ETV Bharat / assembly-elections

ಅನುಕಂಪದ ಅಲೆಯಲ್ಲಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ.. ಬಿಜೆಪಿ-ಜೆಡಿಎಸ್​ ನಡೆ ಏನು? - ಮುಂಬರುವ ವಿಧಾನಸಭಾ ಚುನಾವಣೆ

ಹಲವು ರಾಜಕೀಯ ಕಾರಣಗಳಿಂದ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ ಈ ಸಾರಿ ಸುದ್ದಿಯಾಗುತ್ತಿದೆ. ಕಾಂಗ್ರೆಸ್​ನಿಂದ ಈಗಾಗಲೇ ದರ್ಶನ್ ಧ್ರುವನಾರಾಯಣ್ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾಗಿದ್ದು ಬಿಜೆಪಿ ಕೂಡ ತನ್ನ ಹುರಿಯಾಳನ್ನು ಅಂತಿಮಗೊಳಿಸುವ ಸನಿಹದಲ್ಲಿದೆ. ಇದರ ನಡುವೆ ಜೆಡಿಎಸ್​ ಕೂಡ ಕ್ಷೇತ್ರದಲ್ಲಿ ಪ್ರಬಲ ಪಕ್ಷವಾಗಿ ಪೈಪೋಟಿ ನೀಡುವ ಹುಮ್ಮಸ್ಸಿನಲ್ಲಿದೆ.

Nanjangud Assembly Constituency Profile
Nanjangud Assembly Constituency Profile
author img

By

Published : Mar 25, 2023, 6:16 PM IST

ಮೈಸೂರು: ದಕ್ಷಿಣ ಕಾಶಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅನುಕಂಪ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚು. ಧ್ರುವನಾರಾಯಣ್ (ಇತ್ತೀಚೆಗೆ ಅಕಾಲಿಕ ನಿಧನರಾದ ಕಾಂಗ್ರೆಸ್​ ಮುಖಂಡ) ಅವರ ಪುತ್ರ ದರ್ಶನ್ ಧ್ರುವನಾರಾಯಣ್ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ, ಹಾಲಿ ಬಿಜೆಪಿ ಶಾಸಕ ಹರ್ಷವರ್ಧನ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಕಾಂಗ್ರೆಸ್​ನಿಂದ ಈಗಾಗಲೇ ದರ್ಶನ್ ಧ್ರುವನಾರಾಯಣ್ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾಗಿದ್ದು ಬಿಜೆಪಿಯಿಂದ ಹರ್ಷವರ್ಧನ್ ಮತ್ತೆ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಇದರೊಂದಿಗೆ ಇನ್ನೂ ಹಲವರಿದ್ದಾರೆ. ಇತ್ತ ಜೆಡಿಎಸ್​ ಕೂಡ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಪ್ರಯತ್ನ ನಡೆಸಿದೆ. ಸದ್ಯ ಕ್ಷೇತ್ರದಲ್ಲಿ ಅನುಕಂಪದ ಅಲೆ ಜೋರಾಗಿದ್ದು, ಅಭಿವೃದ್ಧಿ ವಿಚಾರಗಳು ಕೆಲಸ ಮಾಡಲಿದೆಯಾ? ಅಥವಾ ಅನುಕಂಪದ ಅಲೆ ಕೆಲಸ ಮಾಡಲಿದೆಯಾ? ಅನ್ನೋದನ್ನು ಕಾದು ನೋಡಬೇಕಿದೆ.

