ETV Bharat / assembly-elections

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: ಬಿಜೆಪಿ - ಕಾಂಗ್ರೆಸ್ ನಡುವೆ ಬಿಗ್ ಫೈಟ್

ಅಭ್ಯರ್ಥಿಗಳ ಘೋಷಣೆ ಆಗದಿದ್ದರೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಟಿಕೆಟ್​ ಸಿಗುವ ವಿಶ್ವಾಸದಲ್ಲಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

Mangaluru City South Assembly Constituency Profile

author img

By

Published : Apr 10, 2023, 2:27 PM IST

Updated : Apr 10, 2023, 2:43 PM IST

ಮಂಗಳೂರು: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವೂ ಒಂದು. ಈ ಕ್ಷೇತ್ರ ಹೆಚ್ಚು ಆವರಿಸಿದ್ದು ಮಂಗಳೂರು ನಗರದಲ್ಲಿಯೇ ಅನ್ನೋದು ವಿಶೇಷ. ಸದ್ಯ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಪ್ರಬಲ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಈವರೆಗೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಆದರೆ, ಬಿಜೆಪಿಯಿಂದ ಹಾಲಿ ಶಾಸಕ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸ್​ನಿಂದ ಮಾಜಿ ಶಾಸಕ ಜೆಆರ್ ಲೋಬೋ ತಮಗೆ ಟಿಕೆಟ್ ಸಿಗುವ ವಿಶ್ವಾಸದಿಂದ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆಪ್​ ಪಕ್ಷದಿಂದ ಸಂತೋಷ್ ಕಾಮತ್ ಕಣಕ್ಕಿಳಿಯುತ್ತುದ್ದರೆ ಕೆಆರ್​ಎಸ್​ ಪಕ್ಷದಿಂದ ವಿನ್ನಿ ಪಿಂಟೋ ಎನ್ನುವವರು ಸ್ಪರ್ಧೆ ಮಾಡಲಿದ್ದಾರೆ.

Mangaluru City South Assembly Constituency Profile
ವೇದವ್ಯಾಸ ಕಾಮತ್

ಈ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮತ್ತು ಜಿಎಸ್​ಬಿ ಸಮುದಾಯದ ಮತದಾರರೇ ನಿರ್ಣಾಯಕ. ಈ ಹಿನ್ನೆಲೆ ಬಿಜೆಪಿ ಜಿಎಸ್​ಬಿ ಸಮುದಾಯದ ಮತದಾರರ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಇನ್ನು ಕಾಂಗ್ರೆಸ್ ಪಕ್ಷ ಕ್ರಿಶ್ಚಿಯನ್ ಸಮುದಾಯದ ಮತದಾರರ ಮೇಲೆ ಕಣ್ಣಿಟ್ಟಿದ್ದು, ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಯನ್ನು ನಿರಂತರವಾಗಿ ಆಯ್ಕೆ ಮಾಡುತ್ತದೆ. ರಾಜ್ಯದಲ್ಲಿ ಜಿಎಸ್​ಬಿ ಸಮುದಾಯಕ್ಕೆ ಬಿಜೆಪಿ ನೀಡಬಹುದಾದ ಏಕೈಕ ಕ್ಷೇತ್ರ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನೀಡುವ ಪ್ರಾತಿನಿಧ್ಯ ಇರುವ ಕ್ಷೇತ್ರ ಇದಾಗಿದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

ಮಂಗಳೂರು ಕ್ಷೇತ್ರ 2008ರಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರವಾಗಿ ಪುನರ್ ವಿಂಗಡಣೆ ಆಯಿತು. 1957ರಿಂದ 1972ರವರೆಗೆ ಈ ಕ್ಷೇತ್ರವನ್ನು ಮಂಗಳೂರು-1 ಎಂದು ಕರೆಯಲಾಗುತ್ತಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿಯ ಎನ್. ಯೋಗೀಶ್‌ ಭಟ್ ಸತತ 4 ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ವಿಧಾನಸಭೆಯ ಉಪ ಸಭಾಪತಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ವಿಜೇತ ಅಭ್ಯರ್ಥಿಗಳ ಆಸ್ತಿ ಘೋಷಣೆ ಹಾಗೂ ಕ್ರಿಮಿನಲ್​ ಪ್ರಕರಣಗಳ ಮಾಹಿತಿ

