ಅಯೋಧ್ಯೆ(ಯುಪಿ) : ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಪವಿತ್ರ ಜನ್ಮಸ್ಥಳ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ದೇಶದ ಜನತೆ ಮುಕ್ತವಾಗಿ ಆರ್ಥಿಕ ನೆರವು ನೀಡಿದ್ದಾರೆ. ಟ್ರಸ್ಟ್ ಪ್ರಕಾರ, ಮಕರ ಸಂಕ್ರಾಂತಿಯಿಂದ ರವಿದಾಸ್ ಜಯಂತಿಯವರೆಗಿನ ನಿಧಿ ಸಮರ್ಪಣಾ ಅಭಿಯಾನದಲ್ಲಿ 11 ಕೋಟಿ ಜನರು 3400 ಕೋಟಿ ರೂ. ನೀಡಿದ್ದಾರಂತೆ, ಇದರಲ್ಲಿ ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದೇವಾಲಯದ ಗರ್ಭಗುಡಿಯ ನಿರ್ಮಾಣವು ಜನವರಿ 2024 ರೊಳಗೆ ಪೂರ್ಣಗೊಳ್ಳಲಿದೆ.
ಈ ಅಭಿಯಾನದಲ್ಲಿ ಕಾರ್ಯಕರ್ತರು ಗುಂಪುಗಳನ್ನು ಮಾಡಿಕೊಂಡು ಮನೆ-ಮನೆಗೆ ತೆರಳಿ ಜನರನ್ನು ಸಂಪರ್ಕಿಸಿದ್ದರು. ರಾಮಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ನಿಧಿ ಸಮರ್ಪಣಾ ಅಭಿಯಾನದ ವೇಳೆ 3400 ಕೋಟಿ ರೂಪಾಯಿ ದೇಣಿಗೆ ಬಂದಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಶಿಬಿರ ಕಚೇರಿಯ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ.
ದಾನಿಗಳು ಹತ್ತು ರೂಪಾಯಿಯಿಂದ ಕೋಟಿಗಟ್ಟಲೇ ದೇಣಿಗೆ ನೀಡಿದ್ದಾರೆ. ಜನವರಿ 2024 ರ ವೇಳೆಗೆ ದೇವಾಲಯದ ಗರ್ಭಗುಡಿ ಸಿದ್ಧವಾಗಲಿದೆ, ಅಲ್ಲಿ ದೇವರ ದರ್ಶನವಾಗುತ್ತದೆ. ದೇವಸ್ಥಾನಕ್ಕೆ ನಾಡಿನ ಜನತೆ ಸಹಕಾರ ನೀಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ವ್ಯಕ್ತಿ ಸಾವು: ಸಂಚಾರಿ ನಿಯಮ ಉಲ್ಲಂಘನೆ ಎಂದು ದಂಡ ವಿಧಿಸಿದ ಕೋರ್ಟ್