ETV Bharat / bharat

Watch... ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆಜಿ ಚಿನ್ನ, 5 ಕೋಟಿ ಹಣ ಪತ್ತೆ

ಯುಗಾದಿ ಹಬ್ಬದ ಹಿನ್ನೆಲೆ ಚಿನ್ನದ ಮಾರಾಟ, ಖರೀದಿ ಜೋರಾಗಿದ್ದು, ಕೆಲ ವರ್ತಕರು ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಚಿನ್ನಾಭರಣ ಮತ್ತು ನಗದನ್ನು ಆಂಧ್ರಪ್ರದೇಶ ಪೊಲೀಸರು ವಶಪಡಿಸಿಕೊಂಡಿದ್ದಾರೆ.

money-were-seized
ಹಣ ಪತ್ತೆ
author img

By

Published : Apr 1, 2022, 8:35 PM IST

Updated : Apr 1, 2022, 8:53 PM IST

ವಿಜಯವಾಡ(ಆಂಧ್ರಪ್ರದೇಶ): ನಾಳೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನ ಮಾರಾಟ, ಖರೀದಿ ಜೋರಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿದ 10 ಕೆಜಿ 100 ಗ್ರಾಂ ಚಿನ್ನ, 5.6 ಕೋಟಿ ರೂ. ನಗದು ವಶಪಡಿಸಿಕೊಂಡ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆಜಿ ಚಿನ್ನ, 5 ಕೋಟಿ ಹಣ ಪತ್ತೆ

ಪೂರ್ವ ಗೋದಾವರಿ ಜಿಲ್ಲೆಯ ಕಿರ್ಲಂಪುಡಿ ವಲಯದಲ್ಲಿ ಖಾಸಗಿ ಬಸ್​ನಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ, ಕೃಷ್ಣಾವರಂ ಟೋಲ್ ಪ್ಲಾಜಾದಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಬಸ್​ನಲ್ಲಿ 10 ಕೆಜಿ 100 ಗ್ರಾಂ ಚಿನ್ನಾಭರಣ ಹಾಗೂ 5 ಕೋಟಿ 6 ಲಕ್ಷ ನಗದು ಪತ್ತೆಯಾಗಿದೆ. ವಿಜಯವಾಡದಿಂದ ಶ್ರೀಕಾಕುಳಂ ಜಿಲ್ಲೆಗೆ ಈ ಬಸ್​ ಸಂಚರಿಸುತ್ತಿತ್ತು.

ಖಾಸಗಿ ಬಸ್​ನಲ್ಲಿ ಪತ್ತೆಯಾದ ಈ ಚಿನ್ನ ಪಲಾಸ, ತೆಕ್ಕಲಿ, ನರಸನ್ನಪೇಟೆಯ ಚಿನ್ನದ ಅಂಗಡಿಗಳಿಗೆ ಸಾಗಣೆಯಾಗುತ್ತಿತ್ತು ಎಂದು ತಿಳಿದು ಬಂದಿದೆ. ಪತ್ತೆಯಾದ ಚಿನ್ನ ಮತ್ತು ನಗದಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಗೋದಾವರಿಯಲ್ಲೂ ಪತ್ತೆ: ಪಶ್ಚಿಮ ಗೋದಾವರಿ ಜಿಲ್ಲೆಯಲ್ಲೂ ಅಪಾರ ಪ್ರಮಾಣದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಲ್ಲಜರ್ಲ ವಲಯದ ವೀರವಳ್ಳಿ ಟೋಲ್ ಪ್ಲಾಜಾದಲ್ಲಿ ತಪಾಸಣೆಯ ವೇಳೆ ಬಸ್​​​​ ಸೀಟಿನ ಕೆಳಗೆ ಲಗೇಜ್​ ಕ್ಯಾರಿಯರ್​ನಲ್ಲಿ 4.75 ಕೋಟಿ ರೂ. ನಗದು, 350 ಗ್ರಾಂ ಚಿನ್ನಾಭರಣ ಸಿಕ್ಕಿದೆ. ಈ ಬಗ್ಗೆ ಯಾವುದೇ ದಾಖಲೆಗಳಿಲ್ಲದ ಕಾರಣ ಪೊಲೀಸರು ಬಸ್ ಚಾಲಕ ಹಾಗೂ ಕ್ಲೀನರ್​ನನ್ನು ವಶಕ್ಕೆ ಪಡೆದಿದ್ದಾರೆ.

ಓದಿ: ದಿನಗೂಲಿ ವ್ಯಕ್ತಿಗೆ 1 ಕೋಟಿ ಲಾಟರಿ.. ಪಡೆದುಕೊಳ್ಳಲು ಏನೆಲ್ಲಾ ಸಾಹಸ ಮಾಡಿದ್ದ ಗೊತ್ತಾ?

Last Updated : Apr 1, 2022, 8:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.