ETV Bharat / bharat

ಕೇವಲ 3 ಡಿಗ್ರಿ ತಾಪಮಾನದಲ್ಲಿ 108 ಸೂರ್ಯ ನಮಸ್ಕಾರ ಮಾಡಿದ ತೆಲಂಗಾಣದ ಯುವಕ - 3 ಡಿಗ್ರಿ ತಾಪಮಾನದಲ್ಲಿ 108 ಸೂರ್ಯ ನಮಸ್ಕಾರ

ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್‌ನ ಸರೋವರದ ಮೇಲೆ ಕೇವಲ 3 ಡಿಗ್ರಿ ತಾಪಮಾನದಲ್ಲಿ ತೆಲಂಗಾಣದ ಯುವಕನೊಬ್ಬ 23 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

108 sun salutations
ಕೇವಲ 3 ಡಿಗ್ರಿ ತಾಪಮಾನದಲ್ಲಿ 108 ಸೂರ್ಯ ನಮಸ್ಕಾರ
author img

By

Published : Feb 25, 2021, 2:04 PM IST

ಹೈದರಾಬಾದ್​: ತೆಲಂಗಾಣದ ಮಾರಿಪಲ್ಲಿ ಪ್ರವೀಣ್ ಎಂಬಾತ ಅಮೆರಿಕದ ಮ್ಯಾಡಿಸನ್‌ನ ಸರೋವರದ ಮೇಲೆ ಕೇವಲ 3 ಡಿಗ್ರಿ ತಾಪಮಾನದಲ್ಲಿ 23 ನಿಮಿಷದೊಳಗೆ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಹೊಸ ದಾಖಲೆಯೊಂದನ್ನ ಸೃಷ್ಟಿಸಿದ್ದಾರೆ.

ಕೇವಲ 3 ಡಿಗ್ರಿ ತಾಪಮಾನದಲ್ಲಿ 108 ಸೂರ್ಯ ನಮಸ್ಕಾರ

ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಮೆಟ್ಪಲ್ಲಿ ಮಂಡಲದ ವೆಲ್ಲುಲ್ಲಾ ಗ್ರಾಮದ ನಿವಾಸಿ ಮಾರಿಪಲ್ಲಿ ಪ್ರವೀಣ್, ಪ್ರಸ್ತುತ ಯುನೈಟೆಡ್ ಸ್ಟೇಟ್ಸ್​​ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ವಿಶ್ವವಿದ್ಯಾಲಯದಲ್ಲಿ 4-ಡಿ ಅಭ್ಯಾಸಿಸುತ್ತಿದ್ದು, ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್‌ನಲ್ಲಿ ಸರೋವರದ ಮೇಲೆ 23 ನಿಮಿಷಗಳ ಕಾಲಾವಕಾಶದಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮೂರು ಡಿಗ್ರಿ ತಾಪಮಾನದಲ್ಲಿ 108 ಸೂರ್ಯ ನಮಸ್ಕಾರ ಮಾಡಿರುವುದು ಲಿಮ್ಕಾ ಬುಕ್​​ ಆಫ್​ ರೆಕಾರ್ಡ್​ನಲ್ಲಿ ಪ್ರವೀಣ್​ ಹೆಸರು ಅಚ್ಚಳಿಯುವಂತೆ ಮಾಡಿದೆ.

ವಡೋದರಾದಲ್ಲಿ ಯೋಗ ಬೋಧಕರಾಗಿ ಕೆಲಸ ಮಾಡಿರುವ ಪ್ರವೀಣ್​​, ಇದೂವರೆಗೆ ಸುಮಾರು 11 ಪರ್ವತಗಳನ್ನು ಏರಿದ್ದಾರೆ. ಹಿಮಾಚಲ ಪ್ರದೇಶದ ಮಣಿ ಮಹೇಶ್ ಕೈಲಾಸ್, ಮೌಂಟ್ ಎವರೆಸ್ಟ್, ಮೌಂಟ್ ಮೇರಾ, ಫ್ರಾನ್ಸ್‌ನ ಮಾಂಟ್ ಬ್ಲಾಂಕ್, ಜರ್ಮನಿಯ ಗ್ರೂಪ್ ಟೆನ್, ಆಸ್ಟ್ರೇಲಿಯಾದ ಸ್ಟೈನ್ ಮತ್ತು ಮೌಂಟ್ ಜಾರ್ಜ್ ಸ್ಟೊಪ್ಪನಿ ಹಾಗೂ ಕೆರೊಲಿನಾದ ಮೌಂಟ್ ಸೋಮಾವನ್ನು ಪ್ರವೀಣ್​ ಏರಿ ದಾಖಲೆ ನಿರ್ಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.