ETV Bharat / bharat

90 ಡಿಗ್ರಿ ತಿರುಗಿದ ಕತ್ತು; ಪಾಕಿಸ್ತಾನ ಬಾಲಕಿಗೆ ಮರುಜೀವ ನೀಡಿದ ಭಾರತದ ವೈದ್ಯರು

author img

By

Published : Jul 28, 2022, 6:14 PM IST

Updated : Jul 28, 2022, 6:40 PM IST

ಸಿಂಧ್ ಪ್ರಾಂತ್ಯದ 12 ವರ್ಷದ ಪಾಕಿಸ್ತಾನಿ ಬಾಲಕಿ ಅಫ್ಶಿನ್‌ಗೆ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ವಿಶಿಷ್ಟ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೊಸ ಜೀವನ ನೀಡಲಾಗಿದೆ.

ಮೊದಲು ಮತ್ತು ನಂತರದ ಫೋಟೋ
ಮೊದಲು ಮತ್ತು ನಂತರದ ಫೋಟೋ

ನವದೆಹಲಿ: 90 ಡಿಗ್ರಿಗಳಷ್ಟು ತಿರುಗಿದ ಕುತ್ತಿಗೆಯೊಂದಿಗೆ ಪಾಕಿಸ್ತಾನದ ಈ ಬಾಲಕಿ 10 ವರ್ಷಗಳ ಕಾಲ ಹೇಗೆ ಬದುಕಿರಬಹುದು ಎಂದು ಒಂಚೂರು ಕಲ್ಪನೆ ಮಾಡಿಕೊಂಡು ನೋಡಿ.. ಅಬ್ಬಾ ಎನಿಸುತ್ತದೆ. ಆದರೆ, ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇರುತ್ತದೆಯಲ್ಲವೇ? ಹಾಗೆಯೇ ಇದಕ್ಕೂ ಒಂದು ಪರಿಹಾರ ಈಗ ಸಿಕ್ಕಿದ್ದು, ಭಾರತದ ವೈದ್ಯರು ಈಕೆಯ ಕತ್ತನ್ನು ಮತ್ತೆ ಮೊದಲಿನ ರೀತಿ ಮಾಡುವಲ್ಲಿ ಸಫಲರಾಗಿದ್ದಾರೆ.

ಈಕೆ ಅಫ್​ಶೀನ್​. 12 ವರ್ಷ ವಯಸ್ಸು. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿ. ಈಕೆಗೆ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿದ್ದು, ಹೊಸ ಜೀವನ ನೀಡಿದ್ದಾರೆ. ಹಿರಿಯ ವೈದ್ಯ ಡಾ. ರಾಜಗೋಪಾಲನ್ ಕೃಷ್ಣನ್ ಈಕೆಗೆ 4 ಅತ್ಯಂತ ಸಂಕೀರ್ಣ ಶಸ್ತ್ರ ಚಿಕಿತ್ಸೆ ಮಾಡಿ, ಆಕೆ ಮತ್ತೆ ಸಹಜ ಜೀವನಕ್ಕೆ ಮರಳುವಂತೆ ಮಾಡಿದ್ದಾರೆ.

ಪೋಷಕರೊಂದಿಗೆ ಬಾಲಕಿ
ಪೋಷಕರೊಂದಿಗೆ ಬಾಲಕಿ

ಅಪಘಾತದಿಂದಾದ ಸಮಸ್ಯೆ : ಅಫ್​ಶೀನ್​ 10 ವರ್ಷದ ಬಾಲಕಿಯಾಗಿದ್ದಾಗ ಅಪಘಾತವೊಂದರಲ್ಲಿ ಕತ್ತು 90 ಡಿಗ್ರಿಗಳಷ್ಟು ತಿರುಗಿಕೊಂಡಿತ್ತು. ದಿನನಿತ್ಯದ ಎಲ್ಲ ಕೆಲಸಗಳಿಗೂ ಬಾಲಕಿ ಪರದಾಡುತ್ತಿದ್ದಳು. ಪಾಲಕರು ಬಾಲಕಿಯನ್ನು ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು. ಆದರೆ ಸಮಸ್ಯೆ ಪರಿಹಾರವಾಗುವ ಬದಲು ಮತ್ತಷ್ಟು ಹೆಚ್ಚಾಗಿತ್ತು.

