್ನು ತೆಲಂಗಾಣದ ಬಾಲಕಿಯೊಬ್ಬಳು ಗಿನ್ನೆಸ್ ದಾಖಲೆ ಬ್ರೇಕ್ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದ್ದಾಳೆ.

ಮೇ 31 ರಂದು ಹೈದರಾಬಾದ್​ನಲ್ಲಿ 13 ವರ್ಷದ ಗನ ಸಂತೋಷಿನಿ ರೆಡ್ಡಿ ಎಂಬ ಕರಾಟೆಪಟು ಕೇವಲ 84 ಸೆಕೆಂಡ್​ಗಳಲ್ಲಿ 84 ಸಿರಾಮಿಕ್ ಟೈಲ್ಸ್​ ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾಳೆ. ತೆಲಂಗಾಣ ರಚನೆಯಾಗಿ ಇಂದಿಗೆ 84 ತಿಂಗಳು ಪೂರ್ಣಗೊಂಡಿದ್ದ ನೆನಪಿಗಾಗಿ ಈ ಸಾಧನೆ ಮಾಡಿದ್ದಾರೆ.

"ತೆಲಂಗಾಣದ ರಚನೆಯಾಗಿ 84 ತಿಂಗಳು ಪೂರ್ಣಗೊಂಡ ನೆನಪಿಗಾಗಿ ನಾನು 84 ಸೆಕೆಂಡ್​ಗಳಲ್ಲಿ 84 ಟೈಲ್ಸ್​ ಹೊಡೆದಿದ್ದೇನೆ. ಇದಕ್ಕಾಗಿ 5-6 ತಿಂಗಳಿನಿಂದ ಅಭ್ಯಾಸ ಮಾಡಿದ್ದೇನೆ" ಎಂದು ಸಂತೋಷಿನಿ ಹೇಳಿದ್ದಾರೆ.

ದಶಕಗಳ ಹೋರಾಟದ ಫಲವಾಗಿ ತೆಲಂಗಾಣ ರಾಜ್ಯ ಸ್ಥಾಪನೆಗೆ 2013 ಜಯಲೈನಲ್ಲಿ ಕೇಂದ್ರ ಒಪ್ಪಿಗೆ ನೀಡಿತ್ತು. ಜೂನ್ 2, 2014ರಂದು ಅಧಿಕೃತವಾಗಿ ತೆಲಂಗಾಣ ರಾಜ್ಯ 31 ಜಿಲ್ಲೆಗಳೊಂದಿಗೆ 29ನೇ ರಾಜ್ಯವಾಗಿ ರಚನೆಯಾಗಿತ್ತು.

ಇದನ್ನು ಓದಿ:ಲವ್ ಜರ್ನಿ: ಬೆಂಗಳೂರು -ಟು -ಹೈದರಾಬಾದ್.. ವಯಾ ಪಾಕಿಸ್ತಾನ! ಇದು ಪ್ರೇಮ್​ ಕಹಾನಿ!!

Last Updated : Jun 2, 2021, 6:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.