ಸೀತಾಮರ್ಹಿ (ಬಿಹಾರ): ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಾಲ್ಕು ವರ್ಷದ ಬಾಲಕಿಯ ಮೇಲೆ 12 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಸಿತಾಮರ್ಹಿ ಜಿಲ್ಲೆಯಲ್ಲಿ ವರದಿಯಾಗಿದೆ. ಕೆಲ ಅಶ್ಲೀಲ ವಿಡಿಯೋಗಳನ್ನು ನೋಡಿ ಆರೋಪಿ ಬಾಲಕ ಪ್ರಚೋದನೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ನಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಸಂತ್ರಸ್ತ ಬಾಲಕಿ ಇತ್ತೀಚೆಗೆ ತನ್ನ ಅಜ್ಜಿಯ ಮನೆಗೆ ಹೋಗಿದ್ದಳು. ಈ ವೇಳೆ, ಹೊರಗೆ ಆಟವಾಡುತ್ತಿದ್ದಾಗ 6ನೇ ತರಗತಿ ಓದುತ್ತಿದ್ದ 12 ವರ್ಷದ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ರಕ್ತಸ್ರಾವವಾಗಿ ಮನೆಗೆ ಬಂದ ಬಾಲಕಿ ಕುಟುಂಬಸ್ಥರಿಗೆ ತನ್ನ ನೋವನ್ನು ಹೇಳಿಕೊಂಡಾಗ ಈ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಸೈಬರ್ ಕಳ್ಳರಿದ್ದಾರೆ ಹುಷಾರ್.. ಇನ್ಸ್ಟಾಗ್ರಾಂ ಸ್ನೇಹಿತನಿಂದ 1 ಲಕ್ಷ ರೂ ವಂಚನೆ.. ಒಂದೇ ಗಂಟೆಯಲ್ಲಿ ಹಣ ವಾಪಸ್!
ಈ ವಿಷಯ ತಿಳಿದ ತಕ್ಷಣವೇ ಕುಟುಂಬಸ್ಥರು ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಇದಾದ ನಂತರ ಸಂತ್ರಸ್ತೆಯ ಅಜ್ಜಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ತನಿಖೆ ಆರಂಭಿಸಿ ಈಗಾಗಲೇ ಆರೋಪಿ ಬಾಲಕಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಆರೋಪಿಯನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾನ್ಪುರ್ ಪೊಲೀಸ್ ಠಾಣೆಯ ಪ್ರಭಾರಿ ರಾಕೇಶ್ ರಂಜನ್ ಝಾ, ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಹ ಅಪ್ರಾಪ್ತನಾಗಿದ್ದಾನೆ. ಈ ಘಟನೆಯ ಸಂಬಂಧ ದೂರು ಬಂದ ತಕ್ಷಣವೇ ಆತನ ಮನೆಯಿಂದಲೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ವಿಚಾರಣೆಯ ವೇಳೆ ಕೆಲವು ಅಶ್ಲೀಲ ವಿಡಿಯೋಗಳನ್ನು ನೋಡಿದ ಬಳಿಕ ತಾನು ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಬಾಯ್ಬಿಟಿದ್ದಾನೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ಕೊಂದು ಶವದ ಜೊತೆ ಫೇಸ್‌ಬುಕ್ ಲೈವ್! ಬಳಿಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಹೆಚ್ಚಿದ ಹೀನ ಕೃತ್ಯಗಳು: ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಬಲತ್ಕಾರ, ಅತ್ಯಾಚಾರ ಎಸಗಿಸುವ ಹೀನ ಕೃತ್ಯಗಳ ಹೆಚ್ಚುತ್ತೇವೆ. ಪುಟ್ಟ ಬಾಲಕಿಯರ ಮೇಲೂ ಕಾಮುಕರು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ. ಆತಂಕಕಾರಿ ಎಂದರೆ ಚಿಕ್ಕ ಹುಡುಗರು ಸಹ ಇಂತಹ ನೀಚ ಕೃತ್ಯಗಳನ್ನು ಎಸಗುತ್ತಿದ್ದಾರೆ.
ಈ ಹಿಂದೆ ಮಹಾರಾಷ್ಟ್ರದ ಬೀಡ್ನಲ್ಲೂ ಮೂರು ವರ್ಷದ ಬಾಲಕಿ ಮೇಲೆ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ. ಊಟ ಕೊಡಿಸುವುದಾಗಿ ಬಾಲಕಿಗೆ ಆಮಿಷ ಒಡ್ಡಿ ಬಲತ್ಕಾರ ಮಾಡಿದ್ದ. ಈ ವೇಳೆ ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ ಘಟನೆ ವರದಿಯಾಗಿತ್ತು.
ಇದನ್ನೂ ಓದಿ: ಅಕ್ರಮ ಮರಳು ಲಾರಿಗಳ ತಪಾಸಣೆ ವೇಳೆ ಗಣಿ ನಿರೀಕ್ಷಕನ ಜೀವಂತ ಸುಡಲು ಯತ್ನ