ETV Bharat / assembly-elections

ಕಲಬುರಗಿ‌ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್​ - ಬಿಜೆಪಿ ನೇರ ಹಣಾಹಣಿ: ಪ್ರಾಬಲ್ಯಕ್ಕಾಗಿ ಇತರ ಪಕ್ಷಗಳಿಂದಲೂ ಪ್ರತಿತಂತ್ರ - Kalaburgi North Assembly Constituency

ಕಾಂಗ್ರೆಸ್​ ಭದ್ರಕೋಟೆ ಎಂದು ಕರೆಸಿಕೊಳ್ಳುವ ಕಲಬುರಗಿ‌ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ‌ ಸೇರಿ‌ ಇತರ ಪಕ್ಷಗಳು ಪ್ರಾಬಲ್ಯಕ್ಕಾಗಿ ಪ್ರತಿತಂತ್ರ ರೂಪಿಸಿವೆ. ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನೇರ ಹಣಾಹಣಿ ಇದೆ. ಇದರ ನಡುವೆ ಆಮ್‌ ಆದ್ಮಿ ಪಕ್ಷ, ಎಸ್‌ಡಿಪಿಐ, ಕೆಆರ್​ಎಸ್​, ಎಐಎಂಐಎಂ ಹಾಗೂ ಎಡಪಕ್ಷಗಳು ಯಾವ ರೀತಿ ಮತದಾರರ ಗಮನ ಸೆಳೆಯುತ್ತವೆ ಅನ್ನೋದನ್ನು ಕಾದು ನೋಡಬೇಕು ಎನ್ನುತ್ತಿದ್ದಾರೆ ಈ ಕ್ಷೇತ್ರದ ರಾಜಕೀಯ ವಿಶ್ಲೇಷಕರು.

Details of Kalaburgi North Assembly Constituency

author img

By

Published : Apr 15, 2023, 1:17 PM IST

Updated : Apr 15, 2023, 1:37 PM IST

ಕಲಬುರಗಿ: ಕಲಬುರಗಿ‌ ಉತ್ತರ ಮತಕ್ಷೇತ್ರವು ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳು ಹೊಂದಿರುವ ಕ್ಷೇತ್ರ. ಇಲ್ಲಿ ಬಹುತೇಕ ಮುಸ್ಲಿಂ ಮತಗಳು ನಿರ್ಣಾಯಕ. 2008ರ ಕ್ಷೇತ್ರ ವಿಂಗಡಣೆ ಬಳಿಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದಿ. ಖಮರುಲ್‌ ಇಸ್ಲಾಂ ಕುಟುಂಬ ಹಿಡಿತ ಸಾಧಿಸುತ್ತಾ ಬಂದಿದೆ.‌ ಈ ಬಾರಿಯೂ‌ ಪಾರುಪತ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.‌ ಆದರೆ, ಬಿಜೆಪಿ‌ ಸೇರಿ‌ ಇತರೆ ಪಕ್ಷಗಳು ಪ್ರಾಬಲ್ಯಕ್ಕಾಗಿ ಪ್ರತಿತಂತ್ರ ರೂಪಿಸಿವೆ. ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಕಾದು ನೋಡಬೇಕಿದೆ.

