ನವದೆಹಲಿ: ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ. ವಿಪಕ್ಷಗಳ ಗದ್ದಲ, ಗಲಾಟೆ ಜೋರಾಗಿದೆ. ಇದರ ಬೆನ್ನಲ್ಲೇ ಈ ಹಿಂದೆ ನಡೆದ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿರುವ ಗಂಭೀರ ಆರೋಪದ ಮೇಲೆ ರಾಜ್ಯಸಭೆಯ 12 ವಿಪಕ್ಷ ಸಂಸದರು ಅಮಾನತಾಗಿದ್ದಾರೆ.
ಅಮಾನತುಗೊಂಡಿರುವ ಸಂಸದರು:
- ಎಳಮರಮ್ ಕರೀಂ (CPM)
- ಫುಲೋ ದೇವಿ ನೇತಮ್ (INC)
- ಛಾಯಾ ವರ್ಮಾ (INC)
- ರಿಪುನ್ ಬೋರಾ (INC)
- ಬಿನೋಯ್ ವಿಶ್ವಂ (CPM)
- ರಾಜಮಣಿ ಪಟೇಲ್ (INC)
- ಡೋಲಾ ಸೇನ್ (TMC)
- ಶಾಂತಾ ಛೆಟ್ರಿ (TMC)
- ಸೈಯದ್ ನಾಸಿರ್ ಹುಸೇನ್ (INC)
- ಪ್ರಿಯಾಂಕಾ ಚತುರ್ವೇದಿ (Shiv Sena)
- ಅನಿಲ್ ದೇಸಾಯಿ (Shiv Sena)
- ಅಖಿಲೇಶ್ ಪ್ರಸಾದ್ ಸಿಂಗ್ (INC)
ಪ್ರಕರಣದ ವಿವರ:
ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಸಂಸತ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ನಿಯಮ ದುರುಪಯೋಗ ಹಾಗೂ ಅಶಿಸ್ತಿನಿಂದ ನಡೆದುಕೊಂಡಿರುವ ಕಾರಣ ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಪೆಗಾಸಸ್, ಕೃಷಿ ಕಾಯ್ದೆ ಮಸೂದೆ ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ನಿರಂತರವಾಗಿ ಸದನಕ್ಕೆ ಅಡ್ಡಿಪಡಿಸಲಾಗುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಈ 12 ವಿರೋಧ ಪಕ್ಷದ ಸಂಸದರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.