ಕಾಂಗ್ರೆಸ್‌ನ ಮಣೇಲ್ ಶ್ರೀನಿವಾಸ ನಾಯಕ ಮತ್ತು ಬೇಸಿಯಸ್ ಡಿಸೋಜಾ ಅವರು ತಲಾ 2 ಬಾರಿ ಮಂಗಳೂರು 1 ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಬೇಸಿಯಸ್ ಡಿಸೋಜಾ ಅವರು ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. 1952ರ ಚುನಾವಣೆಯಲ್ಲಿ ನ್ಯಾಯವಾದಿ, ಕಾಂಗ್ರೆಸ್‌ನ ಹಿರಿಯ ನಾಯಕ ಎಲ್.ಸಿ. ಪ್ಯಾಸ್ (ಲೂಯಿಸ್ ಸಿಪ್ರಿಯಾನ್ ಪ್ಯಾಸ್) ಜಯ ಸಾಧಿಸಿದರು. ಮಂಗಳೂರು ಆಗ ಮದ್ರಾಸ್ ರಾಜ್ಯಕ್ಕೆ ಸೇರಿತ್ತು. 1952ರಲ್ಲಿ ಪಾಣೆ ಮಂಗಳೂರು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಕಾಂಗ್ರೆಸ್​ನ ವೈಕುಂಠ ಬಾಳಿಗಾ 1957ರ ಚುನಾವಣೆಯಲ್ಲಿ ಮಂಗಳೂರು-1 ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಎರಡನೇ ಬಾರಿಗೆ ಶಾಸಕರಾದರು. 1962ರಲ್ಲಿ ವೈಕುಂಠ ಬಾಳಿಗಾ ಅವರು ಬೆಳ್ತಂಗಡಿ ಕ್ಷೇತ್ರದಿಂದಲೂ ಸ್ಪರ್ಧಿಸಿದರು.

ಸ್ಥಾನವಾರು ವಿಧಾನಸಭೆ ಚುನಾವಣೆ

ಮಂಗಳೂರು-1 ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಮಣೇಲ್ ಶ್ರೀನಿವಾಸ ನಾಯಕ್‌ ಜಯ ದಾಖಲಿಸಿದರು. 1967ರಲ್ಲಿ ಶ್ರೀನಿವಾಸ ನಾಯಕ್‌ ಪುನರಾಯ್ಕೆಯಾದರು. ಈ ಎರಡು ಚುನಾವಣೆಗಳಲ್ಲಿ ಸಿಪಿಐ ಅಭ್ಯರ್ಥಿಗಳು 2ನೇ ಸ್ಥಾನವನ್ನು ಗಳಿಸಿದ್ದರು. 1972ರಲ್ಲಿ ಕಾಂಗ್ರೆಸ್‌ನ ಎಡ್ಡಿ ಸಲ್ದಾನಾ ವಿಜೇತರಾಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಯನ್ನು ಪಡೆದರು. 1978ರಲ್ಲಿ ಕಾಂಗ್ರೆಸ್‌ನ ಪಿ.ಎಫ್ ರಾಡ್ರಿಗಸ್ ಗೆದ್ದು ವಿಧಾನ ಸಭೆ ಪ್ರವೇಶಿಸಿದರು. ಗುಂಡೂರಾವ್‌ ಸರ್ಕಾರದಲ್ಲಿ ಅವರು ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 1983ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ಪಾಲಾಯಿತು. ನ್ಯಾಯವಾದಿ ವಿ.ಧನಂಜಯಕುಮಾರ್ ಕಾಂಗ್ರೆಸ್​ನ ಪಿ.ಎಫ್‌. ರಾಡ್ರಿಗಸ್‌ರನ್ನು ಪರಾಭವಗೊಳಿಸಿ ಶಾಸಕರಾದರು.

