ETV Bharat / bharat

ಮಧ್ಯಪ್ರದೇಶದಲ್ಲಿ ಡೈನೋಸಾರ್​​ನ 10 ಮೊಟ್ಟೆಗಳು ಪತ್ತೆ..! - ಇಂದೋರ್‌ನ ವಸ್ತು ಸಂಗ್ರಹಾಲಯ

ಮಧ್ಯಪ್ರದೇಶದ ಬರ್ವಾನಿ ಕಾಡಿನಲ್ಲಿ ಡೈನೋಸಾರ್​ನ ಬೃಹದಾಕಾರದ 10 ಮೊಟ್ಟೆಗಳು ಪತ್ತೆಯಾಗಿವೆ. ಈ ಮೊಟ್ಟೆಗಳು 10 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಪುರಾತತ್ವ ಇಲಾಖೆಯ ತಜ್ಞರು ಹೇಳಿದ್ದಾರೆ.

indore dinosaur eggs news
ಡೈನೋಸಾರ್​ನ ಬೃಹದಾಕಾರದ ಮೊಟ್ಟೆ ಪತ್ತೆ
author img

By

Published : Feb 12, 2022, 1:16 PM IST

ಇಂದೋರ್ (ಮಧ್ಯಪ್ರದೇಶ): ಭೂಮಿಯ ಅತಿದೊಡ್ಡ ಜೀವಿ ಎಂದು ಕರೆಯಲ್ಪಡುವ ಡೈನೋಸಾರ್‌ ಇದೀಗ ನಮಗೆ ಕಾಣಸಿಗುವುದಿಲ್ಲ. ಎಷ್ಟೋ ಸಾವಿರಾರು ವರ್ಷಗಳ ಹಿಂದೆಯೇ ಡೈನೋಸಾರ್‌ಗಳು ಭೂಮಿಯಿಂದ ನಿರ್ನಾಮವಾಗಿವೆ. ಇನ್ನು ಅವುಗಳ ಪಳೆಯುಳಿಕೆಗಳು ಅಪರೂಪಕ್ಕೆ ಎಲ್ಲೆಲ್ಲೋ ಕಂಡು ಬರುತ್ತದೆ.

ಇದೀಗ ಮಧ್ಯಪ್ರದೇಶದ ಬರ್ವಾನಿ ಕಾಡಿನಲ್ಲಿ ಡೈನೋಸಾರ್​ನ ಬೃಹದಾಕಾರದ 10 ಮೊಟ್ಟೆಗಳು ಪತ್ತೆಯಾಗಿವೆ. ಈ ಮೊಟ್ಟೆಗಳು 10 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಪುರಾತತ್ವ ಇಲಾಖೆಯ ತಜ್ಞರು ಹೇಳಿದ್ದಾರೆ. ಪುರಾತತ್ವಶಾಸ್ತ್ರಜ್ಞ ಡಾ.ಡಿ.ಪಿ.ಪಾಂಡೆ ಸೆಂಧ್ವಾ ಅವರು ಬರ್ವಾನಿ ಅರಣ್ಯದಲ್ಲಿ ಸಮೀಕ್ಷೆ ನಡೆಸುವ ವೇಳೆ ಈ ಮೊಟ್ಟೆಗಳು ಕಂಡು ಬಂದಿವೆ.

ಇದನ್ನೂ ಓದಿ: ಯುವತಿ ಜೀವ ರಕ್ಷಿಸಲು ರೈಲ್ವೇ ಹಳಿ ಮೇಲೆ ಹಾರಿದ ಯುವಕ... ಇಬ್ಬರ ಮೇಲೆ ರೈಲು ಹಾದ್ರೂ, ಉಳಿತು ಪ್ರಾಣ!

ಇದರಲ್ಲಿ ಒಂದು ಮೊಟ್ಟೆಯ ತೂಕ 40 ಕೆಜಿ ಇದ್ದು ಮತ್ತು ಉಳಿದವು 25 ಕೆಜಿ ವರೆಗೆ ಇವೆ. ಬಹಳ ಗಟ್ಟಿಯಾಗಿರುವ ಈ ಮೊಟ್ಟೆಗಳನ್ನು ಇಂದೋರ್‌ನ ವಸ್ತು ಸಂಗ್ರಹಾಲಯದಲ್ಲಿ ಇರಿಸಲು ನಿರ್ಧರಿಸಲಾಗಿದೆ. ಈ ಹಿಂದೆ 2007 ರಲ್ಲಿ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಡೈನೋಸಾರ್‌ ಗೂಡುಗಳು ಪತ್ತೆಯಾಗಿತ್ತು. ಈ ಗೂಡುಗಳು ಸುಮಾರು ಆರೂವರೆ ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.