ಕಾಂಗ್ರೆಸ್​ ಅಭ್ಯರ್ಥಿ ದರ್ಶನ್ ಧ್ರುವನಾರಾಯನ್​ಗೆ ತಂದೆಯ ಹೆಸರು ಪ್ಲಸ್​ ಪಾಯಿಂಟ್​ ಆಗಬಹುದು. ಅಲ್ಲದೇ ಹಾಲಿ ಬಿಜೆಪಿ ಶಾಸಕ ಹರ್ಷವರ್ಧನ್​ಗೆ ಅಭಿವೃದ್ಧಿ ಹಾಗೂ ಮಾವನ ನಾಮಬಲ ಕೂಡ ಕೆಲಸ ಮಾಡಬಹುದು. ಇದರ ನಡುವೆ ಜೆಡಿಎಸ್​ ಯಾವ ರೀತಿ ಮತಗಳನ್ನು ಸೆಳೆಯುತ್ತದೆ ಅನ್ನೋದನ್ನು ಸಹ ಕಾದು ನೋಡಬೇಕು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

Nanjangud Assembly Constituency Profile
ಹಾಲಿ ಬಿಜೆಪಿ ಶಾಸಕ ಹರ್ಷವರ್ಧನ್

ಅನುಕಂಪ ಕಾಂಗ್ರೆಸ್​ಗೆ: ನಂಜನಗೂಡು ಮೀಸಲು ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ಕ್ಷೇತ್ರದಲ್ಲಿ ಉಪಚುನಾವಣೆ ಸೇರಿದಂತೆ ಇಲ್ಲಿಯವರೆಗೆ 15ಕ್ಕೂ ಹೆಚ್ಚು ಬಾರಿ ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್ ಪಕ್ಷ 10ಕ್ಕೂ ಹೆಚ್ಚು ಬಾರಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದೆ. ಕ್ಷೇತ್ರದಲ್ಲಿ ಮೂರು ಬಾರಿ ಜೆಡಿಎಸ್, ಎರಡು ಬಾರಿ ಜನತಾ ಪಕ್ಷ ಹಾಗೂ ಒಂದು ಬಾರಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿ ಧ್ರುವನಾರಾಯಣ್ ಅವರ ನಿಧನ, ಅವರ ಮಗ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್​ಗೆ ವರವಾಗುವ ಸಾಧ್ಯತೆ ಇದೆ.

ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದೆ ಇದೆ. ಅದು ಈ ಬಾರಿ ಚುನಾವಣೆಯಲ್ಲಿ ವರ್ಕೌಟ್ ಆದರೆ‌ ಕಾಂಗ್ರೆಸ್​ಗೆ ವರ ಆಗಲಿದೆ. ಕೊನೆ ಕ್ಷಣದಲ್ಲಿ ಬಿಜೆಪಿ ಪರವಾಗಿ ರಾಜ್ಯದ ಮುಖಂಡರು ಚುನಾವಣಾ ಪ್ರಚಾರ ನಡೆಸಿದರೆ ಮಾತ್ರ ಬಿಜೆಪಿಗೆ ಅನುಕೂಲ ಆಗಲಿದೆ ಅನ್ನೋದು ರಾಜಕೀಯ ವಿಶ್ಲೇಷಕ ಮಾತು. ಕ್ಷೇತ್ರದಲ್ಲಿ ಜೆಡಿಎಸ್ ಕೂಡ ಸ್ಪರ್ಧೆ ಮಾಡಲಿದ್ದು, ಗೆಲುವಿನ ಸಾಧ್ಯತೆ ಕಡಿಮೆ. ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲ್ಲಬಹುದು ಎನ್ನಲಾಗುತ್ತಿದೆ.

Nanjangud Assembly Constituency Profile
ನಂಜನಗೂಡು ವಿಧಾನಸಭಾ ಕ್ಷೇತ್ರದ ವಿವರ

ಕ್ಷೇತ್ರದ ಮತದಾರರ ಮಾಹಿತಿ: ಕಳೆದ ಚುನಾವಣೆಯ ಮಾಹಿತಿಯ ಪ್ರಕಾರ ಕ್ಷೇತ್ರದಲ್ಲಿ ಅಂದಾಜು 2,09,121 ಒಟ್ಟು ಮತದಾರರಿದ್ದಾರೆ. ಅದರಲ್ಲಿ ಪುರುಷರು ಮತದಾರು 1,03,775, ಮಹಿಳೆಯರು 1,05,335 ಹಾಗೂ ಇತರೆ 11 ಮತಗಳಿವೆ. ವೀರಶೈವ ಲಿಂಗಾಯತ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಉಪ್ಪಾರರು, ಮುಸ್ಲಿಂರು, ಕುರುಬ ಸಮುದಾಯದವರು, ಒಕ್ಕಲಿಗ ಹಾಗೂ ಇತರೆ ಸಮುದಾಯದ ಮತದಾರರು ಇದ್ದಾರೆ.