ಪುರುಷ ಮತ್ತು ಮಹಿಳಾ ಮತದಾರರ ಮಾಹಿತಿ

1985ರಲ್ಲಿ ಮತ್ತೆ ಕಾಂಗ್ರೆಸ್‌ ಜಯಭೇರಿ ಬಾರಿಸಿತು. ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ನ್ಯಾಯವಾದಿ ಬ್ಲೇಸಿಯಸ್‌ ಡಿಸೋಜಾ ವಿಧಾನಸಭೆ ಪ್ರವೇಶಿಸಿದರು. 1989ರಲ್ಲಿ ಪುನರಾಯ್ಕೆಯಾದ ಬ್ಲೇಸಿಯಸ್‌ ಅವರು ವೀರಪ್ಪ ಮೊಯ್ಲಿ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದರು. 1994ರಲ್ಲಿ ಮತ್ತೆ ಬಿಜೆಪಿಗೆ ಜಯ ಸಿಕ್ಕಿತ್ತು. ಬ್ಲೇಸಿಯಸ್‌ ಡಿಸೋಜಾರನ್ನು ಪರಾಭವಗೊಳಿಸಿದ ಯೋಗೀಶ್ ಭಟ್ ಅವರು ಶಾಸಕರಾದರು. 1999, 2004 ಮತ್ತು 2008ರಲ್ಲಿ ಯೋಗೀಶ್ ಭಟ್ ಸತತ ಜಯ ದಾಖಲಿಸಿ ಒಟ್ಟು 4 ಬಾರಿ ಶಾಸಕರಾದರು. ವಿಧಾನಸಭೆಯ ಉಪ ಸಭಾಪತಿ ಹಾಗೂ ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದರು. 2013ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ಕೈ ತಪ್ಪಿತು. ಸರ್ಕಾರಿ ಅಧಿಕಾರಿಯಾಗಿದ್ದ ಜೆ.ಆರ್.ಲೋಬೊ ಅವರು ರಾಜಕೀಯ ಪ್ರವೇಶಿಸಿ ಕಾಂಗ್ರೆಸ್ ಟಿಕೆಟ್ ಪಡೆದು ಜಯ ಗಳಿಸಿದರು. 2018ರ ಚುನಾವಣೆಯಲ್ಲಿ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಯಿತು. ಬಿಜೆಪಿ ಮಂಗಳೂರು ನಗರ ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿದ್ದ ಯುವ ನಾಯಕ ವೇದವ್ಯಾಸ ಕಾಮತ್‌ ಅವರು ಕಾಂಗ್ರೆಸ್‌ನ ಜೆ.ಆರ್. ಲೋಬೊ ಅವರನ್ನು ಸೋಲಿಸಿ ಪ್ರಥಮ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದರು.

ಅಭ್ಯರ್ಥಿಗಳ ಗೆಲುವಿನ ಅಂತರ

ಕ್ಷೇತ್ರದ ಮತದಾರರು: ಕ್ಷೇತ್ರದಲ್ಲಿ ಒಟ್ಟು 2,42,407 ಮತದಾರರು ಇದ್ದಾರೆ. ಅದರಲ್ಲಿ 1,15,920 ಪುರುಷರು, 1,26,441 ಮಹಿಳೆಯರು ಹಾಗೂ 46 ತೃತೀಯ ಲಿಂಗಿಗಳು ಇದ್ದಾರೆ. 18 ಮತ್ತು 19 ವಯಸ್ಸಿನವರೇ 3,462 ಮತದಾರರಿದ್ದಾರೆ. 8,927 ಮತದಾರರು 80 ವರ್ಷ ಮೇಲ್ಪಟ್ಟವರಿದ್ದರೆ, 2,439 ಮತದಾರರು 90 ವರ್ಷ ಮೇಲ್ಪಟ್ಟವರಿದ್ದಾರೆ. 180 ಮತದಾರರು 100 ವರ್ಷ ಮೇಲ್ಪಟ್ಟವರಿದ್ದರೆ, 591 ವಿಕಲ ಚೇತನ ಮತದಾರರಿದ್ದಾರೆ. ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚು ಇರುವುದು ಕ್ಷೇತ್ರದ ವೈಶಿಷ್ಟ್ಯ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವರ

ಕ್ಷೇತ್ರದ ವೈಶಿಷ್ಟ್ಯ: ಮಂಗಳೂರು ನಗರ (ಜನರಲ್) ವಿಧಾನಸಭಾ ಕ್ಷೇತ್ರವು ದಕ್ಷಿಣ ಕನ್ನಡ ಸಂಸದೀಯ/ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. 2008ರ ಕ್ಷೇತ್ರ ವಿಂಗಡಣೆಯ ಪ್ರಕಾರ, ಇದು, ಮಂಗಳೂರು ನಗರ, ಮಂಗಳೂರು ತಾಲೂಕು ಸೇರಿದಂತೆ ವಾರ್ಡ್ ಸಂಖ್ಯೆ 21 ಮತ್ತು 24 ರಿಂದ 60ರ ವರೆಗೆ ಒಳಗೊಳ್ಳುತ್ತದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 58.47% ರಷ್ಟು ಹಾಗೂ ಕಾಂಗ್ರೆಸ್​ 38.89% ಮತಗಳನ್ನು ಪಡೆದುಕೊಂಡಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ 68.16% ಮತದಾನವಾಗಿದ್ದರೆ 1,063 ನೋಟಾ ಮತಗಳು ಚಲಾವಣೆಯಾಗಿವೆ. 2018ರಲ್ಲಿ ಕ್ಷೇತ್ರದಲ್ಲಿ ಒಟ್ಟು 2,40,092 ಮತದಾರರಿದ್ದರು. ಒಟ್ಟು ಮಾನ್ಯ ಮತಗಳ ಸಂಖ್ಯೆ 1,62,324. ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ 86,545 ಮತ ಪಡೆದು ಗೆಲುವು ಕಂಡರೆ, ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೋ 70,470 ಮತ ಪಡೆದು ದ್ವಿತೀಯ ಸ್ಥಾನಕ್ಕೆ ಕುಸಿದರು.