Details of Kalaburgi North Assembly Constituency
ಕನೀಜ್ ಫಾತಿಮಾ

ಕಲಬುರಗಿ ವಿಧಾನಸಭಾ ಕ್ಷೇತ್ರವನ್ನು ದಶಕಗಳವರೆಗೆ ಪ್ರತಿನಿಧಿಸಿದ್ದ ಖಮರುಲ್ ಇಸ್ಲಾಂ, ಎಸ್‌.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಒಟ್ಟು ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಖಮರುಲ್ ಇಸ್ಲಾಂ ಅವರು, ವಸತಿ, ಕಾರ್ಮಿಕ, ಸಣ್ಣಕೈಗಾರಿಕೆ ಮತ್ತು ಅಲ್ಪಸಂಖ್ಯಾತ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2008ರಲ್ಲಿ ಕಲಬುರಗಿ ವಿಧಾನಸಭಾ ಕ್ಷೇತ್ರ ಒಡೆದು ಉತ್ತರ - ದಕ್ಷಿಣ ಕ್ಷೇತ್ರವಾಗಿ ವಿಂಗಡನೆ‌ ಮಾಡಲಾಯಿತು. ಉತ್ತರ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ಈ ಕ್ಷೇತ್ರದಲ್ಲಿ 2008 ಹಾಗೂ 2013ರಲ್ಲಿ ಖಮರುಲ್‌ ಇಸ್ಲಾಂ ಶಾಸಕರಾದರು.‌ 2017ರಲ್ಲಿ ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಸ್ಥಾನ ಪತ್ನಿ‌ ಕನೀಜ್ ಫಾತಿಮಾ ರಾಜಕೀಯಕ್ಕೆ ದುಮುಕಿದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ‌ ಕಣಕ್ಕಿಳಿದು‌ ಜಯ‌ ಸಾಧಿಸಿ ಹಾಲಿ‌ ಶಾಸಕರಾಗಿದ್ದಾರೆ.

ಚಂದ್ರಕಾಂತ್​ ಪಾಟೀಲ್

ಇದೀಗ ಎರಡನೇ ಬಾರಿಗೆ ಕನೀಜ್ ಫಾತಿಮಾ ಅವರನ್ನು‌ ಕೈ ನಾಯಕರು ಕಣಕ್ಕೆ‌ ಇಳಿಸಿದ್ದಾರೆ. ಇನ್ನು ಕಳೆದ ಬಾರಿ ಗೆಲುವಿನ‌ ಹತ್ತಿರಕ್ಕೆ‌ ಬಂದು ಸೋಲು‌ ಒಪ್ಪಿಕೊಂಡ ಬಿಜೆಪಿಯ ಅಭ್ಯರ್ಥಿ ಚಂದು‌ ಪಾಟೀಲ್ ಚುನಾವಣೆ ಬಳಿಕ ಐದು ವರ್ಷ ಬಿಡುವಿಲ್ಲದೇ ಕ್ಷೇತ್ರದಲ್ಲಿ ಸಂಚಾರ ನಡೆಸಿ ಮತದಾರರ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್​ಗೆ ಬಂಡಾಯದ ಬಿಸಿ ತಟ್ಟುವ ಲಕ್ಷಣಗಳು ಕಂಡು ಬರುತ್ತಿದೆ. ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಆಗಿದ್ದ‌ ಪಕ್ಷದ ಮುಖಂಡ, ಪ್ರಥಮ ದರ್ಜೆ ಗುತ್ತಿಗೆದಾರ ಶಿವಕಾಂತ ಮಹಾಜನ್ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆಂಬ ಮಾತುಗಳು‌ ಕೇಳಿ ಬರುತ್ತಿವೆ. ಒಂದೊಮ್ಮೆ ಇವರು ಕಣಕ್ಕೆ ಇಳಿದರೆ ಹಿಂದೂ‌ ಮತ ಬುಟ್ಟಿಗೆ ಕೈ ಹಾಕಲಿದ್ದಾರೆ. ಸಹಜವಾಗಿಯೇ ಚಂದು ಪಾಟೀಲ್​ಗೆ ಕೊಂಚ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ರಾಜಕೀಯ ಚಿಂತಕರು.

