ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನರ್‌ರಚನೆಯಾಗುತ್ತಿದ್ದು, ನಮೋ ಕ್ಯಾಬಿನೆಟ್ನಲ್ಲಿ ಜ್ಞಾನಿಗಳಿಗೆ ಮಣೆ ಹಾಕಲಾಗುತ್ತಿದೆ. ಹೊಸದಾಗಿ ಸಂಪುಟ ಸೇರಿಕೊಳ್ಳುತ್ತಿರುವವರಲ್ಲಿ ಬಹುತೇಕರು ಉನ್ನತ ಶಿಕ್ಷಣ ಮುಗಿಸಿದವರು ಅನ್ನೋದು ಇಲ್ಲಿ ವಿಶೇಷ ಸಂಗತಿ.
-
Delhi | Prime Minister Narendra Modi's meet at Lok Kalyan Marg with BJP MPs, ahead of cabinet expansion. pic.twitter.com/ukJJQnW1X4
— ANI (@ANI) July 7, 2021 " class="align-text-top noRightClick twitterSection" data="
">Delhi | Prime Minister Narendra Modi's meet at Lok Kalyan Marg with BJP MPs, ahead of cabinet expansion. pic.twitter.com/ukJJQnW1X4
— ANI (@ANI) July 7, 2021Delhi | Prime Minister Narendra Modi's meet at Lok Kalyan Marg with BJP MPs, ahead of cabinet expansion. pic.twitter.com/ukJJQnW1X4
— ANI (@ANI) July 7, 2021
ಸಂಜೆ 6 ಗಂಟೆಗೆ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಮೋದಿ ನೂತನ ಕೇಂದ್ರ ಕ್ಯಾಬಿನೆಟ್ನಲ್ಲಿ 13 ವಕೀಲರು, 6 ಮಂದಿ ವೈದ್ಯರು, 5 ಇಂಜಿನಿಯರ್‌ಗಳು, 7 ಮಂದಿ ನಾಗರಿಕ ಸೇವೆಯಲ್ಲಿದ್ದವರು, 4 ಮಾಜಿ ಮುಖ್ಯಮಂತ್ರಿಗಳು, 18 ಮಂದಿ ಮಾಜಿ ಮಂತ್ರಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದ್ದು, 14 ನೂತನ ಸಚಿವರ ವಯಸ್ಸು 50ಕ್ಕಿಂತಲೂ ಕಡಿಮೆ ಇದೆ.
ಒಟ್ಟು 27 OBC ವರ್ಗದವರಿಗೆ ಹಾಗೂ 11 ಮಹಿಳೆಯರಿಗೂ ನಮೋ ಮಣೆ ಹಾಕಿದ್ದಾಗಿ ತಿಳಿದು ಬಂದಿದೆ. ಪ್ರಮುಖವಾಗಿ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ರಾಜಸ್ಥಾನ ಹಾಗೂ ತಮಿಳುನಾಡಿನ ಸಂಸದರು ಹೆಚ್ಚಿನ ಅವಕಾಶ ಪಡೆದಿದ್ದಾರೆ.
ಇದನ್ನೂ ಓದಿರಿ: ಖೂಬಾ ಸೇರಿ ಕರ್ನಾಟಕದ ಈ ನಾಲ್ವರಿಗೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ ಬಹುತೇಕ ಖಚಿತ
ಸಚಿವ ಸಂಪುಟ ವಿಸ್ತರಣೆಯಾಗುವುದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ಸಂಸದರು ಹಾಗೂ ಸಚಿವರೊಂದಿಗೆ ಚರ್ಚೆ ನಡೆಸಿದರು.