ETV Bharat / assembly-elections

ಸಿದ್ದರಾಮಯ್ಯ ಎರಡು ಕಡೆ ಸ್ಫರ್ಧೆ: ಕೇಂದ್ರ​ ಚುನಾವಣಾ ಕಮಿಟಿ ಸಭೆಯಲ್ಲಿ ನಾಳೆ ನಿರ್ಧಾರ : ಜಿ ಪರಮೇಶ್ವರ್​​ - ಈಟಿವಿ ಭಾರತ ಕನ್ನಡ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾಳೆ ನಡೆಯುವ ಸೆಂಟ್ರಲ್​ ಎಲೆಕ್ಷನ್​ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್​​ ಹೇಳಿದ್ದಾರೆ.

former-dcm-f-parameshwar-statement-about-siddaramaiahs-contest
ಸಿದ್ದರಾಮಯ್ಯ ಎರಡು ಕಡೆ ಸ್ಫರ್ಧೆ : ಸೆಂಟ್ರಲ್​ ಎಲೆಕ್ಷನ್​ ಕಮಿಟಿ ಸಭೆಯಲ್ಲಿ ನಾಳೆ ನಿರ್ಧಾರ : ಜಿ ಪರಮೇಶ್ವರ್​​
author img

By

Published : Apr 3, 2023, 5:58 PM IST

ಸಿದ್ದರಾಮಯ್ಯ ಎರಡು ಕಡೆ ಸ್ಫರ್ಧೆ : ಸೆಂಟ್ರಲ್​ ಎಲೆಕ್ಷನ್​ ಕಮಿಟಿ ಸಭೆಯಲ್ಲಿ ನಾಳೆ ನಿರ್ಧಾರ : ಜಿ ಪರಮೇಶ್ವರ್​​

ತುಮಕೂರು : ಸಿದ್ದರಾಮಯ್ಯ ಅವರು ಎರಡೂ ಕಡೆಯಲ್ಲೂ ಸ್ಪರ್ಧೆ ಮಾಡಲು ತಯಾರಿರುವುದಾಗಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಹೈಕಮಾಂಡ್​​ ತೀರ್ಮಾನ ಕೈಗೊಳ್ಳುತ್ತದೆ. ನಾಳೆ ನಮ್ಮಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಇದೆ. ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲು ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಕೋಲಾರದ ಕಾಂಗ್ರೆಸ್​ ಮುಖಂಡರು ಆಗಮಿಸಿ ಬಾದಾಮಿ ತುಂಬಾ ದೂರ ಆಗುತ್ತದೆ. ಕೋಲಾರದಲ್ಲೇ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿದ್ದರು. ಈ ಬಳಿಕ ಕೋಲಾರದಲ್ಲೇ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದರು. ಬಳಿಕ ತಮ್ಮ ತೀರ್ಮಾನ ಬದಲಿಸಿ ವರುಣಾದಲ್ಲಿ ಸ್ಫರ್ಧೆ ಮಾಡುವುದಾಗಿ ಹೇಳಿದರು. ಈಗ ಕೋಲಾರದ ಕಾಂಗ್ರೆಸ್​ ಮುಖಂಡರು ಸಿದ್ದರಾಮಯ್ಯ ಅವರನ್ನು ಎರಡೂ ಕಡೆ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಪರಮೇಶ್ವರ್​ ಹೇಳಿದ್ದಾರೆ.

’’ ನಾಳೆ ಸೆಂಟ್ರಲ್​​ ಎಲೆಕ್ಷನ್​ ಕಮಿಟಿ ಸಭೆ ಇದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಫರ್ಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸೆಂಟ್ರಲ್​ ಎಲೆಕ್ಷನ್​ ಕಮಿಟಿ ಅಭ್ಯರ್ಥಿಗಳಿಗೆ ಟಿಕೆಟ್​ ಕೊಡುವ ಬಗ್ಗೆ ನಿರ್ಧಾರ ಮಾಡುತ್ತದೆ. ಸೆಂಟ್ರಲ್​ ಕಮಿಟಿ ಮತ್ತು ಹೈಕಮಾಂಡ್​ ಒಪ್ಪಿಗೆ ಸೂಚಿಸಿದರೆ ಸಿದ್ದರಾಮಯ್ಯ ಅವರು ಎರಡೂ ಕ್ಷೇತ್ರಗಳಲ್ಲಿ ಸ್ಫರ್ಧೆ ಮಾಡಲಿದ್ದಾರೆ’’ ಎಂದು ಅವರು ತಿಳಿಸಿದರು.

