ETV Bharat / bharat

ಗುಜರಾತ್​ನಲ್ಲಿ 6 ತಿಂಗಳಲ್ಲಿ 1,052 ಮಂದಿ ಹೃದಯಾಘಾತದಿಂದ ಸಾವು: ಶೇ.80ರಷ್ಟು ಮಂದಿ 11ರಿಂದ 25ರ ವಯೋಮಾನದವರು! - ಹೃದಯ ಸಂಬಂಧಿ ಕಾಯಿಲೆ

Heart attack: ಗುಜರಾತ್​ನಲ್ಲಿ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿ ಯುವಜನತೆಯ ಪಾಲು ಅತ್ಯಧಿಕ ಎಂಬುದು ಆತಂಕದ ವಿಚಾರ.

ಹೃದಯಾಘಾತಕ್ಕೆ ಬಲಿ
ಹೃದಯಾಘಾತಕ್ಕೆ ಬಲಿ
author img

By ANI

Published : Dec 3, 2023, 8:03 AM IST

ಅಹಮದಾಬಾದ್: ಕೋವಿಡ್-19, ಬದಲಾದ ಜೀವನ ಶೈಲಿ, ಒತ್ತಡ ಸೇರಿದಂತೆ ಹಲವು ಕಾರಣಗಳಿಂದಾಗಿ ದೇಶದಲ್ಲಿ ಹೃದಯಾಘಾತಕ್ಕೀಡಾಗಿ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಆತಂಕದ ಸಂಗತಿಯ ನಡುವೆ, ಗುಜರಾತ್​ನಲ್ಲಿ ಕಳೆದ 6 ತಿಂಗಳಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಪೈಕಿ ಹದಿಹರೆಯದವರೇ ಹೆಚ್ಚು ಎಂಬ ಅಚ್ಚರಿಯ ಸಂಗತಿಯನ್ನು ಅಲ್ಲಿನ ಸರ್ಕಾರವೇ ತಿಳಿಸಿದೆ.

ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ್ದು, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಒಟ್ಟು 1,052 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತರಲ್ಲಿ ಶೇ.80ರಷ್ಟು ಮಂದಿ 11 ರಿಂದ 25ರ ವಯೋಮಾನದವರು ಹೆಚ್ಚು ಎಂದು ಮಾಹಿತಿ ನೀಡಿದ್ದಾರೆ.

ದಿನಕ್ಕೆ 173 ತುರ್ತು ಕರೆ: ರಾಜ್ಯದಲ್ಲಿ ದಿನಕ್ಕೆ 173 ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದವರೇ 108 ಆಂಬ್ಯುಲೆನ್ಸ್​ಗಳಿಗೆ ತುರ್ತು ಕರೆ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು 25 ವರ್ಷದ ಒಳಗಿನವರೇ ಆಗಿದ್ದಾರೆ. ಇದು ಆತಂಕದ ವಿಚಾರ. ಶಾಲೆ, ಸಾರ್ವಜನಿಕ ಕಾರ್ಯಕ್ರಮ, ಕ್ರಿಕೆಟ್​ ಆಡುವಾಗ, ಗರ್ಭಾ ನೃತ್ಯ ಮಾಡುವಾಗಲೇ ಹಲವರು ಹಾರ್ಟ್​ ಅಟ್ಯಾಕ್​ಗೆ ಒಳಗಾಗಿ ಸಾವಿಗೀಡಾದ ಪ್ರಕರಣಗಳು ದಾಖಲಾಗಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈವರೆಗೂ ಸಾವನ್ನಪ್ಪಿದ ವಿದ್ಯಾರ್ಥಿಗಳು, ಯುವಕರಲ್ಲಿ ಸ್ಥೂಲಕಾಯದ ಸಮಸ್ಯೆ ಇರಲಿಲ್ಲ. ಆದಾಗ್ಯೂ ಅವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಶೇಕಡಾವಾರು ಲೆಕ್ಕಾಚಾರದಲ್ಲಿ 80 ಪ್ರತಿಶತದಷ್ಟು 25 ವರ್ಷದ ವಯಸ್ಸಿನವರೇ ಆಗಿರುವುದು ತೀವ್ರ ಕಳವಳ ಉಂಟುಮಾಡಿದೆ. ಹದಿಹರೆಯದವರೇ ಬಲಿಯಾಗುತ್ತಿರುವುದು ಯುವಕರಲ್ಲಿ ಆತಂಕ ಮೂಡಿಸಿದೆ ಎಂದು ಅವರು ಹೇಳಿದರು.

ಜೀವ ಉಳಿಸಲು ಶಿಕ್ಷಕರಿಗೆ ತರಬೇತಿ: ಹೆಚ್ಚುತ್ತಿರುವ ಹೃದಯಾಘಾತಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಸುಮಾರು 2 ಲಕ್ಷ ಶಾಲಾ ಶಿಕ್ಷಕರು ಮತ್ತು ಕಾಲೇಜು ಪ್ರಾಧ್ಯಾಪಕರಿಗೆ ಕಾರ್ಡಿಯೋಪಲ್ಮನರಿ ರಿಸಸ್ಟೇಶನ್​ (ಸಿಪಿಆರ್) ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಅಂದರೆ, ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸುವ ಸಲುವಾಗಿ ಶಿಕ್ಷಕರೇ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳುವಂತೆ ಅವರನ್ನು ಸಜ್ಜು ಮಾಡಲಾಗುತ್ತಿದೆ ಎಂದರು.

ಹೀಗಾಗಿ, ರಾಜ್ಯ ಶಿಕ್ಷಣ ಇಲಾಖೆಯು ಡಿಸೆಂಬರ್ 3 ಮತ್ತು 17 ರ ನಡುವೆ 37 ವೈದ್ಯಕೀಯ ಕಾಲೇಜುಗಳಲ್ಲಿ ಸಿಪಿಆರ್ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡಿದೆ. ಶಿಬಿರದಲ್ಲಿ ಎಲ್ಲ ಶಿಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡುವೆ. ಇದರಿಂದ ಸಂಕಷ್ಟದಲ್ಲಿರುವವರ ಜೀವ ಉಳಿಸಬಹುದು ಎಂದು ಸಚಿವರು ಹೇಳಿದರು.

ಈ ತರಬೇತಿ ಶಿಬಿರಗಳಲ್ಲಿ ಸುಮಾರು 2,500 ವೈದ್ಯಕೀಯ ತಜ್ಞರು ಮತ್ತು ವೈದ್ಯರು ಉಪಸ್ಥಿತರಿರುತ್ತಾರೆ. ಭಾಗವಹಿಸುವವ ಶಿಕ್ಷಕರಿಗೆ ಪ್ರಮಾಣಪತ್ರಗಳನ್ನು ಸಹ ನೀಡಲಾಗುವುದು. ಇಂಥದ್ದೇ ತರಬೇತಿಯನ್ನು ಈ ಹಿಂದೆ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಗೆ ನೀಡಲಾಗಿತ್ತು ಎಂದು ಅವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: 'ವಿಪರೀತ ವ್ಯಾಯಾಮ ಚಟುವಟಿಕೆ ಬೇಡ': ಗಂಭೀರ ಕೋವಿಡ್​ ಸಮಸ್ಯೆಗಳಿಂದ ಚೇತರಿಸಿಕೊಂಡವರಿಗೆ ವೈದ್ಯರ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.