ETV Bharat / bharat

109 ಹೆರಾಯಿನ್ ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್​.. ಆರೋಪಿ ಬಲೆಗೆ ಬಿದ್ದಿದ್ದು ಹೀಗೆ! - 109 ಹೆರಾಯಿನ್ ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್

ಹೆರಾಯಿನ್ ತುಂಬಿದ ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್ ಮಾಡುತ್ತಿದ್ದ ತಾಂಜಾನಿಯಾ ಮೂಲದ ವ್ಯಕ್ತಿಯನ್ನು ಹೈದರಾಬಾದ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

109 Heroin Capsules in Stomach
109 Heroin Capsules in Stomach
author img

By

Published : May 4, 2022, 3:49 PM IST

ಹೈದರಾಬಾದ್​​: ಗುಪ್ತಾಂಗ, ಒಳ ಉಡುಪು, ಗುದದ್ವಾರದಲ್ಲಿ ಡ್ರಗ್ಸ್​ ಇಟ್ಟುಕೊಂಡು ಸಾಗಾಟ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ 109 ಹೆರಾಯಿನ್ ಕ್ಯಾಪ್ಸುಲ್​ ನುಂಗಿ ಸ್ಮಗ್ಲಿಂಗ್​ ಮಾಡಲು ಹೋಗಿ ಇದೀಗ ಕಸ್ಟಮ್ಸ್​​ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾನೆ. ಹೈದರಾಬಾದ್​​ನ ಶಂಶಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ತಾಂಜಾನಿಯಾ ನಿವಾಸಿ ಏಪ್ರಿಲ್ 26ರಂದು ಜೊಹಾನ್ಸ್​ಬರ್ಗ್​​ನಿಂದ ಹೈದರಾಬಾದ್​ಗೆ ಬಂದಿದ್ದರು. ಈ ವೇಳೆ ಈತನ ಮೇಲೆ ಅನುಮಾನ ವ್ಯಕ್ತಪಡಿಸಿದ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತನ ಹೊಟ್ಟೆಯಿಂದ ಸುಮಾರು 109 ಹೆರಾಯಿನ್​ ಕ್ಯಾಪ್ಸುಲ್​ ಹೊರತೆಗೆಯಲಾಗಿದೆ. ಇದಕ್ಕಾಗಿ ವೈದ್ಯರು ಸುಮಾರು ಆರು ದಿನ ತೆಗೆದುಕೊಂಡಿದ್ದಾರೆ. ವ್ಯಕ್ತಿಯ ಹೊಟ್ಟೆಯಲ್ಲಿ ಸುಮಾರು 1,389 ಗ್ರಾಂ ಹೆರಾಯಿನ್ ಹೊರತೆಗೆಯಲಾಗಿದ್ದು, ಇದರ ಒಟ್ಟು ಮೌಲ್ಯ 11.53 ಕೋಟಿ ರೂ. ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹುಟ್ಟೂರಿಗೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದ ಯೋಗಿ.. ಪ್ರಧಾನಿ ಮೋದಿ ಜೊತೆ ಹೋಲಿಕೆ

ಕಳೆದ ಫೆಬ್ರವರಿ ತಿಂಗಳಲ್ಲಿ ಶಾರ್ಜಾದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 32 ವರ್ಷದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಹೊಟ್ಟೆಯಿಂದ 3 ದಿನಗಳ ಅವಧಿಯಲ್ಲಿ 79 ಕ್ಯಾಪ್ಸುಲ್ ಹೊರಗೆ ತೆಗೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.