ETV Bharat / bharat

'Don't take life too seriously': ಶತಾಯುಷಿ 'ಯುವತಿ'ಯ ಜೀವನಾನುಭವದ ಸಂದೇಶ - 100 ವರ್ಷದ ಅಜ್ಜಿಯ ವಿಡಿಯೋ ವೈರಲ್

ನೂರು ವರ್ಷ ಬದುಕುಳಿಯುವವರ ಸಂಖ್ಯೆ ಇದೀಗ ತೀರಾ ಕಡಿಮೆ. ಸಣ್ಣ ಪುಟ್ಟ ವಿಚಾರಗಳಿಗೆ ತಲೆ ಮೇಲೆ ಆಕಾಶ ಬಿದ್ದಂತೆ ಕೂರುವ ಇಂದಿನ ಯುವಕರಿಗೆ ಈ ಅಜ್ಜಿಯ ಸಂದೇಶ ಬದುಕಿನ ದಾರಿಯಲ್ಲಿ ಸಾಗಲು ಬಲು ಸುಲಭ ಉಪಾಯವಾಗಿದೆ..

ಶತಾಯುಷಿ "ಯುವತಿ"ಯ ಜೀವನಾನುಭವದ ಸಂದೇಶ
ಶತಾಯುಷಿ "ಯುವತಿ"ಯ ಜೀವನಾನುಭವದ ಸಂದೇಶ
author img

By

Published : Jul 23, 2021, 10:27 PM IST

ಜನಪ್ರಿಯ ಪುಟ 'ಹ್ಯೂಮನ್ಸ್ ಆಫ್ ಬಾಂಬೆ' ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಇದು ಉತ್ತಮ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಸಲಹೆ ನೀಡುತ್ತದೆ. ಕಮಲಾ ಎಂಬ ಶತಾಯುಷಿ ನೀಡಿರುವ ಈ ಸಂದೇಶ ಜೀವನದ ಸಾರ ತೋರಿಸುತ್ತದೆ.

'ಅಜ್ಜಿ' ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರು ಎರಡನೇ ಮಹಾಯುದ್ಧ, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕೊರೊನಾ ಸಾಂಕ್ರಾಮಿಕದಂತಹ ಹಲವು ಘಟನೆಗಳಿಗೆ ಜೀವಂತ ಸಾಕ್ಷಿಯಂತಿದ್ದಾರೆ. ಜೀವನಾನುಭವ ಉಂಡು, ಹಲವು ಸಾಮಾಜಿಕ, ಜಾಗತಿಕ, ವೈಯಕ್ತಿಕ ಸಮಸ್ಯೆಗಳನ್ನು ಕಂಡಿರುವ ಕಮಲಾ ಅವರು 100 ವರ್ಷ ಬದುಕಿದ ಗುಟ್ಟನ್ನು ಈ ವಿಡಿಯೋದಲ್ಲಿ ಹೇಳಿದ್ದಾರೆ.

ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿದ ಎರಡನೇ ಬಾರಿಗೆ ವೈರಲ್ ಆಗಿದೆ. ಆಧುನಿಕ ಯುಗದ ಜಂಜಾಟಗಳ ಮಧ್ಯೆ ಸಿಕ್ಕು ನರಳಾಡುತ್ತಿರುವ ಮಾನವನಿಗೆ ಈ ಹಿರಿ ಜೀವದ ಸಂದೇಶ ಬಲು ಸ್ಫೂರ್ತಿದಾಯಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.