ETV Bharat / bharat

ಸೂರತ್‌ನ 11 ವರ್ಷದ ಬಾಲೆಯಿಂದ ರಾಮ ಮಂದಿರಕ್ಕೆ 50 ಲಕ್ಷ ರೂ. ದೇಣಿಗೆ ಸಂಗ್ರಹ!

ಸೂರತ್‌ನ 11 ವರ್ಷದ ಭಾವಿಕಾ 4 ರಾಮಕಥೆಗಳನ್ನು ಮಾಡುವ ಮೂಲಕ ರಾಮ ಮಂದಿರಕ್ಕೆ 50 ಲಕ್ಷ ರೂ. ದೇಣಿಗೆ ನೀಡಿದ್ದಾಳೆ.

11-year-old Bhavika from Surat did 4 Ramakathas and collected Rs 50 lakh for Ram Mandir Construction
ಸೂರತ್‌ನ 11 ವರ್ಷದ ಬಾಲೆಯಿಂದ ರಾಮಮಂದಿರಕ್ಕೆ 50 ಲಕ್ಷ ರೂ. ದೇಣಿಗೆ ಸಂಗ್ರಹ!
author img

By

Published : Feb 11, 2021, 8:42 PM IST

Updated : Feb 11, 2021, 9:00 PM IST

ಸೂರತ್: ಅಯೋಧ್ಯೆಯಲ್ಲಿ ಭವ್ಯವಾದ ರಾಮ ದೇವಾಲಯ ನಿರ್ಮಿಸಲು ರಾಮ ಮಂದಿರ ಅಯೋಧ್ಯೆ ಸಮರ್ಪಣ ನಿಧಿ ಅಡಿಯಲ್ಲಿ ಜನರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಈ ಹಿನ್ನೆಲೆ ಸೂರತ್‌ನ 11 ವರ್ಷದ ಬಾಲಕಿ ಭಾವಿಕಾ, ಸೂರತ್‌ನಲ್ಲಿ 4 ರಾಮ ಕಥೆಗಳ ಕೀರ್ತನೆ ಆಯೋಜನೆ ಮಾಡಿ ಈ ಮೂಲಕ 50 ಲಕ್ಷ ರೂ. ಸಂಗ್ರಹಿಸಿ ಆ ಮೊತ್ತವನ್ನು ದೇಣಿಗೆ ನೀಡಿದ್ದಾಳೆ.

ಸೂರತ್‌ನ ಈ 11 ವರ್ಷದ ಪುಟ್ಟ ಹುಡುಗಿ ರಾಮ ಭಕ್ತಿಯನ್ನು ಈ ಮುಖಾಂತರ ತೋರಿಸಿದ್ದಾಳೆ. ಈ ಬಾಲಕಿ ಲಾಕ್ ಡೌನ್ ಸಮಯದಲ್ಲಿ ಭಗವದ್ಗೀತೆಯನ್ನು ಶಾಲಾ ಶಿಕ್ಷಣದೊಂದಿಗೆ ಅಧ್ಯಯನ ಮಾಡಲು ಪ್ರಾರಂಭಿಸಿದಳು, ನಂತರ ರಾಮಾಯಣವನ್ನು ಪಠಿಸುವಾಗ ಭಗವಾನ್ ರಾಮನ ಅಸ್ತಿತ್ವ ಮತ್ತು ಅವನ ಶ್ರೇಷ್ಠತೆಯ ಬಗ್ಗೆ ಅವಳು ತಿಳಿದುಕೊಂಡಳು. ನಂತರ ರಾಮಮಂದಿರ ನಿರ್ಮಾಣ ಹಾಗೂ ದೇಣಿಗೆ ಬಗ್ಗೆ ಆಲೋಚನೆ ಮಾಡಿದ ಈಕೆ ರಾಮಕಥೆಗಳನ್ನು ಮಾಡಲು ನಿರ್ಧರಿಸಿದಳು

ರಾಮ ಮಂದಿರಕ್ಕೆ 50 ಲಕ್ಷ ರೂ. ದೇಣಿಗೆ ಸಂಗ್ರಹ

ಇನ್ನು ವೇದಿಕೆ ಮೇಲೆ ಕುಳಿತು ಭಾವಿಕಾ ರಾಮಕಥಾ ಹೇಳುವಾಗ ಜನರು ತುಂಬಾ ಭಕ್ತಿಯಿಂದ ಆಲಿಸುತ್ತಾರೆ. ಪ್ರಮುಖ ವಿಷಯ ಎಂದರೆ ದೇಶದಲ್ಲಿ ಮೊದಲ ಬಾರಿಗೆ 11 ವರ್ಷದ ಬಾಲಕಿಯಿಂದ ಈ ರಾಮಕಥಾ ನಡೆಯುತ್ತಿದೆ. ಕಥೆ ಮುಗಿಸಿದ ನಂತರ ಮನವಿಯ ಮೇರೆಗೆ ಭಕ್ತರು ಹಾಗೂ ಸಾರ್ವಜನಿಕರು ದೇಣಿಗೆ ನೀಡುತ್ತಿದ್ದಾರೆ.

ಈ ರಾಮಕಥೆಗಳನ್ನು ಆಯೋಜನೆ ಮಾಡಲು ತನ್ನ ಅಜ್ಜಿಯರು ಮತ್ತು ಪೋಷಕರು ಪ್ರೇರೇಪಿಸಿದರು ಎಂದು ಭಾವಿಕಾ ಈಟಿವಿ ಭಾರತ್‌ಗೆ ತಿಳಿಸಿದ್ದಾಳೆ. ಹಾಗೆಯೇ ದೇವರು ನೀಡಿದ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ ಎಂದು ಮನವಿ ಮಾಡಿದ್ದಾಳೆ.

Last Updated : Feb 11, 2021, 9:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.