ಈ ಅಸಾಮಾನ್ಯ ಸ್ಥಿತಿಯಿಂದಾಗಿ ಆಕೆಗೆ ಶಾಲೆಗೆ ಹೋಗಲಾಗಲಿಲ್ಲ. ತನ್ನ ವಯಸ್ಸಿನ ಮಕ್ಕಳೊಂದಿಗೆ ಆಟವಾಡಲು ಸಹ ಸಾಧ್ಯವಾಗಲಿಲ್ಲ. ಆಕೆಯ ಜೀವನ ದುಃಖದಿಂದ ತುಂಬಿತ್ತು. ಆದರೆ, ಸಮಯ ಕಳೆದಂತೆ ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಏತನ್ಮಧ್ಯೆ ಈಕೆಗೆ ಸೆರೆಬ್ರಲ್ ಪಾಲ್ಸಿಯಂಥ ಅಪಾಯಕಾರಿ ಕಾಯಿಲೆ ಕಾಣಿಸಿಕೊಂಡಿತು. ಎರಡು ಕ್ಲಿಷ್ಟಕರವಾದ ವೈದ್ಯಕೀಯ ಪರಿಸ್ಥಿತಿಗಳ ಮಧ್ಯೆ ಆಕೆಗೆ ಶಾಲಾಭ್ಯಾಸ ದೂರವೇ ಉಳಿಯಿತು. ಹೀಗೇಯೇ ಬಾಲಕಿ 12 ವರ್ಷ ಕಳೆದಿದ್ದಳು.

ಮೊದಲು ಮತ್ತು ನಂತರದ ಫೋಟೋ
ಮೊದಲು ಮತ್ತು ನಂತರದ ಫೋಟೋ

ಎದುರಾದ ಎರಡು ಸಮಸ್ಯೆ: ಈ ಮಧ್ಯೆ, ಅವಳಿಗೆ ಹೊಸ ಜೀವನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಘಟನೆಯೊಂದು ನಡೆಯಿತು. ಆಕೆಯ ತಾಯಿ ಬಾಲಕಿಯನ್ನು ತಪಾಸಣೆಗಾಗಿ ವೈದ್ಯಕೀಯ ಶಿಬಿರವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯ ವಿಚಿತ್ರ ಕುತ್ತಿಗೆ ಜನರ ಗಮನ ಸೆಳೆದಿತ್ತು. ಈ ಮಾಹಿತಿಯು ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನಿ ನಟ ಅಹ್ಸನ್ ಖಾನ್ ಅವರನ್ನು ತಲುಪಿದಾಗ, ಅವರು ಬಾಲಕಿಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ, "ಅಫ್​ಶೀನ್​​ಗೆ ನಮ್ಮ ಸಹಾಯ ಬೇಕು" ಎಂದು ಬರೆದಿದ್ದರು.

ಸಹಾಯ ಮಾಡಿದ ಪೋಸ್ಟ್​: ಈ ವೈರಲ್ ಚಿತ್ರವನ್ನು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಪೋಸ್ಟ್ ಮಾಡಲಾಗಿತ್ತು ಹಾಗೂ ಈ ಚಿತ್ರ ಡಾ. ರಾಜಗೋಪಾಲನ್ ಕೃಷ್ಣನ್ ಗಮನಕ್ಕೆ ಬಂದಿತ್ತು. ಆಗ ಅವರು ಬಾಲಕಿಗೆ ಉಚಿತವಾಗಿ ಚಿಕಿತ್ಸೆ ನೀಡಲು ನಿರ್ಧರಿಸಿ, ಬಾಲಕಿಯ ತಂದೆಯನ್ನು ಸಂಪರ್ಕಿಸಿ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಕರೆಸಿದರು.

ನಂತರ ಚಿಕಿತ್ಸೆಯ ವೆಚ್ಚವನ್ನು ಆನ್‌ಲೈನ್ ನಿಧಿಸಂಗ್ರಹಣೆಯ ಮೂಲಕ ಸಂಗ್ರಹಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಆಕೆಯ ಹೃದಯ ಮತ್ತು ಶ್ವಾಸಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಬಹುದು ಎಂದು ಡಾ.ಕೃಷ್ಣನ್ ಆತಂಕ ವ್ಯಕ್ತಪಡಿಸಿದ್ದರು. ಆದರೂ ನಾಲ್ಕು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಬಾಲಕಿಯ ಕುತ್ತಿಗೆಯನ್ನು ಮೊದಲಿನಂತೆ ಮಾಡುವಲ್ಲಿ ವೈದ್ಯರು ಸಫಲರಾದರು.

ಬಾಲಕಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅವಳು ಹೆಚ್ಚು ದಿನ ಬದುಕುತ್ತಿರಲಿಲ್ಲ ಎಂದು ಡಾ. ಕೃಷ್ಣನ್ ಹೇಳಿದ್ದಾರೆ. ಈಗಲೂ ಪ್ರತಿ ವಾರ ವಿಡಿಯೋ ಕಾಲ್ ಮೂಲಕ ಅಫ್​ಶೀನ್ ಆರೋಗ್ಯದ ಮೇಲೆ ಅವರು ನಿಗಾ ಇಟ್ಟಿದ್ದಾರೆ. ಬಾಲಕಿಯ ಸಹೋದರ ಯಾಕೂಬ್ ಕುಂಬಾರ್ ಸಂತಸ ವ್ಯಕ್ತಪಡಿಸಿದ್ದು, ಭಾರತದ ವೈದ್ಯರು ದೇವರಂತೆ ಬಂದು ಸಹೋದರಿಯ ಜೀವ ಉಳಿಸಿದ್ದಾರೆ. ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.

ಚಿಕಿತ್ಸೆ ನಂತರ
ಚಿಕಿತ್ಸೆ ನಂತರ

ಸಂತಸಗೊಂಡಿರುವ ಪಾಲಕರು: ಈ ವರ್ಷದ ಫೆಬ್ರವರಿಯಲ್ಲಿ ಬಾಲಕಿಗೆ ಮುಖ್ಯ ಶಸ್ತ್ರಚಿಕಿತ್ಸೆ ಮಾಡಲಾಯಿತು. 6 ತಿಂಗಳುಗಳನ್ನು ಪೂರೈಸಿದ ನಂತರ ಸಂಪೂರ್ಣವಾಗಿ ಬಾಲಕಿ ಆರೋಗ್ಯವಾಗಿದ್ದಾಳೆ ಮತ್ತು ಹೊಸ ಜೀವನವನ್ನು ಆನಂದಿಸುತ್ತಿದ್ದಾಳೆ.

ಅಫ್ಶಿನ್‌ಗ ಚಿಕಿತ್ಸೆ ನೀಡಿದ ಡಾ.ಕೃಷ್ಣನ್, ಬಾಲಕಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅವಳು ಹೆಚ್ಚು ದಿನ ಬದುಕುತ್ತಿರಲಿಲ್ಲ. ಆದರೆ, ಅವಳು ಬದುಕಬೇಕಿತ್ತು. ಅದಕ್ಕಾಗಿಯೇ ಅವಳು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳವನ್ನು ವಿವಿಧ ಮಾರ್ಗಗಳ ಮೂಲಕ ತಲುಪಿದ್ದಾಳೆ ಅಂತಾರೆ ಬಾಲಕಿಯ ಪೋಷಕರು.

ಈಗಲೂ ಪ್ರತಿ ವಾರ ವಿಡಿಯೋ ಕಾಲ್ ಮೂಲಕ ಅಫ್ಶಿನ್ ಆರೋಗ್ಯದ ಮೇಲೆ ನಿಗಾ ಇಡುತ್ತಿದ್ದಾರೆ. ಆಕೆಯ ಸಹೋದರ ಯಾಕೂಬ್ ಕುಂಬಾರ್ ಸಂತಸ ವ್ಯಕ್ತಪಡಿಸಿ, ಭಾರತದ ವೈದ್ಯರು ದೇವರಾಗುವ ಮೂಲಕ ತಮ್ಮ ಸಹೋದರಿಯ ಜೀವವನ್ನು ಉಳಿಸಿದರು ಎಂದು ಹೊಗಳಿದರು.

ಇದನ್ನೂ ಓದಿ: 8 ವರ್ಷದಲ್ಲಿ 22 ಕೋಟಿ ಯುವಕರಿಂದ ಅರ್ಜಿ.. ದೇಶದಲ್ಲಿನ ನಿರುದ್ಯೋಗ ತೆರೆದಿಟ್ಟ ವರುಣ್​ ಗಾಂಧಿ!

Last Updated : Jul 28, 2022, 6:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.