ETV Bharat / assembly-elections

ಕಲಬುರಗಿ ಗ್ರಾಮೀಣದಲ್ಲಿ ಮತ್ತಿಮಡು ಕಟ್ಟಿ ಹಾಕಲು ಕಾಂಗ್ರೆಸ್​ ಯತ್ನ: ಕುತೂಹಲ ಕೆರಳಿಸಿದ ಕೈ ಟಿಕೆಟ್​ ಹಂಚಿಕೆ - ಕಲಬುರಗಿ ಗ್ರಾಮೀಣದಲ್ಲಿ ಮತ್ತಿಮಡು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯ 9 ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ತನ್ನ ವಶಕ್ಕೆ‌ ಪಡೆಯಲು ಕಾರ್ಯತಂತ್ರ ರೂಪಿಸಿದೆ. ಈ ಬಾರಿ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಮಣೆ ಹಾಕಲಾಗುತ್ತದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

karnataka-assembly-election-2023-details-of-kalaburgi-rural-constituency
ಕಲಬುರಗಿ ಗ್ರಾಮೀಣದಲ್ಲಿ ಮತ್ತಿಮಡು ಕಟ್ಟಿ ಹಾಕಲು ಕಾಂಗ್ರೆಸ್​ ಯತ್ನ: ಕುತೂಹಲ ಕೆರಳಿಸಿದ ಕೈ ಟಿಕೆಟ್​ ಹಂಚಿಕೆ
author img

By

Published : Apr 14, 2023, 2:06 PM IST

ಕಲಬುರಗಿ: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಹರಡಿರುವ ವಿಶೇಷ ಕ್ಷೇತ್ರ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ. ಕಮಲಾಪುರ ಮತ್ತು ಶಹಾಬಾದ್ ಮೀಸಲು ಕ್ಷೇತ್ರದಲ್ಲಿ ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನು ಸೇರಿಸಿ 2008ರಲ್ಲಿ ಪರಿಶಿಷ್ಟ ಮೀಸಲು ಕ್ಷೇತ್ರ ಎಂದು ನಾಮಕರಣ ಮಾಡಲಾಗಿತ್ತು. ಸದ್ಯ ಕಮಲಾಪುರ, ಶಹಾಬಾದ್, ಆಳಂದ ಹಾಗೂ ಕಲಬುರಗಿ ತಾಲೂಕಿನ ಹಲವು ಗ್ರಾಮಗಳು ಕ್ಷೇತ್ರಕ್ಕೆ ಒಳಪಡುತ್ತವೆ. ಬಿಜೆಪಿ ಹಾಲಿ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮತ್ತೊಮ್ಮೆ ಮಣೆ ಹಾಕಿದ್ದರೆ, ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿದೆ.

ಬಸವರಾಜ ಮತ್ತಿಮಡು
ಬಸವರಾಜ ಮತ್ತಿಮಡು

ಗ್ರಾಮೀಣ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ ಆಗಿತ್ತು. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿ ವಶವಾಗಿದೆ. ಬಸವರಾಜ ಮತ್ತಿಮಡು 12,386 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿಜಯಕುಮಾರ್ ರಾಮಕೃಷ್ಣ ಎರಡನೇ ಸ್ಥಾನ ಪಡೆದಿದ್ದರೆ, ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರೇವುನಾಯಕ ಬೆಳಮಗಿ ಮತ ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇದೀಗ ಮತ್ತೊಮ್ಮೆ‌‌ ಮತ್ತಿಮಡು ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರು ಇನ್ನೂ ಘೋಷಣೆ ಆಗಿಲ್ಲ. ಕಳೆದ ಬಾರಿ ಪರಾಭವಗೊಂಡ ವಿಜಯಕುಮಾರ ಅವರಿಗೆ ಟಿಕೆಟ್ ಕೊಡಬಹುದು ಎಂಬ ಲೆಕ್ಕಾಚಾರ ಕೆಲವರದಿತ್ತು. ಆದರೆ, ಈ ಬಾರಿ‌ ಜೆಡಿಎಸ್ ತೊರೆದು ಪಕ್ಷಕ್ಕೆ ಸೇರಿದ ಮಾಜಿ‌ ಸಚಿವ ರೇವು ನಾಯ‌ಕ ಬೆಳಮಗಿ ಕೂಡ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಟಿಕೆಟ್​ಗಾಗಿ ಸ್ಪರ್ಧೆ ಉಂಟಾಗಿದೆ.

ಬೆಳಮಗಿಗೆ ಒಲಿಯುತ್ತಾ ಕೈ ಟಿಕೆಟ್​?: ಈ ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯ 9 ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ತನ್ನ ವಶಕ್ಕೆ‌ ಪಡೆಯಲು ಕೈಪಡೆ ಎಲ್ಲ ರೀತಿಯ ಕಾರ್ಯತಂತ್ರ ಉಪಯೋಗಿಸುತ್ತಿದೆ.‌ ಯಡಿಯೂರಪ್ಪ‌ ಸರ್ಕಾರದಲ್ಲಿ ಪಶುಸಂಗೋಪನಾ‌ ಸಚಿವರಾಗಿ, ಬದಲಾದ ರಾಜಕೀಯದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರೇವುನಾಯಕ ಬೆಳಮಗಿ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಲು ಪ್ಲಾನ್‌‌‌ ಮಾಡಿದೆ. ಮತ್ತೊಬ್ಬ ಪ್ರಬಲ ಆಕಾಂಕ್ಷಿ ವಿಜಯಕುಮಾರ್ ಅವರಿಗೆ ಪಕ್ಷದ ಮಹತ್ವದ ಜವಾಬ್ದಾರಿ ವಹಿಸಲಿದೆ ಎನ್ನಲಾಗುತ್ತಿದೆ. ಆದರೂ, ಇದುವರಗೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಅನ್ನೋದು ಅಧಿಕೃತವಾಗಿಲ್ಲ.

ಮತ್ತಿಮಡು ಗೆಲುವು ಸರಳವಲ್ಲ?: ಬಿಜೆಪಿಯ ಬಸವರಾಜ‌ ಮತ್ತಿಮಡು ಎರಡನೇ‌ ಬಾರಿ ಗೆಲ್ಲುವ ತವಕದಲ್ಲಿದ್ದಾರೆ. ಚಿತ್ತಾಪುರ ತಾಲೂಕಿನವರಾದ ಮತ್ತಿಮಡು ಅವರಿಗೆ ಕಳೆದ ಬಾರಿ ಟಿಕೆಟ್ ಸಿಗಲು‌‌ ಮತ್ತು ಗೆಲವು ಸಾಧಿಸಲು ಶತಪ್ರಯತ್ನ ಮಾಡಿದ‌ ಕೆಲವರು ಇದೀಗ ಅವರ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗೆ ಲಿಂಗಾಯತ ಸಮುದಾಯದ ಮುಖಂಡ ರವಿ ಬಿರಾದಾರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದಕ್ಕೆ ಕಾರಣ ಮತ್ತಿಮಡು ಅನ್ನೋದು ಬಿರಾದಾರ ಬೆಂಬಲಿಗರು ಆಕ್ರೋಶ. ಹೀಗಾಗಿ ಮತ್ತಿಮಡುಗೆ ಟಿಕೆಟ್ ಕೊಡದಂತೆ ಕ್ಷೇತ್ರದ ಕೆಲ ಬಿಜೆಪಿ ಕಾರ್ಯಕರ್ತರ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲರದ ಮಧ್ಯೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಮತ್ತಿಮಡು ಯಶಸ್ಸು ಆಗಿದ್ದಾರೆ. ಆದರೆ, ಇವರ ಗೆಲವು ಈ ಬಾರಿ ಅಂದು ಕೊಂಡಷ್ಟು ಸರಳವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯಕುಮಾರ್ ರಾಮಕೃಷ್ಣ
ವಿಜಯಕುಮಾರ್ ರಾಮಕೃಷ್ಣ

