ETV Bharat / bharat

ತಿರುಪತಿಯಲ್ಲಿ ಆಕ್ಸಿಜನ್​ ಕೊರತೆ: 11 ಕೋವಿಡ್ ಸೋಂಕಿತರು ಸಾವು!

author img

By

Published : May 11, 2021, 12:47 AM IST

Updated : May 11, 2021, 4:47 PM IST

ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್​ ಖಾಲಿ ಆಗಿದ್ದರಿಂದ ಸರಬರಾಜಿನಲ್ಲಿ ಅಡ್ಡಿ ಉಂಟಾಯಿತು. ರಾತ್ರಿ 8.30ಕ್ಕೆ ಆಮ್ಲಜನಕ ಸಂಪೂರ್ಣವಾಗಿ ಖಾಲಿಯಾಗಿದೆ. ತತ್ಪರಿಣಾಮವಾಗಿ, ರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗಲಿಲ್ಲ.

COVID
COVID

ತಿರುಪತಿ: ಇಲ್ಲಿನ ರುವಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ 11 ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್​ ಖಾಲಿ ಆಗಿದ್ದರಿಂದ ಸರಬರಾಜಿನಲ್ಲಿ ಅಡ್ಡಿ ಉಂಟಾಯಿತು. ರಾತ್ರಿ 8.30ಕ್ಕೆ ಆಮ್ಲಜನಕ ಸಂಪೂರ್ಣವಾಗಿ ಖಾಲಿಯಾಗಿದ್ದರ ತತ್ಪರಿಣಾಮವಾಗಿ ರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗಲಿಲ್ಲ.

ತಿರುಪತಿಯಲ್ಲಿ ಆಕ್ಸಿಜನ್​ ಕೊರತೆ: 11 ಕೋವಿಡ್ ಸೋಂಕಿತರು ಸಾವು!

ರುವಾ ಆಸ್ಪತ್ರೆಯಲ್ಲಿ ಸುಮಾರು 1,000 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 700 ಹಾಸಿಗೆಗಳಿಗೆ ಆಮ್ಲಜನಕ ಪೂರೈಸಲಾಗುತ್ತಿದ್ದು, ಐಸಿಯುನಲ್ಲಿ ಸುಮಾರು 130 ಜನರಿದ್ದಾರೆ. ಆಮ್ಲಜನಕದ ಪೂರೈಕೆ ಕಡಿಮೆಯಾದ ಕೂಡಲೇ ರೋಗಿಗಳು ತೀವ್ರ ತೊಂದರೆಗೀಡಾದರು. ತುರ್ತು ಉಸಿರಾಟವನ್ನು ಒದಗಿಸಲು ವೈದ್ಯರು ಸಿಪಿಆರ್ ನಂತಹ ಕ್ರಮಗಳನ್ನು ಪ್ರಾರಂಭಿಸಿದರು. ತಮಿಳುನಾಡಿನ ಶ್ರೀಪೆರುಂಬುದೂರ್ ಆಕ್ಸಿಜನ್ ಪ್ಲಾಂಟ್‌ನಿಂದ ರುಯಿಯಾಗೆ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ. ಆದರೂ ಸರಬರಾಜಿನಲ್ಲಿ ವಿಳಂಬ ಆಗಿದ್ದು ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಸಾರಿಗೆ ಸಂಚಾರದ ವಿಳಂಬ

ಈ ಅವಘಡದ ಸುದ್ದಿ ಹಬ್ಬುತಿದ್ದಂತೆ ರುಯಾ ಆಸ್ಪತ್ರೆಗೆ ತಿರುಪತಿ ಸಂಸದ ಗುರುಮೂರ್ತಿ, ಚಿತ್ತೂರು ಜಿಲ್ಲಾಧಿಕಾರಿ ಹರಿನಾರಾಯಣ್ ಮತ್ತು ನಗರ ಎಸ್‌ಪಿ ವೆಂಕಟ ಅಪ್ಪಲನಾಯುಡು ಭೇಟಿ ನೀಡಿದರು.

ಆಮ್ಲಜನಕದ ಕೊರತೆಯಿಂದಾಗಿ ಐಸಿಯುನಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ತಕ್ಷಣವೇ ಆಮ್ಲಜನಕ ಮರುಸರಬರಾಜು ಮಾಡುವ ಮೂಲಕ ಅನೇಕ ಜೀವಗಳನ್ನು ರಕ್ಷಿಸಲಾಗಿದೆ. ಸಾರಿಗೆ ವಿಳಂಬದಿಂದಾಗಿ ಸಮಸ್ಯೆ ಉದ್ಭವಿಸಿದೆ. ಆಸ್ಪತ್ರೆಯಲ್ಲಿ ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹರಿನಾರಾಯಣ್ ಹೇಳಿದರು.

ರುವಾ ಆಸ್ಪತ್ರೆ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಸಂಸದ ಗುರುಮೂರ್ತಿ ತಿಳಿಸಿದ್ದಾರೆ.

ಆಸ್ಪತ್ರೆಯ ಘಟನೆ ತಿಳಿದ ಕೂಡಲೇ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನರೆಡ್ಡಿ ಪ್ರತಿಕ್ರಿಯಿಸಿದರು. ಘಟನೆ ಕುರಿತು ಜಿಲ್ಲಾ ಅಧಿಕಾರಿಗಳ ಬಳಿ ವಿಚಾರಿಸಿದ್ದಾರೆ. ಅವಘಡದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ತಕ್ಷಣದ ಕ್ರಮಕ್ಕೆ ಸೂಚಿಸಿದ್ದಾರೆ.

Last Updated : May 11, 2021, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.