ETV Bharat / bharat

ಉತ್ತರಾಖಂಡದಲ್ಲಿ ಆಳ ಕಂದಕಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ - uttarakhand bus accident

ಉತ್ತರಾಖಂಡದ ವಿಕಾಸನಗರ ಎಂಬಲ್ಲಿ ಬಸ್ ಕಂದಕಕ್ಕೆ ಉರುಳಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

11-people-died-in-a-road-accident-at-vikasnagar-dehradun
ಆಳವಾದ ಕಂದಕಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ, ನಾಲ್ವರಿಗೆ ಗಾಯ
author img

By

Published : Oct 31, 2021, 11:15 AM IST

ಡೆಹ್ರಾಡೂನ್(ಉತ್ತರಾಖಂಡ): ಆಳವಾದ ಕಂದಕಕ್ಕೆ ಬಸ್​​​ ಉರುಳಿ ಸುಮಾರು 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ವಿಕಾಸನಗರ ಎಂಬಲ್ಲಿ ನಡೆದಿದೆ. ಈ ಕುರಿತು ಈಟಿವಿಯೊಂದಿಗೆ ಮಾತನಾಡಿದ ವಿಕಾಸನಗರ ಎಸ್​​ಒ ಪ್ರದೀಪ್ ಬಿಷ್ತ್ ಅವರು ತುನಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ವಿಕಾಸನಗರದಿಂದ ಸುಮಾರು 55 ಕಿಲೋಮೀಟರ್​ ದೂರದಲ್ಲಿ ದುರ್ಘಟನೆ ಜರುಗಿದೆ ಎಂದಿ ದ್ದಾರೆ.

ಮಾಹಿತಿ ಪ್ರಕಾರ, ವಾಹನದಲ್ಲಿ ಸುಮಾರು 15 ಜನರಿದ್ದು, ಈ ಪೈಕಿ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡವು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಗೆ ಭಾರತ ಸಿದ್ಧ: ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.