ETV Bharat / bharat

12.5 ಕೋಟಿ ಜನರು 2ನೇ ಡೋಸ್​ ಕೋವಿಡ್ ಲಸಿಕೆ ಪಡೆದಿಲ್ಲ: ಕೇಂದ್ರ ಸರ್ಕಾರದ ಮಾಹಿತಿ - ಲೋಕಸಭೆಯಲ್ಲಿ ಭಾರತಿ ಪ್ರವೀಣ್​ ಪವಾರ್​ ಮಾಹಿತಿ

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟ ಮುಂದುವರೆದಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಮಧ್ಯೆ ಕೂಡ ಮೊದಲ ಡೋಸ್​ ಪಡೆದುಕೊಂಡಿರುವ 12.5 ಕೋಟಿ ಜನರು ಅವಧಿ ಮುಕ್ತಾಯಗೊಂಡಿದ್ದರೂ ಕೂಡ 2ನೇ ಡೋಸ್ ಪಡೆದಿಲ್ಲ ಎಂದು ಕೇಂದ್ರ ಮಾಹಿತಿ ನೀಡಿದೆ.

Bharati Pravin Pawar in Lok Sabha
Bharati Pravin Pawar in Lok Sabha
author img

By

Published : Dec 3, 2021, 9:18 PM IST

ನವದೆಹಲಿ: ದೇಶದಲ್ಲಿ ಈಗಾಗಲೇ 125 ಕೋಟಿ ಕೋವಿಡ್​​ ಡೋಸ್​​ ನೀಡಲಾಗಿದೆ ಎಂಬ ಮಾಹಿತಿಯನ್ನ ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಆದರೆ, ಇದರಲ್ಲಿ ಮೊದಲ ಡೋಸ್​​ ಪಡೆದುಕೊಂಡಿರುವ 12.5 ಕೋಟಿ ಜನರು ಎರಡನೇ ಡೋಸ್ ವ್ಯಾಕ್ಸಿನ್​​​​​ ಪಡೆದುಕೊಳ್ಳಲು ಹಿಂದೇಟು ಹಾಕಿದ್ದಾರೆಂಬ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್​ ಪವಾರ್​ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಕೋವಿಡ್​-19 ಲಸಿಕೆಯ ಎರಡನೇ ಡೋಸ್​ ಪಡೆದುಕೊಳ್ಳುವುದರಿಂದ ಹಿಂದೆ ಸರಿದಿರುವವರ ಸಂಖ್ಯೆ 12.5 ಕೋಟಿ ಆಗಿದೆ ಎಂದರು.

ನವೆಂಬರ್​​ 30ರವರೆಗಿನ ಮಾಹಿತಿ ಪ್ರಕಾರ ನಿಗದಿತ ಅವಧಿಯೊಳಗೆ ಇವರೆಲ್ಲರೂ ವ್ಯಾಕ್ಸಿನ್​ ಪಡೆದುಕೊಳ್ಳಬೇಕಾಗಿತ್ತು. ಆದರೆ, ಅವರು ಡೋಸ್​ ಪಡೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದರು. ಇಂತಹವರನ್ನ ಗುರುತಿಸಿ ವ್ಯಾಕ್ಸಿನ್​ ನೀಡಲು ಕೇಂದ್ರ ಸರ್ಕಾರ ನವೆಂಬರ್​​​ 3ರಿಂದಲೇ ಹರ್​ ಘರ್​​ ದಸ್ತಕ್​ ಅಭಿಯಾನ ಆರಂಭ ಮಾಡಿದ್ದು, ಇದರಲ್ಲಿ ಮೊದಲ ಹಾಗೂ ಎರಡನೇ ಡೋಸ್​​​ ಪಡೆದುಕೊಳ್ಳದ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿರಿ: ದೆಹಲಿ ಆಸ್ಪತ್ರೆಯಲ್ಲೂ 12 ಶಂಕಿತ Omicron​ ಪ್ರಕರಣ​ ಪತ್ತೆ?

ಕೋವಿಡ್​ ವ್ಯಾಕ್ಸಿನೇಷನ್​​ ವ್ಯಾಪ್ತಿಗಾಗಿ ಜಿಲ್ಲಾವರು ಯೋಜನೆ ರೂಪಿಸಲಾಗಿದ್ದು, ಅಧಿಕಾರಿಗಳು ಎಲ್ಲರಿಗೂ ವ್ಯಾಕ್ಸಿನ್​ ತಲುಪಿಸುವ ಕ್ರಮ ಕೈಗೊಂಡಿದ್ದಾರೆ ಎಂದರು. ಉತ್ತರ ಪ್ರದೇಶದಲ್ಲಿ ಎರಡನೇ ಡೋಸ್​​ನಿಂದ 2,11,29,397 ಜನರು ತಪ್ಪಿಸಿಕೊಂಡಿದ್ದು, ರಾಜಸ್ಥಾನದಿಂದ 1,23,32,133 ಜನರು, ಮಹಾರಾಷ್ಟ್ರದಿಂದ 1,00,31,101, ಬಿಹಾರ 93,60,859 ಮತ್ತು ತಮಿಳುನಾಡಿನಿಂದ 80,50,574 ಫಲಾನುಭವಿಗಳು ಹೊರಗುಳಿದಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.