ಕ್ಯಾಲಿಫೋರ್ನಿಯಾ(ಯುಎಸ್): ಲಾಸ್ ಏಂಜಲೀಸ್ ಪ್ರದೇಶದ ಬಾಲ್ ರೂಂ ಡ್ಯಾನ್ಸ್ ಕ್ಲಬ್‌ನಲ್ಲಿ ಶನಿವಾರ ರಾತ್ರಿ ಚೀನಿ ಚಂದ್ರನ ಹೊಸ ವರ್ಷದ ಆಚರಣೆಗೆ ಸೇರಿದ್ದ ಜನರ ಮೇಲೆ ಏಕಾಏಕಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡಿನ ಮಳೆಗೆರೆದಿದ್ದಾನೆ. ಈ ಬೆಚ್ಚಿಬೀಳಿಸುವ ಗುಂಡಿ ದಾಳಿಯ ಸ್ಥಳದಲ್ಲಿ 10 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಹಲವರು ತೀವ್ರ ಗಾಯಗೊಂಡಿರುವ ಕುರಿತಾಗಿ ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕದ ಈ ಗುಂಡಿನ ದಾಳಿಗೆ ಕಾರಣೀಭೂತರಾಗಿವವರನ್ನು ಶೀಘ್ರ ಬಂಧಿಸಲಾಗುವುದು ಎಂದು ಕ್ಯಾಪ್ಟನ್ ಲಾಸ್ ಏಂಜಲೀಸ್ ಶೇರಿಫ್ ವಿಭಾಗದ ಆಂಡ್ರ್ಯೂ ಮೇಯರ್ ಭಾನುವಾರ ತಿಳಿಸಿದ್ದು, ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು ಮತ್ತು ಅವರ ಸ್ಥಿತಿ ಚಿಂತಾಜನಕವಾಗಿದೆ .ಮಾಂಟೆರಿ ಪಾರ್ಕ್ ನಗರದಲ್ಲಿ 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಅಧಿಕಾರಿಗಳು 10.30 ರ ಸುಮಾರಿಗೆ ಲಾಸ್ ಏಂಜಲೀಸ್-ಪ್ರದೇಶದ ಬಾಲ್ ರೂಂ ಡ್ಯಾನ್ಸ್ ಕ್ಲಬ್ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಅಪಾರ ಜನರು ಕಿರುಚುತ್ತಾ ಸ್ಥಳದಿಂದ ಹೊರಗೆ ಓಡಿಬಂದರು. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬಾಲ್ ರೂಂ ಡ್ಯಾನ್ಸ್ ಕ್ಲಬ್‌ಗೆ ತೆರಳಿ ತೀವ್ರ ಗಾಯಗೊಂಡಿದ್ದ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಿದರು ಎಂದು ಮೇಯರ್ ಘಟನೆ ಬಗ್ಗೆ ವಿವರಿಸಿದ್ದಾರೆ.
ಚೈನೀಸ್ ಲುನಾರ್ ಇಯರ್ ಆಚರಣೆ: ಮಾಂಟೆರಿ ಪಾರ್ಕ್ ಸುಮಾರು 60,000 ಜನರಿರುವ ನಗರ. ಲಾಸ್ ಏಂಜಲೀಸ್ ಡೌನ್‌ಟೌನ್‌ನಿಂದ ಸುಮಾರು 10 ಮೈಲಿಗಳು (16 ಕಿಲೋಮೀಟರ್) ದೊಡ್ಡ ಏಷ್ಯನ್ ಜನಸಂಖ್ಯೆಯನ್ನು ಹೊಂದಿದೆ. ಶನಿವಾರ ರಾತ್ರಿ ನಡೆದ ಲುನಾರ್ ವರ್ಷಾಚರಣೆಯಲ್ಲಿ ಅಂದಾಜು ಹತ್ತಾರು ಸಾವಿರಾರು ಜನರು ಸೇರಿದ್ದರು. ಇಲ್ಲಿನ ನಿವಾಸಿಗಳು ಚೈನೀಸ್ ಆಹಾರ ಮತ್ತು ಆಭರಣಗಳನ್ನು ಖರೀದಿಸಲು ಮತ್ತು ಶಾಪಿಂಗ್ ಇಷ್ಟಪಡುತ್ತಿದ್ದರು. ಹೊಸ ವರ್ಷದ ಸಂಭ್ರಮಾಚರಣೆ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ನಿಗದಿಪಡಿಸಲಾಗಿತ್ತು.
