ಜೈಪುರ(ರಾಜಸ್ಥಾನ): ದೆಹಲಿಯ ಶ್ರದ್ಧಾ ಹತ್ಯೆ ಮಾಸುವ ಮುನ್ನವೇ ಇದೇ ರೀತಿಯ ಪ್ರಕರಣವೊಂದು ರಾಜಧಾನಿ ಜೈಪುರದ ವಿದ್ಯಾಧರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಸೋದರಳಿಯ ತನ್ನ ಅತ್ತೆ ಸರೋಜ್ ಶರ್ಮಾರನ್ನು ಕೊಂದು ಮೃತ ದೇಹವನ್ನು ಮರೆಮಾಡಲು ಅಡುಗೆ ಮನೆಯಲ್ಲಿ ಅನೇಕ ತುಂಡುಗಳಾಗಿ ಕತ್ತರಿಸಿ, ಅವಕಾಶ ಸಿಕ್ಕಾಗ ಮೃತದೇಹದ ತುಂಡುಗಳನ್ನು ಕಾಡಿನಲ್ಲಿ ಎಸೆಯುತ್ತಿದ್ದ.
ಆರೋಪಿ ಮೃತದೇಹವನ್ನು ಅಡಗಿಸಿಟ್ಟು ನಂತರ ಅಡುಗೆ ಮನೆಯಲ್ಲಿ ರಕ್ತದ ಕಲೆಗಳನ್ನು ತೊಳೆಯುವಾಗ, ಮೃತರ ಮಗಳು ಗಮನಿಸಿದ್ದಾರೆ, ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಹಂತಕನನ್ನು ಬಂಧಿಸಿದ್ದಾರೆ. ಪ್ರಸ್ತುತ ಈ ಸಂಪೂರ್ಣ ಹತ್ಯಾಕಾಂಡದ ಕುರಿತು ಡಿಸಿಪಿ ಪ್ಯಾರಿಸ್ ದೇಶಮುಖ್ ಅವರು ಪತ್ರಿಕಾಗೋಷ್ಠಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
ಈ ಘಟನೆಯು ಡಿಸೆಂಬರ್ 11 ರ ಸಂಜೆ ನಡೆದಿದೆ, ಮೃತ ಸರೋಜ್ ಶರ್ಮಾ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಮಗ ವಿದೇಶದಲ್ಲಿ ನೆಲೆಸಿದ್ದಾನೆ. ಕಿರಿಯ ಮಗಳು ಪೂಜಾ ತನ್ನ ತಾಯಿಯ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ದೂರುದಾರರ ಚಿಕ್ಕಪ್ಪನ ಮಗ ಅನುಜ್ ಸರೋಜ್ ಅವರನ್ನು ನೋಡಿಕೊಳ್ಳುತ್ತಿದ್ದ ಎಂದು ಉತ್ತರ ವಿಭಾಗದ ಡಿಸಿಪಿ ಪ್ಯಾರಿಸ್ ದೇಶಮುಖ್ ತಿಳಿಸಿದ್ದಾರೆ. ಅನುಜ್ ಮತ್ತು ಸರೋಜ್ ದೇವಿ ವಿದ್ಯಾಧರ್ ನಗರದ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಸರೋಜ ದೇವಿ ಅನುಜ್‌ನ ಖರ್ಚನ್ನು ಭರಿಸುತ್ತಿದ್ದರು
ಇದನ್ನೂ ಓದಿ:ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು