ETV Bharat / assembly-elections

ಬಿಜೆಪಿ ಗೆಲುವಿಗಾಗಿ ಕಾವೇರಿ ಮೊರೆಹೋದ ಕೆ.ಜಿ.ಬೋಪಯ್ಯ

author img

By

Published : Apr 13, 2023, 7:18 PM IST

ಬಿಜೆಪಿಯ ಗೆಲುವಿಗಾಗಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಶಾಸಕ ಕೆ.ಜಿ.ಬೋಪಯ್ಯ ಪ್ರಚಾರ ಆರಂಭಿಸಿದರು.

KG Bopaiah
ಕೆ.ಜಿ. ಬೋಪಯ್ಯ
ತಲಕಾವೇರಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿದರು.

ಕೊಡಗು: ಬಿಜೆಪಿ ಪಾಳಯದಲ್ಲಿ ಅಳೆದು ತೂಗಿ ಈಗಾಗಲೇ ಹಲವು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೆಲವು ಭಾಗಗಳಲ್ಲಿ ಪಕ್ಷದ ಹಿರಿಯ ಮುಖಂಡರು ಬಂಡಾಯ ಸ್ಪರ್ಧೆ ಮಾಡುವುದಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ನಡುವೆ ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಕೆ.ಜಿ.ಬೋಪಯ್ಯ ಪಕ್ಷ ಹಾಗೂ ತಮ್ಮ ಕ್ಷೇತ್ರದ ಗೆಲುವಿಗಾಗಿ ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ.

ಇದನ್ನೂ ಓದಿ: 'ಒಂದು ಕಡೆ ನಿಂತು ಗೆಲ್ಲುವುದೇ ಕಷ್ಟ, ನೀನೇಕೆ ಎರಡು ಕಡೆ ನಿಂತೆ?' ಸೋಮಣ್ಣಗೆ ಶ್ರೀನಿವಾಸ್ ಪ್ರಸಾದ್ ಪ್ರಶ್ನೆ!

ಕೊಡಗಿನ ಎರಡು ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸದಿಂದ ಹೈಕಮಾಂಡ್​ ಮಡಿಕೇರಿ ಕ್ಷೇತ್ರ ಹಾಗೂ ವಿರಾಜಪೇಟೆ ಕ್ಷೇತ್ರದ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೆ.ಜಿ.ಬೋಪಯ್ಯ ಮಾತೆ ಕಾವೇರಿಗೆ ಪ್ರಾರ್ಥಿಸಿದರು. ನಾಲ್ಕು ಬಾರಿ ಕೊಡಗಿನಿಂದ ಆಯ್ಕೆ ಆಗಿರುವ ಕೆ.ಜಿ.ಬೋಪಯ್ಯ ಈ ಬಾರಿಯೂ ಚುನಾವಣಾ ಕಣದಲ್ಲಿ ಇದ್ದು, ವಿರಾಜಪೇಟೆ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಗೋಕಾಕ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ರಮೇಶ ಜಾರಕಿಹೊಳಿ

ರಾಯಚೂರು, ವಿಜಯಪುರ, ಗದಗದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೆ.ಜಿ.ಬೋಪಯ್ಯ ಹೇಳಿದ್ದೇನು?: ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗಿನ ಸಂಪ್ರದಾಯದಂತೆ ಕುಲದೇವತೆ ಕಾವೇರಿ ‌ಪೂಜೆ ಮಾಡಿದ್ದೇವೆ. ಬಿಜೆಪಿ ಗೆಲುವು ಹಾಗೂ ನಾಡಿನ ಸುಭಿಕ್ಷೆಗಾಗಿ ಪೂಜೆ ನೆರವೇರಿಸಿ ಸೋಮವಾರ ವಿರಾಜಪೇಟೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಭಾವಿಸಿ: ಸಿದ್ದರಾಮಯ್ಯ

ಅರಸೀಕೆರೆಯಲ್ಲಿ ಎನ್.ಆರ್.ಸಂತೋಷ್​ಗೆ ಬಿಜೆಪಿ ಟಿಕೆಟ್​ ಮಿಸ್​: ಪತ್ನಿ, ಹಸುಗೂಸಿನೊಂದಿಗೆ ಮತಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.