ಸಿಪಿಎಂ 'ಮಾಮಾ' ಇಲ್ಲದ‌ ಚುನಾವಣೆ: ಮತ್ತೊಂದೆಡೆ, ಜೆಡಿಎಸ್​ ಕೂಡ ತನ್ನ ಅಭ್ಯರ್ಥಿಯನ್ನು ಘೋಷಣೆ ಆಗಿಲ್ಲ, ಆಮ್ ಆದ್ಮಿ ಪಾರ್ಟಿ ರಾಘವೇಂದ್ರ ಚಿಂಚನಸೂರ, ಬಿಎಸ್​ಪಿ, ಎಡ‍‍ಪಕ್ಷಗಳಾದ ಸಿಪಿಐ, ಸಿಪಿಐಂ, ಎಸ್‌ಯುಸಿಐ ಕಮ್ಯುನಿಸ್ಟ್ ಸೇರಿದಂತೆ ಇತರ ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿವೆ. ಈ ಬಾರಿ ಹೋರಾಟಗಾರ ಮಾರುತಿ ಮಾನ್ಪಡೆ ಈ ಬಾರಿ ಕಣದಲ್ಲಿ ಇಲ್ಲದಿರುವದು ಎದ್ದು ಕಾಣುತ್ತಿದೆ. ಕೋವಿಡ್ ಮಹಾಮಾರಿಗೆ ಮಾನ್ಪಡೆ ತುತ್ತಾಗಿದ್ದರು. ಹೋರಾಟಗಳ ಹಿನ್ನೆಲೆಯಲ್ಲಿ 10 ಸಾವಿರ ಮತಗಳಿಗೆ ಕೊರತೆ ಇಲ್ಲದಂತೆ ಕ್ಷೇತ್ರದಲ್ಲಿ ತಮ್ಮ ಹಿಡಿತ ಹೊಂದಿದ್ದ ಮಾನ್ಪಡೆ 6 ಬಾರಿ ಅದೃಷ್ಟ ಪರೀಕ್ಷೆಗೆ ಇಳಿದು ಪರಾಭವಗೊಂಡಿದ್ದರು.

ರೇವುನಾಯಕ ಬೆಳಮಗಿ
ರೇವುನಾಯಕ ಬೆಳಮಗಿ

ಕ್ಷೇತ್ರದ ಹಿನ್ನೋಟ: ಕಮಲಾಪುರ‌ ಕ್ಷೇತ್ರ ಇದ್ದಾಗ ನಾಲ್ಕು‌ ಬಾರಿ ಗೆದ್ದಿದ್ದ ರೇವೂನಾಯಕ ಬೆಳಮಗಿ ಗ್ರಾಮೀಣ ಕ್ಷೇತ್ರ ರಚನೆಯಾದ ಸ್ಪರ್ಧೆ ಮಾಡಿದ್ದರು. 2008ರಲ್ಲಿ ಗ್ರಾಮೀಣ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿಯಿಂದ ರೇವುನಾಯಕ ಬೆಳಮಗಿ ಜಯ ದಾಖಲಿಸಿದ್ದರು. 2013ರಲ್ಲಿ ಕಾಂಗ್ರೆಸ್‌ನ ಜಿ. ರಾಮಕೃಷ್ಣ ಗೆದ್ದಿದ್ದರು. 2018ರಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು ಆಯ್ಕೆ‌ ಆಗಿದ್ದರು.

ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಹಿತಿ

ಕ್ಷೇತ್ರದಲ್ಲಿ 1,30,508 ಪುರುಷರು ಮತ್ತು 1,23,347 ಮಹಿಳೆಯರು ಸೇರಿ ಒಟ್ಟು 2,53,855 ಮತದಾರರು ಇದ್ದಾರೆ. ಈ ಪೈಕಿ ಲಿಂಗಾಯತ ಮತ್ತು ಬಂಜಾರ ಸಮುದಾಯ, ಪರಿಶಿಷ್ಟ ಬಲಗೈ ಪಂಗಡದ ಮತಗಳು ನಿರ್ಣಾಯಕವಾಗಿದೆ. ಮುಸ್ಲಿಮರು, ಕುರುಬರು, ಕೋಲಿ ಸಮಾಜದ ಮತಗಳು ಸಹ ಫಲಿತಾಂಶವನ್ನು ನಿರ್ಧರಿಸುತ್ತವೆ.

ಇದನ್ನೂ ಓದಿ: ಕಾಂಗ್ರೆಸ್​ನ ಸೋಲಿಲ್ಲದ ಸರದಾರನಿಗೆ ಸೋಲಿನ ರುಚಿ ತೋರಿಸಲು ಜೆಡಿಎಸ್ - ಬಿಜೆಪಿ ತಂತ್ರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.