ETV Bharat / bharat

ಮ್ಯಾನ್ಮಾರ್‌: ಸೂಕಿ ನಿವಾಸದಲ್ಲಿ ಅನಧಿಕೃತ ವಾಕಿ-ಟಾಕಿ ಸಾಧನಗಳು ಪತ್ತೆ

ಸಂವಹನ ಸಾಧನಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುತ್ತಿದ್ದ ಆರೋಪದಡಿ ಮ್ಯಾನ್ಮಾರ್‌ನ ಸೂಕಿ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮುಂದಿನ ವಿಚಾರಣೆಗಳಿಗಾಗಿ ಅವರನ್ನು ಫೆಬ್ರವರಿ 15ರವರೆಗೂ ಬಂಧನದಲ್ಲಿ ಇರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸೂಕಿ ನಿವಾಸ
ಸೂಕಿ ನಿವಾಸ
author img

By

Published : Feb 4, 2021, 5:45 PM IST

ನವದೆಹಲಿ: ಚುನಾವಣೆಯಲ್ಲಿ ಅಕ್ರಮ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಯಕಿ ಆಂಗ್‌ ಸಾನ್ ಸೂಕಿ ಹಾಗೂ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಮ್ಯಾನ್ಮಾರ್‌ ಸೇನೆ ವಶಕ್ಕೆ ಪಡೆದುಕೊಂಡಿದ್ದು, ಸೂಕಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಸಂವಹನ ಸಾಧನಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುತ್ತಿದ್ದ ಆರೋಪದಡಿ ಮ್ಯಾನ್ಮಾರ್‌ನ ಸೂಕಿ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮುಂದಿನ ವಿಚಾರಣೆಗಳಿಗಾಗಿ ಅವರನ್ನು ಫೆಬ್ರವರಿ 15ರವರೆಗೂ ಬಂಧನದಲ್ಲಿ ಇರಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಸೂಕಿ, ಕಳೆದ ನವೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಭೇರಿ ಬಾರಿಸಿದ ಬಳಿಕ ಪ್ರಧಾನಿ ಹುದ್ದೆಗೆ ಸಮನಾದ ಹಕ್ಕುಗಳನ್ನು ಪಡೆದಿದ್ದರು. ಸೂಕಿ ಅವರ ನಿವಾಸದಲ್ಲಿ ವಿದೇಶಗಳಿಂದ ಆಮದು ಮಾಡಿಕೊಂಡ ಅನಧಿಕೃತ ವಾಕಿ-ಟಾಕಿ ಸಾಧನಗಳು ಹಲವು ದೊರಕಿವೆ. ಅವರ ಭದ್ರತಾ ಪಡೆ ಬಳಿಯೂ ಇಂಥ ವಾಕಿ-ಟಾಕಿಗಳು ಬಹಳಷ್ಟು ಇವೆ. ಅಕ್ರಮವಾಗಿ ವಾಕಿ-ಟಾಕಿ ಸಾಧನಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಆರೋಪಗಳು ಸಾಬೀತಾದಲ್ಲಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಸೂಕಿ ಅವರ ಜತೆಗೆ ಮಿಲಿಟರಿ ವಶಕ್ಕೆ ಒಳಗಾಗಿರುವ ಮ್ಯಾನ್ಮಾರ್‌ನ ಪದಚ್ಯುತ ಅಧ್ಯಕ್ಷ ವಿನ್‌ ಮೈಂಟ್‌ ಅವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯಿದೆ ಉಲ್ಲಂಘನೆಯ ಆರೋಪ ಹೊರಿಸಲಾಗಿದೆ. ಜೊತೆಗೆ ಸೆಪ್ಟೆಂಬರ್ 9 ರಂದು ಆರೋಗ್ಯ ಮತ್ತು ಕ್ರೀಡಾ ಸಚಿವಾಲಯ ಹೊರಡಿಸಿದ್ದ ಕೋವಿಡ್ -19 ನಿಯಂತ್ರಣ ನಿಯಮಗಳನ್ನು ವಿನ್ ಮೈಂಟ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.