ETV Bharat / bharat

ಮುತ್ತೂಟ್​ ಫೈನಾನ್ಸ್ ಕಚೇರಿಯಲ್ಲಿ 12 ಕೆಜಿ ಚಿನ್ನ, 3 ಲಕ್ಷ ನಗದು ದರೋಡೆ - ಅಸಾನ್​ಸೋಲ್​ ಮುತ್ತೂಟ್ ಫೈನಾನ್ಸ್

ಮುತ್ತೂಟ್​ ಫೈನಾನ್ಸ್ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು, ಕಚೇರಿಯ ಸಿಬ್ಬಂದಿಯನ್ನು ಬೆದರಿಸಿ 12 ಕೆಜಿ ಚಿನ್ನ, ಮೂರು ಲಕ್ಷ ರೂಪಾಯಿ ನಗದು ದೋಚಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣ ನಡೆದಿದೆ.

12 kg gold, 3 lakh cash looted at gunpoint in WB's Asansol
ಮುತ್ತೂಟ್​ ಫೈನಾನ್ಸ್ ಕಚೇರಿಯಲ್ಲಿ 12 ಕೆಜಿ ಚಿನ್ನ, 3 ಲಕ್ಷ ನಗದು ದರೋಡೆ
author img

By

Published : Sep 12, 2021, 9:04 AM IST

ಅಸಾನ್​ಸೋಲ್(ಪಶ್ಚಿಮ ಬಂಗಾಳ): ನಾಲ್ವರು ದುಷ್ಕರ್ಮಿಗಳು ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ದರೋಡೆ ಮಾಡಿರುವ ಘಟನೆ ಅಸಾನ್​ಸೋಲ್​ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶನಿವಾರ ಬೆಳಗ್ಗೆ ಅಸಾನ್​ಸೋಲ್​ ಮುತ್ತೂಟ್​ ಫೈನಾನ್ಸ್​ ಘಟನೆ ಸಂಭವಿಸಿದ್ದು, ಅಪರಿಚಿತರು ಕಚೇರಿಗೆ ನುಗ್ಗಿದ್ದಾರೆ. ಅಲ್ಲಿನ ನೌಕರರಿಗೆ ಗನ್ ತೋರಿಸಿ ಬೆದರಿಸಿ, ಸುಮಾರು 12 ಕೆಜಿ ಚಿನ್ನ ಮತ್ತು ಮೂರು ಲಕ್ಷ ರೂಪಾಯಿ ನಗದು ದೋಚಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿಯ ನೌಕರರಾದ ಸೊನಾಲಿ, ಓರ್ವ ವ್ಯಕ್ತಿ ಕಚೇರಿಗೆ ನುಗ್ಗಿ ಎಲ್ಲರನ್ನೂ ಗನ್ ಪಾಯಿಂಟ್​​ನಿಂದ ಬೆದರಿಸಿದನು. ಉಳಿದ ಮೂವರು ಸೆಕ್ಯೂರಿಟಿ ಗಾರ್ಡ್​ನನ್ನು ಥಳಿಸಿದರು ಎಂದು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ದಿಢೀರ್​ ರಾಜಕೀಯ ಬೆಳವಣಿಗೆ: ವೀಕ್ಷಕರಾಗಿ ಜೋಶಿ, ತೋಮರ್ ಗುಜರಾತ್​ಗೆ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.