ಚಮೋಲಿ (ಉತ್ತರಾಖಂಡ): ಉತ್ತರಾಖಂಡನಲ್ಲಿ ಭಾರಿ ದುರಂತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೋವೊಂದು 700 ಮೀಟರ್ ಆಳದ ಕಮರಿಗೆ ಬಿದ್ದು, 12 ಜನರು ಮೃತಪಟ್ಟಿದ್ದಾರೆ.
ಚಮೋಲಿಯ ಜೋಶಿಮಠ ಸಮೀಪ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಟಾಟಾ ಸುಮೋದಲ್ಲಿ 12-13 ಮಂದಿ ಪ್ರಯಾಣಿಸುತ್ತಿದ್ದರು. ಇದೀಗ ಇಬ್ಬರು ಮಹಿಳೆಯರು ಹಾಗೂ ಹತ್ತು ಪುರುಷರ ಮೃತದೇಹಗಳು ಪತ್ತೆಯಾಗಿದೆ.
-
UPDATE | Chamoli, Uttarakhand: Dead bodies of 2 women & 10 men travelling in vehicle have been recovered by the team: SDRF
— ANI UP/Uttarakhand (@ANINewsUP) November 18, 2022 " class="align-text-top noRightClick twitterSection" data="
">UPDATE | Chamoli, Uttarakhand: Dead bodies of 2 women & 10 men travelling in vehicle have been recovered by the team: SDRF
— ANI UP/Uttarakhand (@ANINewsUP) November 18, 2022UPDATE | Chamoli, Uttarakhand: Dead bodies of 2 women & 10 men travelling in vehicle have been recovered by the team: SDRF
— ANI UP/Uttarakhand (@ANINewsUP) November 18, 2022
ಈ ಘಟನೆ ಮಾಹಿತಿ ಸಿಕ್ಕ ಕೂಡಲೇ ಎಸ್‌ಡಿಆರ್‌ಎಫ್ ಮತ್ತು ಜೋಶಿಮಠ ಪೊಲೀಸ್ ತಂಡವು ಸ್ಥಳಕ್ಕೆ ತೆರಳಿದೆ. ಚಮೋಲಿ ಡಿಎಂ ಮತ್ತು ಎಸ್‌ಎಸ್‌ಪಿ ಕೂಡ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಕಾಡಿನಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ - ಯುವತಿಯ ಶವ ಪತ್ತೆ