ಶಿವಕಾಂತ ಮಹಾಜನ್

ಜೆಡಿಎಸ್‌ನಿಂದ ಈ ಬಾರಿಯೂ ನಾಸಿರ್ ಹುಸೇನ್ ಉಸ್ತಾದ್ ಕಣಕ್ಕಿಳಿದಿದ್ದಾರೆ. ಮುಸ್ಲಿಂ ಸಮಯದಾಯದ ಪ್ರಭಾವಿ ನಾಯಕರಾದ ನಾಸಿರ್ ಹುಸೇನ್ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ನೆಲೆ ಅಷ್ಟಾಗಿ ಇಲ್ಲದಿದ್ದರೂ ನಾಸಿರ್ ತಮ್ಮ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟು ಚುನಾವಣೆ ಎದುರಿಸುತ್ತಿದ್ದಾರೆ. 2018ರ ಚುನಾವಣೆಯಲ್ಲಿ ನಾಸಿರ್ ಹುಸೇನ್ ಮತ ಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಅದೆ ರೀತಿ, ಆಮ್‌ ಆದ್ಮಿ ಪಕ್ಷದಿಂದ ಮಾಜಿ ಉಪ‌ ಮಹಾಪೌರ ಸೈಯದ್‌‌ ಸಜ್ಜಾದ ಅಲಿ‌ ಇನಾಮದಾರ್ ಕಣಕ್ಕೆ‌ ಇಳಿದಿದ್ದಾರೆ. ಎಸ್‌ಡಿಪಿಐ, ಕೆ.ಆರ್.ಎಸ್ ಪಕ್ಷ ಕೂಡಾ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು‌ ಕಣಕ್ಕೆ‌ ಇಳಿಸಿದೆ. ಎಐಎಂಐಎಂ ಹಾಗೂ ಎಡಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ಈ ಎಲ್ಲಾ ಪಕ್ಷದ ಅಭ್ಯರ್ಥಿಗಳು‌ ಕಾಂಗ್ರೆಸ್ ಮತಗಳ ಬುಟ್ಟಿಗೆ ಕೈ ಹಾಕಿದಂತಾಗಲಿದೆ ಅನ್ನೋದು‌‌ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಕಲಬುರಗಿ‌ ಉತ್ತರ ಮತಕ್ಷೇತ್ರದ ವಿವರ

ಮತಗಳ ಲೆಕ್ಕಾಚಾರ: ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಒಟ್ಟು 3,00,493 ಮತದಾರರು ಇದ್ದಾರೆ.‌ ಇದರಲ್ಲಿ‌ 1,49,840 ಪುರುಷರು ಮತ್ತು 1,50,653 ಮಹಿಳೆಯರಿದ್ದಾರೆ.‌ ಇಡಿ ಕ್ಷೇತ್ರ ಮಹಾನಗರ ವ್ಯಾಪ್ತಿಯಲ್ಲಿದೆ. ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ್‌ ನಂ.1ರಿಂದ 30 ವಾರ್ಡ್‌ಗಳು ಈ ಕ್ಷೇತ್ರದಡಿ ಬರುತ್ತವೆ.

ಸ್ಥಾನವಾರು ವಿಧಾನಸಭೆ ಚುನಾವಣೆ

ಮೂರು ಚುನಾವಣೆಗಳ ಬಲಾಬಲ: 2018 ಚುನಾವಣೆಯಲ್ಲಿ‌ ಕೈ‌‌ ಪಕ್ಷದ ಅಭ್ಯರ್ಥಿ ಕನೀಜ್ ಫಾತಿಮಾ 64,311 ಹಾಗೂ ಕಮಲ‌ ಪಕ್ಷದ ಚಂದು ಪಾಟೀಲ್ 58,371 ಮತ ಪಡೆದಿದ್ದರು. 5,940 ಮತಗಳ ಅಂತರದಿಂದ ಗೆದ್ದು ಕನೀಜ್ ಫಾತಿಮಾ ಶಾಸಕರಾಗಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಖಮರುಲ್ ಇಸ್ಲಾಂ 50,498 ಮತ ಪಡೆದು ಗೆಲುವು ಕಂಡಿದ್ದರು. ಇವರ ಪ್ರತಿಸ್ಪರ್ಧಿ ಕೆಜೆಪಿಯ ನಾಸಿರ್ ಹುಸೇನ್ ಉಸ್ತಾದ್ 30,377 ಮತ ಪಡೆದು ಸೋಲುಂಡಿದ್ದರು. 20,121 ಮತಗಳ ಅಂತರದಿಂದ ಗೆದ್ದ ಖಮರುಲ್ ಇಸ್ಲಾಂ ಸಚಿವರೂ ಆಗಿದ್ದರು. 2008ರ ಚುನಾವಣೆಯಲ್ಲಿಯೂ ಕಾಂಗ್ರೆಸ್​ ಅಭ್ಯರ್ಥಿ ಖಮರುಲ್ ಇಸ್ಲಾಂ ಬಿಜೆಪಿ ಅಭ್ಯರ್ಥಿ ಬಿಜಿ ಪಾಟೀಲ್​ ವಿರುದ್ಧ ಗೆಲುವು ಕಂಡಿದ್ದರು. ಖಮರುಲ್ ಇಸ್ಲಾಂ 54,123 ಮತ ಪಡೆದರೆ, ಬಿಜಿ ಪಾಟೀಲ್ 39,168 ಮತ ಪಡೆದಿದ್ದರು. 14,955 ಗೆಲುವಿನ ಅಂತರವಾಗಿತ್ತು.

ಪುರುಷ ಮತ್ತು ಸ್ತ್ರೀ ಮತಗಳ ಮಾಹಿತಿ

ಕ್ಷೇತ್ರದ ಹಿನ್ನೋಟ: ಕಲ್ಯಾಣ-ಕರ್ನಾಟಕಕ್ಕೆ ಒಳಪಡುವ ಈ ಕ್ಷೇತ್ರ, ಗುಲ್ಬರ್ಗ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇಂದಿನ‌ ಕಲಬುರಗಿ‌ ಅಂದು ಗುಲಬರ್ಗಾ ಹೆಸರಿನಿಂದ‌ ಗುರುತಿಸಲ್ಪಡುತಿತ್ತು.‌ 2018ರ ವಿಧಾನಸಭಾ ಚುನಾವಣೆಯಲ್ಲಿ 2.74 ಲಕ್ಷ ಮತದಾರರಿದ್ದರು. ಅದರಲ್ಲಿ 1.39 ಲಕ್ಷ ಪುರುಷರು ಮತ್ತು 1.35 ಲಕ್ಷ ಮಹಿಳಾ ಮತದಾರರಿದ್ದರು. ಈ ಚುನಾವಣೆಯಲ್ಲಿ 54.27% ಮತದಾನವಾಗಿದೆ. ಮೂವರು ಮಹಿಳೆಯರೊಂದಿಗೆ 15 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ 13 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಇದೇ ಚುನಾವಣೆಯಲ್ಲಿ 54.27 % ಮತಗಳು ಚಲಾವಣೆಯಾಗಿದ್ದರೆ 1116 ನೋಟಾ ಮತಗಳು ಚಲಾವಣೆಯಾಗಿವೆ.

ಅಭ್ಯರ್ಥಿಗಳ ಗೆಲುವಿನ ಅಂತರ

ಕ್ಷೇತ್ರದ ಶಾಸಕರು: 1951ರಿಂದ ಈವರೆಗಿನ ಚುನಾವಣೆಯನ್ನು ಗಮನಿಸಿದರೆ ಹೆಚ್ಚಾಗಿ ಕಾಂಗ್ರೆಸ್​ ಪಕ್ಷವೇ ಆಳ್ವಿಕೆ ನಡೆಸಿದೆ. 2008ರ ಕ್ಷೇತ್ರ ವಿಂಗಡಣೆ ಬಳಿಕವೂ ಸಹ ಕಾಂಗ್ರೆಸ್​ ಪಕ್ಷವೇ ಪಾರುಪತ್ಯ ಮೆರೆದಿದ್ದು ಗಮನಾರ್ಹ. ಮೈಸೂರ್ ರಾಜ್ಯ ಉದಯಕ್ಕೂ ಮುನ್ನ 1951ರಲ್ಲಿ ಮಹ್ಮದ್ ಅಲಿ ಮೇಹತಾಬ್ ಎನ್ನುವವರು ಕಾಂಗ್ರೆಸ್​​ ಪಕ್ಷದಿಂದ ಆರಿಸಿದ್ದರು. ಮೈಸೂರ್ ರಾಜ್ಯವಾಗಿದ್ದಾಗ, ಬಳಿಕ ಗುಲಬರ್ಗಾ, ಆ ಬಳಿಕ 2008ರ ಕ್ಷೇತ್ರ ವಿಂಗಡಣೆ ಬಳಿಕ ಯಾವ ಪಕ್ಷದ ಅಭ್ಯರ್ಥಿಗಳು ಗೆಲುವು ಕಂಡರು ಎಂಬ ಪಟ್ಟಿ ಇಲ್ಲಿದೆ.

