ಮುಂಬೈ (ಮಹಾರಾಷ್ಟ್ರ) : ಇಂದು ಮುಂಜಾನೆ ಸಮಯದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು 12 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಾಳುಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮರಾವತಿ ಜಿಲ್ಲೆಯ ದರ್ಯಾಪುರ ತಾಲೂಕಿನಲ್ಲಿ ಮೊದಲ ಘಟನೆ ನಡೆದಿದೆ.
ಈ ಘಟನೆಯಲ್ಲಿ ಟ್ರಕ್‌ಗೆ ಟಾಟಾ ಸುಮೋ ಡಿಕ್ಕಿ ಹೊಡೆದು ಒಂದೇ ಕುಟುಂಬದ 5 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಟುಂಬದ ಕಾರ್ಯಕ್ರಮವನ್ನು ಮುಗಿಸಿkಒಂಡು ದರ್ಯಾಪುರದಿಂದ ಅಂಜನಗಾಂವ್ ಕಡೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಟಾಟಾ ಸುಮೋದಲ್ಲಿ ಒಟ್ಟು 17 ಮಂದಿ ಕುಳಿತಿದ್ದರು. ಈ ವಾಹನಕ್ಕೆ ಎದುರುಗಡೆಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : 'ದಿ ಕೇರಳ ಸ್ಟೋರಿ' ನೋಡಿ ಅತ್ಯಾಚಾರ, ಮತಾಂತರಕ್ಕೆ ಬಲವಂತ: ಪ್ರೇಮಿ ವಿರುದ್ಧ ಯುವತಿ ಕೇಸ್, ಅರೆಸ್ಟ್
ಟಾಟಾ ಸುಮೋದಲ್ಲಿದ್ದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಮೊದಲು ದರ್ಯಾಪುರದ ಉಪಜಿಲಾ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಅಪಘಾತದಲ್ಲಿ ಗಾಯಗೊಂಡವರಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಈ ಸಂಬಂಧ ಖಲ್ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಂಟೇನರ್ಗೆ ಬಸ್ ಡಿಕ್ಕಿ : ಮತ್ತೊಂದು ಘಟನೆ ನಾಗಪುರ ಮತ್ತು ಪುಣೆ ಹೆದ್ದಾರಿಯ ಸಿಂಧ್‌ಖೇಡ್ ರಾಜಾ ಮತ್ತು ಮೆಹಕರ್ ನಡುವಿನ ಪಾಲಸ್ಖೇಡ್ ಚಕ್ಕಾ ಗ್ರಾಮದ ಬಳಿ ನಡೆದಿದ್ದು, ಕಂಟೇನರ್ಗೆ ಮಹಾರಾಷ್ಟ್ರದ ಸಾರಿಗೆ ಬಸ್ ಡಿಕ್ಕಿಯಾಗಿದೆ. ಪರಿಣಾಮ ಬಸ್ ಚಾಲಕ ರಾಜು ಟಿ ಕುಲಾಲ್ ಎಂಬವವರು ಸೇರಿ ಒಟ್ಟು 7 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ್ದಾರೆ. 10 ರಿಂದ 15 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಮಾಡಿದ ಬಸ್ ಮೆಹಕರ್‌ಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಅಪಾರ್ಟ್‌ಮೆಂಟ್‌ನಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಬಿದ್ದ ಡೆಲಿವರಿ ಏಜೆಂಟ್
ವಿದ್ಯಾರ್ಥಿಗಳಿದ್ದ ಬೈಕ್ಗೆ ಕಾರು ಡಿಕ್ಕಿ; ಓರ್ವ ಸಾವು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಮಾಣಿ- ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಇಬ್ಬರು ಕೂಡ ಸ್ಥಳದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಒಬ್ಬನಿಗೆ ತಲೆಗೆ ಜಾಸ್ತಿ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾನೆ. ಅಪಘಾತಕ್ಕೀಡಾದ ವಿದ್ಯಾರ್ಥಿಗಳನ್ನು ಸಂಭ್ರಮ್ ಮತ್ತು ಸ್ವರೂಪ್ ಎಂದು ಗುರುತಿಸಲಾಗಿದೆ. ಇನ್ನು ಅಪಘಾತವೆಸಗಿದ ಕಾರಿನ ಚಾಲಕನ ಸತೀಶ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಾಗಿದೆ.
ಇದನ್ನೂ ಓದಿ : ಅಪಾರ್ಟ್‌ಮೆಂಟ್‌ನಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಬಿದ್ದ ಡೆಲಿವರಿ ಏಜೆಂಟ್