ಗುವಾಹಟಿ: ಅಸ್ಸೋಂ ಪೊಲೀಸರು ಮತ್ತು ಕೇಂದ್ರ ಏಜೆನ್ಸಿಗಳ ಸಹಯೋಗದಲ್ಲಿ ಇಂದು ಅಸ್ಸೋಂನಲ್ಲಿ 10 ಮಂದಿ ಜಿಹಾದಿ ಗುಂಪುಗಳ ಸದಸ್ಯರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಕಳೆದ 48 ಗಂಟೆಗಳಲ್ಲಿ ಅಸ್ಸೋಂ ಪೊಲೀಸರು ನಡೆಸಿದ ಕಾರ್ಯಾಚರಣೆ ಪರಿಣಾಮ 10 ಸದಸ್ಯರನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದ ಜಿಹಾದಿ ಸಂಘಟನೆಯ ಸಕ್ರಿಯ ಸದಸ್ಯ ಅಮಿರುದ್ದೀನ್ ಅಲಿ ಎಂಬಾತನಿಂದ ಮಾರಿಗಾಂವ್ ಜಿಲ್ಲೆಯಲ್ಲಿ ಧಾರ್ಮಿಕ ಮದರಸಾವನ್ನು ನಡೆಸುತ್ತಿರುವ ವ್ಯಕ್ತಿಯೊಬ್ಬರು ಹಣ ಪಡೆದಿದ್ದಾರೆ ಎಂದು ಅಸ್ಸೋಂನ ಎಡಿಜಿಪಿ (ಎಸ್‌ಬಿ) ಶ್ರೀ ಹಿರೇನ್ ನಾಥ್ ಗುವಾಹಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಬಂಧಿತ ಮದರಸಾ ಶಿಕ್ಷಕನ ಹೆಸರು ಎಂ ಡಿ ಮುಫ್ತಿ ಮುಸ್ತಫಾ. ಈ ಮದರಸಾ ಶಿಕ್ಷಕರಿಗೆ ನೆರೆಯ ದೇಶದ ಜೆಹಾದಿಗಳ ಸಂಪರ್ಕದ ಬಗ್ಗೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಈ ಧಾರ್ಮಿಕ ಶಿಕ್ಷಕ ಮರಿಗಾಂವ್ ಜಿಲ್ಲೆಯ ಚಹರಿಯಾ ಗಾಂವ್‌ನ ಜಮಿಯುಲ್ ಹುದಾ ಮದರಸವನ್ನು ನಡೆಸುತ್ತಿದ್ದರು. ಘಟನೆ ಹಿನ್ನೆಲೆ ಅಸ್ಸೋಂ ಪೊಲೀಸರು ನಿನ್ನೆ ಸಂಜೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.
ಎಂಡಿ ಮುಫ್ತ್ ಹೊರತುಪಡಿಸಿ, ಕಜಿಬುರ್ ರೆಹಮಾನ್, ಜುನೈಲ್ ಖಾನ್, ರಫಿಕುಲ್ ಇಸ್ಲಾಂ, ಮೊಯಿನುಲ್ ಹಕ್, ಮೊಜಿದುರ್ ರೆಹಮಾನ್, ಅಬ್ಬಾಸ್ ಅಲಿ, ಸಜಹಾನ್ ಅಲಿ, ಹರುನ್ ರಸೀದ್, ಮಜಿದುರ್ ರೆಹಮಾನ್ ಮತ್ತು ಸಹನೂರ್ ಆಲಂ ಎಂಬ 10 ಮಂದಿ ಜಿಹಾದಿಗಳನ್ನು ಬಂಧಿಸಿದ್ದಾರೆ. ಈ ಶಂಕಿತ ಜಿಹಾದಿಗಳನ್ನು ಕಳೆದ 48 ಗಂಟೆಗಳಲ್ಲಿ ಬರ್ಪೇಟಾ, ಮಾರಿಗಾಂವ್, ಗೋಲ್ಪಾರಾ ಮತ್ತು ಕಾಮ್ರೂಪ್ ಮೆಟ್ರೋ ಜಿಲ್ಲೆಯಿಂದ ಬಂಧಿಸಲಾಗಿದೆ.
ಅಸ್ಸೋಂ ಮುಖ್ಯಮಂತ್ರಿ ಕೂಡ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅನ್ಸಾರುಲ್ಲಾ ಬಾಂಗ್ಲಾ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಿಹಾದಿಗಳ ವಿರುದ್ಧದ ಇಂದಿನ ಕಾರ್ಯಾಚರಣೆಯು ಅಸ್ಸೋಂ ಪೊಲೀಸರು ಕೆಲವು ಕೇಂದ್ರೀಯ ಸಂಸ್ಥೆಗಳೊಂದಿಗೆ ನಡೆಸುತ್ತಿರುವ ರಾಷ್ಟ್ರೀಯ ಕಾರ್ಯಾಚರಣೆ'ಯ ಒಂದು ಭಾಗವಾಗಿದೆ ಎಂದು ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ : 'Don't talk to me,": ಸ್ಮೃತಿ ಇರಾನಿಗೆ ಈ ರೀತಿ ಹೇಳಿದ್ರಾ ಸೋನಿಯಾ ಗಾಂಧಿ!?