ಗೆದ್ದ ರಾಜಕೀಯ ಪಕ್ಷಗಳು

ಮಂಗಳೂರು ದಕ್ಷಿಣ ಕ್ಷೇತ್ರ ಪ್ರತಿನಿಧಿಸಿದವರು: ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಸಮಬಲದಲ್ಲಿವೆ. ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿ ಎರಡು ಬಾರಿ ಕಾಂಗ್ರೆಸ್​ ಒಂದು ಬಾರಿ ಗೆದ್ದಿದೆ. 2008 ರಲ್ಲಿ ಎನ್ ಯೋಗೀಶ್ ಭಟ್ ಬಿಜೆಪಿಯಿಂದ ಗೆದ್ದಿದ್ದರೆ, 2013ರಲ್ಲಿ ಕಾಂಗ್ರೆಸ್​ನಿಂದ ಜೆಆರ್ ಲೋಬೋ ಗೆಲುವು ಕಂಡಿದ್ದರು. 2018ರಲ್ಲಿ ಬಿಜೆಪಿಯ ಡಿ ವೇದವ್ಯಾಸ ಕಾಮತ್ ಶಾಸಕರಾಗಿದ್ದಾರೆ.

ಜೆಆರ್ ಲೋಬೋ

1952 - ಎಲ್ ಸಿ ಪಾಯಸ್ - ಕಾಂಗ್ರೆಸ್
1957 - ವೈಕುಂಠ ಬಾಳಿಗಾ - ಕಾಂಗ್ರೆಸ್
1962 - ಎಂ ಶ್ರೀನಿವಾಸ ನಾಯಕ್ - ಕಾಂಗ್ರೆಸ್
1967 - ಎಂ ಶ್ರೀನಿವಾಸ ನಾಯಕ್ - ಕಾಂಗ್ರೆಸ್
1972 - ಎಡ್ಡಿ ಸಲ್ದಾನಾ - ಕಾಂಗ್ರೆಸ್
1978 - ಪಿ ಎಫ್ ರಾಡ್ರಿಗಸ್ - ಕಾಂಗ್ರೆಸ್ (ಐ)
1983 - ವಿ ಧನಂಜಯ ಕುಮಾರ್ - ಬಿಜೆಪಿ
1985 - ಬ್ಲೇಸಿಯಸ್ ಡಿಸೋಜ - ಕಾಂಗ್ರೆಸ್
1989 - ಬ್ಲೇಸಿಯಸ್ ಡಿಸೋಜ - ಕಾಂಗ್ರೆಸ್
1994 - ಎನ್ ಯೋಗೀಶ್ ಭಟ್ -ಬಿಜೆಪಿ
1999 - ಎನ್ ಯೋಗೀಶ್ ಭಟ್ - ಬಿಜೆಪಿ
2004 - ಎನ್ ಯೋಗೀಶ್ ಭಟ್ - ಬಿಜೆಪಿ
2008 - ಎನ್ ಯೋಗೀಶ್ ಭಟ್ - ಬಿಜೆಪಿ
2013 - ಜೆ ಆರ್ ಲೋಬೋ - ಕಾಂಗ್ರೆಸ್

ಇದನ್ನೂ ಓದಿ: 1985ರ ನಂತರ ಆಡಳಿತ ಪಕ್ಷಕ್ಕೆ ಸತತ ಎರಡನೇ ಬಾರಿ ದಕ್ಕದ ಕುರ್ಚಿ: ಹೊಸ ಇತಿಹಾಸ ಬರೆಯುತ್ತಾ ಬಿಜೆಪಿ ?

Last Updated : Apr 10, 2023, 2:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.