ಮುಜಫರಾಬಾದ್: ಬಸ್ ಅಪಘಾತವೊಂದರಲ್ಲಿ 10 ಪ್ರಯಾಣಿಕರು ಸಾವನ್ನಪ್ಪಿ. 15 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ನಲ್ಲಿ ನಡೆದಿದೆ.
ಪ್ರಯಾಣಿಕರನ್ನ ಹೊತ್ತು ಸಾಗುತ್ತಿದ್ದ ಬಸ್ವೊಂದು ತಡರಾತ್ರಿ 2:30ರ ವೇಳೆ ನಿಯಂತ್ರಣ ಕಳೆದುಕೊಂಡು ಜೆಲಂ ನದಿಯ ಕದಕಕ್ಕೆ ಬಿದ್ದಿದೆ. ಜಮಿನಾಬಾದ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ದಕ್ಷಿಣ ಮುಜಫರಾಬಾದ್ನಿಂದ 24 ಕಿಲೋ ಮೀಟರ್ ದೂರದಲ್ಲಿದೆ ಎಂದು ತಿಳಿದು ಬಂದಿದೆ.
ಬಸ್ 25 ಪ್ರಯಾಣಿಕರ ಹೊತ್ತು ಸಾಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಚಟ್ಟರ್ ಕ್ಲಾಸ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ನಡೆಸಿದ್ದಾರೆ.