ಸೈಯದ್‌‌ ಸಜ್ಜಾದ ಅಲಿ‌ ಇನಾಮದಾರ್

ಗುಲಬರ್ಗಾ (ಮೈಸೂರ್ ರಾಜ್ಯ)
1957 : ಮಹ್ಮದ್ ಅಲಿ ಮೇಹತಾಬ್ - ಕಾಂಗ್ರೆಸ್
1962 : ಗಂಗಾಧರ ನಮೋಶಿ - ಸಿಪಿಐ ಕಮ್ಯೂನಿಸ್ಟ್​ ಪಕ್ಷ
1967 : ಮಹ್ಮದ್ ಅಲಿ ಮೇಹತಾಬ್ - ಕಾಂಗ್ರೆಸ್
1972 : ಮಹ್ಮದ್ ಅಲಿ ಮೇಹತಾಬ್ - ಕಾಂಗ್ರೆಸ್

ಗುಲಬರ್ಗಾ (ಕರ್ನಾಟಕ‌ ರಾಜ್ಯ)
1978 : ಖಮರುಲ್ ಇಸ್ಲಾಂ - ಸ್ವತಂತ್ರ ಅಭ್ಯರ್ಥಿ
1983 : ಎಸ್.ಕೆ.ಕಾಂತಾ - ಜನತಾ ಪಾರ್ಟಿ
1985 : ಎಸ್.ಕೆ.ಕಾಂತಾ - ಜನತಾ ಪಾರ್ಟಿ
1989 : ಖಮರುಲ್ ಇಸ್ಲಾಂ - ಮುಸ್ಲಿಂ ಲೀಗ್
1994 : ಖಮರುಲ್ ಇಸ್ಲಾಂ - ಕಾಂಗ್ರೆಸ್
1996 (ಉ.ಚು): ಕೈಸರ್ ಮಹಿಮೂದ್ ಮಣಿಯಾರ್ - ಜನತಾದಳ
1999 : ಖಮರುಲ್ ಇಸ್ಲಾಂ - ಕಾಂಗ್ರೆಸ್
2004 : ಚಂದ್ರಶೇಖರ ಪಾಟೀಲ್ ರೇವೂರ- ಬಿಜೆಪಿ

2008 ರಲ್ಲಿ ಕ್ಷೇತ್ರವಾಗಿ ವಿಂಗಡಣೆ
2008: ಖಮರುಲ್ ಇಸ್ಲಾಂ - ಕಾಂಗ್ರೆಸ್
2013: ಖಮರುಲ್ ಇಸ್ಲಾಂ - ಕಾಂಗ್ರೆಸ್
2018: ಕನೀಜ್ ಫಾತಿಮಾ - ಕಾಂಗ್ರೆಸ್

ಇದನ್ನೂ ಓದಿ: ಕಲಬುರಗಿ ಗ್ರಾಮೀಣದಲ್ಲಿ ಮತ್ತಿಮಡು ಕಟ್ಟಿ ಹಾಕಲು ಕಾಂಗ್ರೆಸ್​ ಯತ್ನ: ಕುತೂಹಲ ಕೆರಳಿಸಿದ ಕೈ ಟಿಕೆಟ್​ ಹಂಚಿಕೆ

Last Updated : Apr 15, 2023, 1:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.