ಥಾಣೆ(ಮಹಾರಾಷ್ಟ್ರ): ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಜನ್ಮದಿನಾಚರಣೆಯ ನಿಮಿತ್ತ ಇಂದು ಡೊಂಬಿವಲಿ ಯುವ ಸೇನೆ ವತಿಯಿಂದ ಉಸ್ಮಾ ಪೆಟ್ರೋಲ್ ಪಂಪ್ನಲ್ಲಿ 1 ರೂಪಾಯಿಗೆ 1 ಲೀಟರ್ ಪೆಟ್ರೋಲ್ ನೀಡಲಾಯಿತು. 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿರುವುದು ಗೊತ್ತಾಗುತ್ತಿದ್ದಂತೆ ಬೆಳಗ್ಗೆಯಿಂದಲೇ ಪಂಪ್ ಎದುರು ಭಾರಿ ಉದ್ದನೆಯ ಕ್ಯೂ ನಿರ್ಮಾಣವಾಗಿದೆ.
102 ರೂಪಾಯಿಗೆ ಒಂದು ಲೀಟರ್ ಬೆಲೆಯ ಪೆಟ್ರೋಲ್ ಕೇವಲ 1 ರೂಪಾಯಿಗ ಸಿಗುತ್ತಿದೆ ಎಂಬ ವಿಷಯ ಈಗ ಇಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಏಟು ನೀಡುವ ಶಿವಸೇನೆಯ ಕ್ರಮ ಇದು ಎನ್ನಲಾಗ್ತಿದೆ.
ಅಂಬರನಾಥದಲ್ಲಿ 50 ರೂಪಾಯಿಗೆ ಲೀಟರ್
ಅಂಬರನಾಥ ಪ್ರದೇಶದ ವಿಮ್ಕೊ ನಾಕಾ ಬಳಿಯ ಪೆಟ್ರೋಲ್ ಪಂಪ್ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ 50 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಲಾಯಿತು.
ಪೆಟ್ರೋಲ್ ಹಾಗೂ ಡೀಸೆಲ್ಗಳ ದರ ಏರಿಕೆ ಕುರಿತು ಶಿವಸೇನೆಯು ಕೇಂದ್ರ ಸರ್ಕಾರದ ವಿರುದ್ಧ ಆಗಾಗ್ಗೆ ವಾಗ್ದಾಳಿ ನಡೆಸುತ್ತಿದೆ. ಈಗ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹುಟ್ಟುಹಬ್ಬದ ನೆಪದಲ್ಲಿ 1 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡುವ ಮೂಲಕ ಶಿವಸೇನೆ ಬಿಜೆಪಿಗೆ ಟಾಂಗ್ ನೀಡುತ್ತಿದೆ.
ಎರಡು ತಾಸು ಸರತಿಯಲ್ಲಿ ಕಾಯ್ದರೂ ಅಡ್ಡಿಯಿಲ್ಲ, 1 ರೂಪಾಯಿಗೆ ಪೆಟ್ರೋಲ್ ಸಿಗುತ್ತಲ್ಲ ಎಂಬ ಆಸೆಯಿಂದ ಜನತೆ ಪೆಟ್ರೋಲ್ ಪಂಪ್ ಮುಂದೆ ಕ್ಯೂ ಹಚ್ಚಿ ನಿಂತಿರುವುದು ಕಂಡುಬಂದಿದೆ.