ಅಮೆರಿಕಾದಲ್ಲಿ ಐದನೇ ಗುಂಡಿನ ದಾಳಿ: ಈ ತಿಂಗಳಿನಲ್ಲಿ ಇದು ಅಮೆರಿಕದ ಐದನೇ ಸಾಮೂಹಿಕ ಗುಂಡಿನ ದಾಳಿ ಆಗಿದೆ. ಟೆಕ್ಸಾಸ್‌ನ ಉವಾಲ್ಡೆಯ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 21 ಜನರ ಸಾವಿಗೀಡಾಗಿರುವ ದುರಂತ ನಂತರ ಇದೊಂದು ಮಾರಣಾಂತಿಕ ದಾಳಿಯಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್/ಯುಎಸ್‌ಎ ಟುಡೇ ಡೇಟಾಬೇಸ್ ತಿಳಿಸಿದೆ. ಈ ದುರ್ಘಟನೆಯೂ ಸಾಮೂಹಿಕ ಹತ್ಯೆಗಳು. ಹಿಂಸಾಚಾರವು ಕೊಲೊರಾಡೋ ಸ್ಪ್ರಿಂಗ್ಸ್ ನೈಟ್‌ಕ್ಲಬ್‌ನಲ್ಲಿ ಐದು ಜನರನ್ನು ಕೊಂದ ಎರಡು ತಿಂಗಳ ನಂತರ ಸಾಮೂಹಿಕವಾಗಿ ಜನರ ಮೇಲೆ ಗುಂಡಿನ ದಾಳಿ ನಡೆದಿದೆ.
ಕ್ಲಾಮ್ ಹೌಸ್ ಸೀಫುಡ್ ಬಾರ್ಬೆಕ್ಯೂ ರೆಸ್ಟೋರೆಂಟ್ ಮಾಲೀಕ ಹಾಗೂ ಗಾಯಗೊಂಡಿದ್ದ ಸೆಯುಂಗ್ ವೊನ್ ಚೋಯ್ ಅವರು, ರೆಸ್ಟೊರೆಂಟ್‌ಗೆ ನುಗ್ಗಿದ ಮೂವರು ಬಂದೂಕುದಾರಿಗಳು ಬಾಗಿಲು ಹಾಕುವಂತೆ ಬೆದರಿಸಿದರು. ಬಾಗಿಲು ಲಾಕ್ ಮಾಡಿದ ಬಳಿಕ ನನ್ನ ಮೇಲೆ ಗುಂಡು ಹಾರಿಸಿದರು. ನಂತರ ಡ್ಯಾನ್ಸ್ ಕ್ಲಬ್‌ಗೆ ನುಗ್ಗಿ ಗುಂಡಿನ ಮಳೆಗೆರೆದಿದ್ದಾರೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ಗೆ ತಿಳಿಸಿದ್ದಾರೆ.
ಆ ರಾತ್ರಿ ಗುಂಡಿನ ಮಳೆಗೆರೆಯುತ್ತಿದ್ದ ವೇಳೆ ನನ್ನ ಸ್ನೇಹಿತೆ ಡ್ಯಾನ್ಸ್ ಕ್ಲಬ್‌ದ ಸ್ನಾನಗೃಹದಲ್ಲಿದ್ದರು. ಅವಳು ಹೊರಗೆ ಬಂದಾಗ, ಅವಳು ಬಂದೂಕುಧಾರಿ ಮತ್ತು ಮೂರು ರಕ್ತಸಕ್ತರಾಗಿರುವ ಹತ್ಯೆಗೈದ ದೇಹಗಳನ್ನು ನೋಡಿದಳು. ನಂತರ ಸ್ನೇಹಿತ ಹೆದರಿ ರಾತ್ರಿ 11 ಗಂಟೆಯ ತಪ್ಪಿಸಿಕೊಂಡು ತನ್ನ ಮನೆಗೆ ಓಡಿಹೋದನು. ಬಂದೂಕಧಾರಿ ಉದ್ದನೆಯ ಬಂದೂಕಿನಿಂದ ಮನಬಂದಂತೆ ಗುಂಡು ಹಾರಿಸುತ್ತಿದ್ದನು ಎಂದು ಸ್ಥಳೀಯ ನಿವಾಸಿ ವಾಂಗ್ ವೀ ಅವರು ಲಾಸ್ ಏಂಜಲೀಸ್ ಟೈಮ್ಸ್‌ಗೆ ತಿಳಿಸಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಪ್ರತಿವರ್ಷ ಆಚರಿಸಲ್ಪಡುವ ಅತಿದೊಡ್ಡ ಲುನಾರ್ ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಗಾರ್ವೆ ಅವೆನ್ಯೂದಲ್ಲಿ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.
ಇದನ್ನೂಓದಿ:ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿಯ 46 ಬಂಡುಕೋರರ ಶರಣಾಗತಿ