ಗುರುದಾಸ್ಪುರ್(ಪಂಜಾಬ್): ಪಿಟ್ಬುಲ್ ನಾಯಿಯೊಂದು 12 ಜನರ ಮೇಲೆ ದಾಳಿ ನಡೆಸಿರುವ ಘಟನೆ ಜಿಲ್ಲೆಯ ದೀನಾನಗರ ಎಂಬ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ.
ಕಳೆದ ರಾತ್ರಿ ದೀನಾನಗರದ ಟಂಗೋಶಾ ಎಂಬ ಪ್ರದೇಶದಿಂದ ಚೌಹಣ ಹಳ್ಳಿಯ ವರೆಗೂ ಒಟ್ಟು 5 ಗ್ರಾಮಗಳಲ್ಲಿನ 12 ಜನರ ಮೇಲೆ ಪಿಟ್ಬುಲ್ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಮೊದಲಿಗೆ ಟಂಗೋಶಾ ಗ್ರಾಮದ ಇಬ್ಬರು ಕಾರ್ಮಿಕರ ಮೇಲೆ ದಾಳಿ ನಡೆಸಿದ ನಾಯಿ ಬಳಿಕ ಅದೇ ಗ್ರಾಮದ 60 ವರ್ಷದ ದಿಲೀಪ್ ಕುಮಾರ್ ಎಂಬುವವರ ಮೇಲೆ ದಾಳಿ ನಡೆಸಿದೆ.
ಇದೇ ವೇಳೆ, ಅಲ್ಲಿದ್ದಂತಹ ಬೀದಿ ನಾಯಿಯೊಂದು ಪಿಟ್ಬುಲ್ ಜತೆ ಕಾದಾಟಕ್ಕಿಳಿದಿದ್ದು, ದಿಲೀಪ್ ಕುಮಾರ್ ನಾಯಿಯಿಂದ ತಪ್ಪಿಸಿಕೊಂಡು ಮನೆಕಡೆ ಓಡಲು ಪ್ರಾರಂಭಿಸಿದ್ದರಾದರೂ ಅವರನ್ನು ಬೀಡದೇ ನಿರಂತರ ದಾಳಿ ನಡೆಸಿದ್ದು, ಅವರ ತಲೆ ಭಾಗಕ್ಕೆ ಗಂಭೀರ ಗಾಯ ಮಾಡಿದೆ. ಬಳಿಕ ಹೇಗೋ ಅವರ ಸಹೋದರ ಅದನ್ನು ಬೆಧರಿಸಿ ದಿಲೀಪ್ ಅವರನ್ನ ರಕ್ಷಣೆ ಮಾಡಿದ್ದಾರೆ.
ಇನ್ನು ಅಲ್ಲಿಂದ ಕಾಲ್ಕಿತ್ತ ನಾಯಿ ಅದೇ ಗ್ರಾಮದ ನಿವೃತ ಸೇನಾಧಿಕಾರಿ ಕ್ಯಾಪ್ಟನ್ ಶಕ್ತಿ ಸಿಂಗ್ ಎಂಬುವವರ ಮೇಲೆ ದಾಳಿ ಮಾಡಿ ಅವರ ಕೈಗೆ ತೀವ್ರವಾಗಿ ಗಾಯಗೊಳಿಸಿದೆ. ಇನ್ನು ದಾಳಿಗೊಳಗಾದ ಶಕ್ತಿಸಿಂಗ್ ಜೋರಾಗಿ ಕಿರುಚಾಡಿದ್ದಾರೆ. ಅವರ ಕೂಗಾಟ ಕೇಳಿದ ಗ್ರಾಮದ ಜನರೆಲ್ಲ ಸೇರಿ ಅದನ್ನ ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ. ಇನ್ನು ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನ ಜಿಲ್ಲಾಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಇದನ್ನೂ ಓದಿ: ಹರಿದ್ವಾರ: ಅರ್ಧ ಗಂಟೆಯಲ್ಲಿ 25 ಜನರಿಗೆ ಕಚ್ಚಿದ ನಾಯಿ, ಹೊಡೆದು ಕೊಂದ ಜನರು