ಚಿಂದ್ವಾರಾ(ಮಧ್ಯಪ್ರದೇಶ): ಅದೆಷ್ಟೋ ಗೇಮ್ಗಳು ಮಕ್ಕಳ ಪ್ರಾಣವನ್ನೇ ಬಲಿ ಪಡೆದಿವೆ. ಆದರೆ, ಇಲ್ಲೊಬ್ಬ 12 ವರ್ಷದ ಬಾಲಕ ತನ್ನ ಅಕ್ಕ ಆಟವಾಡಲು (ಗೇಮ್) ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಪರಾಸಿಯಾದ ಕೊಹ್ಕಾ ದಮುವಾ ಎಂಬ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ರುಕ್ಮನ್ಶಾ(12) ಮೃತ ದುರ್ದೈವಿ ಬಾಲಕ. ರುಕ್ಮನ್ಶಾ ಮತ್ತು ತನ್ನ ಅಕ್ಕ ಇಬ್ಬರು ಸೇರಿಕೊಂಡು ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದರು. ಈ ವೇಳೆ, ತನಗೆ ಮೊಬೈಲ್ ಕೊಡಲು ರುಕ್ಮನ್ ಶಾ ಕೇಳಿಕೊಂಡಿದ್ದಾನೆ. ಈ ವೇಳೆ, ಅವನ ಅಕ್ಕ ಮೊಬೈಲ್ ಕೊಡಲು ನಿರಾಕರಿಸಿದ್ದಾರೆ. ಕೋಪಗೊಂಡ ರುಕ್ಮನ್ ಶಾ ಕೋಣೆಯೊಂದರಲ್ಲಿ ಹೋಗಿ ನೇಣು ಬಿಗಿದುಕೊಂಡಿದ್ದಾನೆ.
ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ!
ಎಷ್ಟೊತ್ತಾದರೂ ಮಗ ಕೋಣೆಯಿಂದ ಹೊರಬರದ ಕಾರಣ ಬಾಲಕನ ತಂದೆ ಕೋಣೆಗೆ ಹೋಗಿ ನೋಡಿದಾಗ ಬಾಲಕ ನೇಣು ಬಿಗಿದುಕೊಂಡಿದ್ದು ಗೊತ್ತಾಗಿದೆ. ನೇಣಿನ ಕುಣಿಕೆ ಬಿಚ್ಚಿ ಪರೀಕ್ಷಿಸಿದರೂ ಅಷ್ಟೊತ್ತಿಗಾಗಲೇ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು.
ವಿಷಯ ತಿಳಿದು ಪೊಲೀಸರು ಮತ್ತು ವೈದ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ವೈದ್ಯರು ಬಾಲಕನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕೇವಲ ಗೇಮ್ ಆಡಲು ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಮಗು ಪ್ರಾಣ ಕಳೆದುಕೊಂಡಿದ್ದು, ಅವಳ ಅಕ್ಕ ಸೇರಿದಂತೆ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ.