ETV Bharat / assembly-elections

ರಾಜ್ಯಕ್ಕೆ 4 ಮುಖ್ಯಮಂತ್ರಿಗಳನ್ನು ನೀಡಿದ ರಾಮನಗರ: ಇದೇ ಜಿಲ್ಲೆಯಿಂದ ಮತ್ತಿಬ್ಬರು ಘಟಾನುಘಟಿಗಳು ಸಜ್ಜು - ರಾಮನಗರ ಜಿಲ್ಲೆ

ರಾಮನಗರ ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ. ಇದೇ ಜಿಲ್ಲೆಯಿಂದ ಇದೀಗ ಮತ್ತಿಬ್ಬರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಮತದಾರಪ್ರಭು ಒಲುವು ತೋರಿದರೆ ಕನಸು ನನಸಾಗಲೂಬಹುದು.!

Ramnagar District Politics
Ramnagar District Politics
author img

By

Published : Apr 7, 2023, 9:28 PM IST

ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ಮಾಗಡಿ ಕೆಂಪೇಗೌಡರು, ಚನ್ನಪಟ್ಟಣದ ಗೊಂಬೆ, ಕ್ಲೋಸ್ ಪೇಟೆಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ, ರಾಮದೇವರ ಬೆಟ್ಟ, ಕಣ್ವ ಜಲಾಶಯ ಹೀಗೆ.. ಹಲವು ವಿಶೇಷತೆಗಳು ನೆನಪಿಗೆ ಬರುತ್ತವೆ. ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ರಾಮನಗರ 2007 ಆಗಸ್ಟ್ 23 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಕರ್ನಾಟಕದ 28ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂತು.

Ramnagar District Politics
ಕೆಂಗಲ್ ಹನುಮಂತಯ್ಯ (ಪುತ್ಥಳಿ)

ರಾಮನಗರಕ್ಕೆ ಪುರಾತನ ಇತಿಹಾಸದ ಜೊತೆಗೆ ರಾಜಕೀಯ ಇತಿಹಾಸವೂ ಇದೆ. ಈ ಜಿಲ್ಲೆ ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 2007 ಆಗಸ್ಟ್​ನಲ್ಲಿ ವಿಭಜನೆಗೊಂಡು ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲೂಕುಗಳನ್ನು ಇದು ಒಳಗೊಂಡಿದೆ.

ರಾಮನಗರದ ಮೊದಲ ಹೆಸರು: ಇತಿಹಾಸ ನೋಡುವುದಾದರೆ, ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದ್ದರು. ಹೊಯ್ಸಳರು, ಚೋಳರು, ರಾಷ್ಟ್ರಕೂಟರು, ಕೆಂಪೇಗೌಡ ವಂಶಸ್ಥರು, ಟಿಪ್ಪು ಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರು ಆಡಳಿತ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕೆಲವು ಕಡೆ ಇತಿಹಾಸಪೂರ್ವ ಕಾಲದ ಕುರುಹುಗಳು ಪತ್ತೆಯಾಗಿವೆ.

Ramnagar District Politics
ರಾಮಕೃಷ್ಣ ಹೆಗಡೆ

ಟಿಪ್ಪು ಸುಲ್ತಾನ್ ಆಡಳಿತದ ಕಾಲದಲ್ಲಿ ಈ ಪಟ್ಟಣವನ್ನು ಶಂಸೆರಾಬಾದ್ ಎಂದು ಕರೆಯಲಾಗುತಿತ್ತು. ಆ ನಂತರ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಬ್ಯಾರಿ ಕ್ಲೋಸ್ ಎಂಬುವರ ಅವಧಿಯಲ್ಲಿ ಇದನ್ನು ಕ್ಲೋಸ್ ಪೇಟೆ ಎಂದು ಕರೆಯುತ್ತಿದ್ದರು. ಸ್ವಾತಂತ್ರ್ಯದ ನಂತರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಕ್ಲೋಸ್ ಪೇಟೆ ಅನ್ನು ರಾಮನಗರ ಎಂದು ಮರು ನಾಮಕರಣ ಮಾಡಿದರು. 1884ರ ವರೆಗೆ ಮೈಸೂರು ಸಂಸ್ಥಾನದ ಉಪ ವಿಭಾಗ ಕೇಂದ್ರವಾಗಿದ್ದ ಕ್ಲೋಸ್ ಪೇಟೆ 1928ರಲ್ಲಿ ತಾಲೂಕು ಕೇಂದ್ರವಾಯಿತು. ಸ್ವಾತಂತ್ರ್ಯಾನಂತರ 1949ರಲ್ಲಿ ಕ್ಲೋಸ್ ಪೇಟೆಗೆ ರಾಮನಗರ ಎಂದು ನಾಮಕರಣ ಮಾಡಲಾಯಿತು.

ಕಣ್ವ, ಶಿಂಷಾ, ಕಾವೇರಿ, ಅರ್ಕಾವತಿ, ವೃಷಭಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ಪ್ರಮುಖ ಬೆಳೆಯಾಗಿದೆ. ಇನ್ನು ರಾಮನಗರ ಹಾಗೂ ಕನಕಪುರ ತಾಲೂಕುಗಳು ಗ್ರಾನೈಟ್ ಶಿಲೆಗಳಿಗೆ ಖ್ಯಾತಿ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ಕ್ಲೋಸ್ ಪೇಟೆ ಗ್ರಾನೇಟ್ ಎಂದೇ ಹೆಸರುವಾಸಿ.

Ramnagar District Politics
ಹೆಚ್​ಡಿ ದೇವೇಗೌಡ

ರಾಜಕೀಯ ಇತಿಹಾಸ: ರಾಜ್ಯಕ್ಕೆ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆಗೆ ರಾಮನಗರ ಜಿಲ್ಲೆ ಪಾತ್ರವಾಗಿದೆ. ರಾಜಕೀಯ ಘಟನಾವಳಿಗಳ ತವರಾಗಿರುವ ರಾಮನಗರದ ರಾಜಕೀಯ ಇತಿಹಾಸವೇ ಒಂದು ರೀತಿ ರೋಚಕ. ರಾಜ್ಯದ ಎರಡನೇ ಮುಖ್ಯಮಂತ್ರಿ ಹಾಗೂ ಮೊದಲ ಚುನಾಯಿತ ಮುಖ್ಯಮಂತ್ರಿ ಎಂದೇ ಹೆಸರು ಮಾಡಿದ್ದ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಸ್ಪರ್ಧೆ ಮಾಡಿದ್ದು ಇದೇ ರಾಮನಗರ ಕ್ಷೇತ್ರದಲ್ಲಿ.

1952ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್ ಹನುಮಂತಯ್ಯ, ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. 1952 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತವನ್ನು ನೀಡಿದ್ದರು. ಇದಾದ ನಂತರ 1983 ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಅವರು ಶಾಸಕರಾಗಿರಲಿಲ್ಲ. ಹೀಗಾಗಿ, ಕನಕಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1994 ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ನಂತರ 1996 ರಲ್ಲಿ ವಿಧಾನಸಭೆಗೆ ರಾಜೀನಾಮೆ ನೀಡಿ ಪ್ರಧಾನಿ ಹುದ್ದೆಗೇರಿದರು. ಆಗ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಚುನಾವಣೆಗೆ ಅಂಬರೀಶ್ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್​ನ ಸಿ.ಎಂ. ಲಿಂಗಪ್ಪ ಅವರ ಎದುರು ಅಂಬರೀಶ್ ಸೋಲು ಅನುಭವಿಸಿದರು.

Ramnagar District Politics
ಹೆಚ್​ಡಿ ಕುಮಾರಸ್ವಾಮಿ

2004 ರಲ್ಲಿ ರಾಮನಗರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನಂತರ 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದ್ದರು. ಅವರು ರಾಮನಗರ ಕ್ಷೇತ್ರ ತೊರೆದು, ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡರು. ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ರಾಮನಗರ, ಕನಕಪುರ, ಚನ್ನಪಟ್ಟಣ ತಾಲೂಕುಗಳಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ರಾಮನಗರ ಕ್ಷೇತ್ರಕ್ಕೆ ಮೂರು ಬಾರಿ ಸಿಎಂ ಹುದ್ದೆ ಸಿಕ್ಕಿದೆ. ಆದರೆ, ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದ ಯಾರೊಬ್ಬರೂ ಸಹ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದೇ ವಿಚಿತ್ರವಾದ ಸಂಗತಿ.

ರಾಮನಗರ ಕ್ಷೇತ್ರ ಹಿಂದಿನಿಂದಲೂ ಜಿದ್ದಾಜಿದ್ದಿನ ಚುನಾವಣೆ ಮೂಲಕ ಹೆಸರು ಮಾಡಿದೆ. ಅಂತಹ ಹಲವು ಚುನಾವಣೆಗಳಲ್ಲಿ 1997 ರ ಉಪಚುನಾವಣೆಯೂ ಒಂದು. ನಟ ಅಂಬರೀಶ್ ರಾಮನಗರ ರಾಜಕಾರಣದಲ್ಲಿ ಸ್ಟಾರ್ ಆಗಲು ಹರಸಾಹಸಪಟ್ಟ ಚುನಾವಣೆ. ಈ ಕಣದಲ್ಲಿ ಅಂಬರೀಶ್ ಅವರನ್ನು ಸೋಲಿಸುವ ಮೂಲಕ ಸಿ.ಎಂ. ಲಿಂಗಪ್ಪ ಮತ್ತೆ ಮುನ್ನೆಲೆಗೆ ಬಂದರು. ರಾಜ್ಯ ರಾಜಕಾರಣದಲ್ಲಿ ಭಾರಿ ಸುದ್ದಿಯಾಗಿತ್ತು.

ಅಂದು ನಡೆದಿದ್ದೇನು?: 1994 ರಲ್ಲಿ ನಡೆದ ಚುನಾವಣೆಯಲ್ಲಿ ಹಾಸನದಿಂದ ರಾಮನಗರಕ್ಕೆ ಬಂದ ಹೆಚ್.ಡಿ.ದೇವೇಗೌಡರು ಜನತಾದಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಆ ಮೂಲಕ ಕ್ಷೇತ್ರದ ಜನರ ವಿಶ್ವಾಸಗಳಿಸಿ ಗೆಲುವು ಸಾಧಿಸಿದರು. ಅಂದು ಜನತಾ ದಳಕ್ಕೆ ಬಹುಮತ ಬಂದ ಕಾರಣ ಮುಖ್ಯಮಂತ್ರಿ ರೇಸ್​ನಲ್ಲಿದ್ದ ದೇವೇಗೌಡರು, ಜಿಲ್ಲೆಯ ಜನತೆಯ ಸಹಕಾರದೊಂದಿಗೆ ಮುಖ್ಯಮಂತ್ರಿಯಾದರು. ಆಗ ರಾಷ್ಟ್ರ ರಾಜಕಾರಣದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೇರುವ ಯೋಗವೂ ಗೌಡರಿಗೆ ಬಂತು. ಅವರು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಸಭೆ ಸದಸ್ಯರಾದರು. ಹಾಗಾಗಿ, 1997 ರ ಜನವರಿ-ಫೆಬ್ರವರಿಯಲ್ಲಿ ರಾಮನಗರ ವಿಧಾನಸಭೆಗೆ ಉಪ ಚುನಾವಣೆ ಘೋಷಣೆಯಾಯಿತು. ಆಗ ನಟ ಅಂಬರೀಶ್ ಅವರು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಕಣ ರಂಗು ಪಡೆಯಿತು.

ರಾಜ್ಯದಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರಕ್ಕೆ ದೇವೇಗೌಡರು ಪ್ರತಿನಿಧಿಸಿದ್ದ ರಾಮನಗರ ಕ್ಷೇತ್ರವನ್ನು ತಮ್ಮ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವ ಪ್ರತಿಷ್ಠೆ. ಆದರೆ, ದೇವೇಗೌಡರ ಎದುರು ಸೋತಿದ್ದ ಸಿ.ಎಂ. ಲಿಂಗಪ್ಪ ಹಾಗೂ ಕಾಂಗ್ರೆಸ್​ಗೆ ಮರಳಿ ಕ್ಷೇತ್ರವನ್ನು ಪಡೆಯುವ ಮೂಲಕ ಆಡಳಿತಾರೂಢ ಪಕ್ಷ ಜನತಾದಳಕ್ಕೆ ಉತ್ತರ ನೀಡುವ ತವಕ ಹೊಂದಿದ್ದರು. ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಶ್ ಅವರಿಗೆ ಹೋದ ಕಡೆ ಜನ ಬೆಂಬಲವೂ ವ್ಯಕ್ತವಾಗುತ್ತಿತ್ತು. ಇದರಿಂದ ಗೆಲುವು ನಮ್ಮದೇ ಎಂಬ ಭಾವನೆ ಜನತಾದಳಕ್ಕೆ ಮೂಡಿತ್ತು. ಆಗಲೇ ಸೋಲು ಕಂಡಿದ್ದ ಸಿ.ಎಂ. ಲಿಂಗಪ್ಪ ಗೆಲುವು ಸಾಧಿಸಲೇಬೇಕು ಎನ್ನುವ ಹಠಕ್ಕೆ ಬಿದ್ದವರಂತೆ ಹೋರಾಟ ನಡೆಸಿದರು. ಕೊನೆಗೆ ಅವರು ಗೆಲವು ಸಾಧಿಸಿದರು. ಆದರೆ, 1997 ರಲ್ಲಿ ಪ್ರಕಟಗೊಂಡ ಫಲಿತಾಂಶ ಬೇರೆಯದ್ದೇ ಆಗಿತ್ತು. ಮತದಾರ ಅಂಬರೀಶ್ ಅವರ ಸ್ಟಾರ್​​ಗಿರಿಗೆ ಮಣೆ ಹಾಕಲಿಲ್ಲ. ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಆರಿಸಿದ ಹಿರಿಮೆಗೆ ರಾಮನಗರ ಜಿಲ್ಲೆ ಭಾಜನವಾಗಿದೆ. ಈ ನಾಲ್ವರು ನಾಯಕರೂ ಸಹ ಕೇಂದ್ರ ರಾಜಕಾರಣದಲ್ಲೂ ಮಿಂಚಿರುವುದು ವಿಶೇಷ.