ಇನ್ನು, ಎರಡು ಕಡೆ ಸ್ಪರ್ಧೆ ಮಾಡಬೇಕಾದ ಪರಿಸ್ಥಿತಿ ನನಗಾಗಲಿ , ಡಿಕೆ ಶಿವಕುಮಾರ್​ ಅವರಿಗಾಗಲಿ ಬಂದಿಲ್ಲ. ಹಾಗಾಗಿ ನಾವು ಎರಡೂ ಕಡೆ ಟಿಕೆಟ್ ಕೊಡಿ ಎಂದು ಕೇಳಿಕೊಂಡಿಲ್ಲ. ಅವರು ಮುಖ್ಯಮಂತ್ರಿ ಆಗಿ ಕೆಲಸ ಮಾಡಿರುವವರು, ಸಿದ್ದರಾಮಯ್ಯ ಅವರಲ್ಲಿ ಜನರು ಬಂದು ನಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಕೂಡಾ ಕೋಲಾರದ ಜನರಿಗೆ ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ ಎರಡು ಕಡೆ ಸ್ಪರ್ಧೆ ಮಾಡುವ ಸನ್ನಿವೇಶ ಎದುರಾಗಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಅವರಿಗೂ ಕೂಡಾ ಎರಡು ಕಡೆ ಸ್ಪರ್ಧೆ ಮಾಡುವ ಅಗತ್ಯತೆ ಇರಲಿಲ್ಲ. ಅವರು ವರುಣಾದಲ್ಲಿ ನಿಂತರೂ ಗೆಲ್ಲುತ್ತಾರೆ. ಎಲ್ಲೇ ನಿಂತರೂ ಗೆಲ್ಲುತ್ತಾರೆ ಎಂದು ಪರಮೇಶ್ವರ್​ ಸಮರ್ಥನೆ ಮಾಡಿಕೊಂಡರು.

ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ ಇಲ್ಲ. ಜನರ ಅಪೇಕ್ಷೆ ಮೇರೆಗೆ ನಿಲ್ಲುತ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಸುತ್ತುಮುತ್ತಲಿನ ಕ್ಷೇತ್ರಗಳಿಗೂ ಅನುಕೂಲ ಆಗುತ್ತದೆ ಎಂದು ಇದೇ ವೇಳೆ ಕೆಪಿಸಿಸಿ ಮಾಜಿ ಅಧ್ಯಕ್ಷರು ಹೇಳಿದರು. ಸಿಎಂ‌ ರೇಸ್ ನಲ್ಲಿರುವರಿಗೆ ಸ್ವಪಕ್ಷಿಯರೇ ಅಡ್ಡಗಾಲು ಹಾಕುತ್ತಿರುವ ಬಗ್ಗೆ ನನಗೆಲ್ಲೂ ಕಾಣುತ್ತಿಲ್ಲ. ಮೆಜಾರಿಟಿ ಬಂದ ಮೇಲೆ ಇದೆಲ್ಲಾ ತೀರ್ಮಾನ ಆಗುತ್ತದೆ. ಮೊದಲ ಹಂತದಲ್ಲಿ ನಾವು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಮಿಕ್ಕಿದ್ದೆಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಇದನ್ನೂ ಓದಿ : ಬೆಳಗಾವಿ ಬಿಜೆಪಿ ಭಿನ್ನಮತ ಶಮನಕ್ಕೆ ಪ್ರಹ್ಲಾದ ಜೋಶಿ ಮುಲಾಮು! ಸದ್ಯದಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.