Nanjangud Assembly Constituency Profile
ಕಾಂಗ್ರೆಸ್​ ಮುಖಂಡರ ಜೊತೆ ದರ್ಶನ್ ಧ್ರುವನಾರಾಯಣ್

ಈವರೆಗೆ ಗೆದ್ದ ಪಕ್ಷವಾರು ಅಭ್ಯರ್ಥಿಗಳು: ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್​ ಪಕ್ಷ ಸ್ವಲ್ಪ ಪ್ರಾಬಲ್ಯ ಹೊಂದಿದೆ. ಪಿ.ಮದೇವಯ್ಯ, ಎನ್.ರಾಚಯ್ಯ ಒಂದು ಬಾರಿ, ಕೆ.ಜಿ.ಶಿವಯ್ಯ, ಎಂ.ಮಹದೇವ್ ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್​ ಪಕ್ಷದಿಂದ ಎರಡೆರಡು ಬಾರಿ ಗೆಲುವು ಸಾಧಿಸಿದ್ದು ಕ್ಷೇತ್ರದ ವಿಶೇಷ.

1957 : ಪಿ.ಮದೇವಯ್ಯ (ಕಾಂಗ್ರೆಸ್)
1962 : ಎನ್.ರಾಚಯ್ಯ (ಕಾಂಗ್ರೆಸ್)
1967 : ಎಲ್.ಶ್ರೀಕಂಠಯ್ಯ (ಪಕ್ಷೇತರ)
1972 : ಕೆ.ಜಿ.ಶಿವಯ್ಯ (ಕಾಂಗ್ರೆಸ್)
1978 : ಕೆ.ಬಿ.ಶಿವಯ್ಯ (ಕಾಂಗ್ರೆಸ್)
1983 : ಎಂ.ಮಹದೇವ್ (ಕಾಂಗ್ರೆಸ್)
1985 : ಡಿ.ಟಿ.ಜಯಕುಮಾರ್ (ಜನತಾ ಪಕ್ಷ)
1989 : ಎಂ.ಮಹದೇವ್ (ಕಾಂಗ್ರೆಸ್)
1994 : ಡಿ.ಟಿ.ಜಯಕುಮಾರ್ (ಜನತಾ ಪಕ್ಷ)
1999 : ಎಂ.ಮಹದೇವ್ (ಕಾಂಗ್ರೆಸ್)
2004 : ಡಿ.ಟಿ.ಜಯಕುಮಾರ್ (ಜೆಡಿಎಸ್)
2008 : ವಿ.ಶ್ರೀನಿವಾಸ್ ಪ್ರಸಾದ್ (ಕಾಂಗ್ರೆಸ್)
2013 : ವಿ.ಶ್ರೀನಿವಾಸ್ ಪ್ರಸಾದ್ (ಕಾಂಗ್ರೆಸ್)
2017 : ಕಳಲೆ ಕೇಶವಮೂರ್ತಿ (ಉಪಚುನಾವಣೆ-ಕಾಂಗ್ರೆಸ್)
2018 : ಹರ್ಷವರ್ಧನ್ (ಬಿಜೆಪಿ)

ಇದನ್ನೂ ಓದಿ: ಸಿಎಂ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಫೈಟರ್​​ ಯಾರು?: ಗುಟ್ಟು ಬಿಟ್ಟುಕೊಡದ ಕಾಂಗ್ರೆಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.