Ramnagar District Politics
ಡಿಕೆ ಶಿವಕುಮಾರ್

ಮತ್ತೆ ಮುನ್ನೆಲೆಗೆ ಬಂದ ರಾಮನಗರ: ಇದೀಗ ನಾಲ್ವರು ನಾಯಕರನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದ ರಾಮನಗರ ಮತ್ತೆ ಮುನ್ನೆಲೆಗೆ ಬಂದಿದೆ. 2023ರ ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿಬ್ಬರು ರಾಮನಗರ ಜಿಲ್ಲೆಯಿಂದಲೇ ಸ್ಪರ್ಧಿಸಿರುವುದು ವಿಶೇಷ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಎರಡು ಬಾರಿ ರಾಮನಗರದಿಂದ ಸ್ಪರ್ಧಿಸಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈ ಬಾರಿ ಸ್ವತಂತ್ರ ಸರ್ಕಾರ ರಚನೆ ಮಾಡಬೇಕೆಂದು ಹಠ ತೊಟ್ಟು ರಾಜ್ಯ ಸುತ್ತುತ್ತಿದ್ದಾರೆ.

ಇನ್ನು ಶತಾಯಗತಾಯ ಕಾಂಗ್ರೆಸ್ ಸರ್ಕಾರವನ್ನು ಈ ಬಾರಿ ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಕನಸು ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಹ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನನಗೂ ಒಂದು ಅವಕಾಶ ಕೊಡಿ, ನಿಮ್ಮ ಸೇವೆ ಮಾಡುವುದಕ್ಕೆ ನಾನು ಸಿದ್ದ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಲವು ಕಡೆ ಸಿಎಂ ಆಗುವ ಬಗ್ಗೆ ಪರೋಕ್ಷವಾಗಿ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಆದರೆ, ಅದು ಅಷ್ಟು ಸುಲಭದ ಮಾತಲ್ಲ. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸಿಎಂ ಆಕಾಂಕ್ಷಿಯಾಗಿದ್ದಾರೆ.

ಇತ್ತೀಚೆಗೆ ಖಾಸಗಿ ಇಂಗ್ಲಿಷ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲೂ ಮುಖ್ಯಮಂತ್ರಿಯಾಗುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು. ಒಂದು ವೇಳೆ ಕಾಂಗ್ರೆಸ್ ಬಹುಮತ ಗಳಿಸಿ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಮೇಲೆ ಒಲವು ತೋರಿದರೆ ರಾಮನಗರ ಜಿಲ್ಲೆಗೆ ಸಿಎಂ ಸ್ಥಾನದ ಸಂಖ್ಯೆ ಐದಕ್ಕೆ ಏರುತ್ತದೆ. ಅದೇ ರೀತಿ ಜೆಡಿಸ್​ಗೆ ಬಹುಮತ ಬಂದರೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಹಾಗಾಗಿ, ರಾಜ್ಯದ ಚಿತ್ತ 2023 ರ ಮೇ 10, 13 ರತ್ತ ನೆಟ್ಟಿದೆ.

ಇದನ್ನೂ ಓದಿ: ರೇಷ್ಮೆ ನಗರಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಬಿಸಿ: ಪಕ್ಷಗಳಲ್ಲಿ ಬಲಾಬಲ ಹೀಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.