ETV Bharat / bharat

ದಿನಪೂರ್ತಿ 1 ರೂಪಾಯಿಗೆ 1 ಲೀಟರ್ ಪೆಟ್ರೋಲ್ ವಿತರಣೆ! ಯಾಕೆ ಗೊತ್ತೇ?

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್​ ಅವರ ಜಯಂತಿ ಅಂಗವಾಗಿ ಸೊಲ್ಲಾಪುರದಲ್ಲಿ 500 ಗ್ರಾಹಕರಿಗೆ 1 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡಲಾಗಿದೆ.

ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್​
ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್​
author img

By

Published : Apr 14, 2022, 7:33 PM IST

Updated : Apr 14, 2022, 7:40 PM IST

ಸೊಲ್ಲಾಪುರ(ಮಹಾರಾಷ್ಟ್ರ): ದೇಶದಲ್ಲಿ ಪೆಟ್ರೋಲ್​-ಡೀಸೆಲ್ ಬೆಲೆ ಈಗಾಗಲೇ ಗಗನಕ್ಕೇರಿದ್ದು, ಒಂದು ಲೀಟರ್ ಪೆಟ್ರೋಲ್ ಹಾಕಿಸಿಕೊಳ್ಳಲೂ ಕೂಡಾ ಗ್ರಾಹಕರು ಹಿಂದೆಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಲೀಟರ್​ಗೆ 1 ರೂ.ದಂತೆ ಪೆಟ್ರೋಲ್ ವಿತರಿಸಿದ್ದಾರೆ.

ದಿನಪೂರ್ತಿ ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ವಿತರಣೆ ಮಾಡಲಾಗಿದ್ದು, ಜನಸಂದಣಿ ನಿಯಂತ್ರಣ ಮಾಡುವ ಉದ್ದೇಶದಿಂದ ಪೆಟ್ರೋಲ್ ಪಂಪ್​ ಮಾಲೀಕ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಡಾ.ಅಂಬೇಡ್ಕರ್ ಸ್ಟೂಡೆಂಟ್ಸ್ ಆ್ಯಂಡ್ ಯೂತ್ ಪ್ಯಾಂಥರ್ಸ್ ಸಂಘಟನೆಯ ಸದಸ್ಯರು ಈ ವಿಭಿನ್ನ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದರು. 500 ನಾಗರಿಕರಿಗೆ ಲೀಟರ್​ಗೆ ಒಂದು ರೂಪಾಯಿಯಂತೆ ಪೆಟ್ರೋಲ್ ನೀಡಲಾಗಿದೆ.

ದಿನಪೂರ್ತಿ 1 ರೂಪಾಯಿಗೆ 1 ಲೀಟರ್ ಪೆಟ್ರೋಲ್ ವಿತರಣೆ! ಯಾಕೆ ಗೊತ್ತೇ?

ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಂದೇಶ ನೀಡುವ ಉದ್ದೇಶದಿಂದ ಪ್ರತಿದಿನ 1 ರೂಪಾಯಿಗೆ ಲೀಟರ್ ಪೆಟ್ರೋಲ್​ ಮಾರಾಟ ಮಾಡಲಾಗಿದೆ ಎಂದು ಸಂಘಟಕರು ಪ್ರತಿಕ್ರಿಯೆ ನೀಡಿದ್ದಾರೆ. ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಪೆಟ್ರೋಲ್​ ಬಂಕ್​ ಮುಂದೆ ಜನಸಾಗರವೇ ಬಂದಿದ್ದು, ಈ ವೇಳೆ ನೂಕುನುಗ್ಗಲು ಸಹ ಉಂಟಾಗಿದೆ. ಅಂಬೇಡ್ಕರ್ ಜಯಂತಿ ಅಂಗವಾಗಿ 500 ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗಿದೆ.

ಇದನ್ನೂ ಓದಿ: ಮಟನ್​ ತಿನ್ನುತ್ತಿದ್ದಾಗ ಮೂಳೆ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ಸೊಲ್ಲಾಪುರದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 120.18 ರೂ. ಆಗಿದೆ. ಆದರೆ, ಗ್ರಾಹಕರಿಗೆ ಸ್ವಲ್ಪ ಮಟ್ಟದ ನಿರಾಳತೆ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

Last Updated : Apr 14, 2022, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.